ಟಾಲಿವುಡ್ ನಲ್ಲಿ ನಟಿಸಿದ್ದು ಕೆಲವೇ ಸಿನೆಮಾಗಳಲ್ಲಾದರೂ ಸಹ ದೊಡ್ಡ ಮಟ್ಟದಲ್ಲೇ ಕ್ರೇಜ್ ದಕ್ಕಿಸಿಕೊಂಡ ನಟಿಯರಲ್ಲಿ ಮೆಹರೀನ್ ಸಹ ಒಬ್ಬರಾಗಿದ್ದಾರೆ. ಪಂಜಾಬ್ ಮೂಲದ ಈಕೆ ಮೊದಲಿಗೆ ಮಾಡಲಿಂಗ್ ಮೂಲಕ ತನ್ನ ಕೆರಿಯರ್ ಪ್ರಾರಂಭಿಸಿದರು. ಬಳಿಕ ಸಿನೆಮಾಗಳಲ್ಲಿ ಅನೇಕ ಅವಕಾಶಗಳನ್ನು ಗಿಟ್ಟಿಸಿಕೊಂಡು 2016 ರಲ್ಲಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಸದ್ಯ ತೆಲುಗು ಹಾಗೂ ತಮಿಳಿನಲ್ಲಿ ಬೇಡಿಕೆಯುಳ್ಳ ನಟಿಯಾಗಿದ್ದಾರೆ. ಇತ್ತೀಚಿಗಷ್ಟೆ ಈಕೆ ಎಫ್-3 ಎಂಬ ತೆಲುಗು ಸಿನೆಮಾ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಸದ್ಯ ಈಕೆ ವಿದೇಶಿ ಪ್ರವಾಸದಲ್ಲಿದ್ದು ಅಲ್ಲಿ ಆಕೆ ಹಂಚಿಕೊಂಡ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.
ಕಳೆದ 2016 ರಲ್ಲಿ ತೆಲುಗು ಯಂಗ್ ಹಿರೋ ನ್ಯಾಚುರಲ್ ಸ್ಟಾರ್ ನಾನಿ ಜೊತೆ ಕೃಷ್ಣಗಾಡಿ ವೀರ ಪ್ರೇಮ ಗಾಧ ಎಂಬ ಸಿನೆಮಾದ ಮೂಲಕ ಎಂಟ್ರಿಕೊಟ್ಟಿದ್ದರು. ಮೊದಲನೇ ಸಿನೆಮಾದ ಮೂಲಕವೇ ತನ್ನ ನಟನೆ ಹಾಗೂ ಗ್ಲಾಮರ್ ಮೂಲಕ ಎಲ್ಲರನ್ನೂ ಫಿದಾ ಮಾಡಿದ್ದರು. ಬಳಿಕ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ದಕ್ಕಿಸಿಕೊಂಡು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡರು. ಟಾಲಿವುಡ್ ಸಿನಿರಂಗದಲ್ಲಿ ಅನೇಕ ಸಿನೆಮಾಗಳನ್ನು ಮಾಡಿದರೂ ಸಹ ಆಕೆಗೆ ದೊಡ್ಡ ಬ್ರೇಕ್ ಸಿಕ್ಕಿರಲಿಲ್ಲ. ಆದರೆ ಅನೀಲ್ ರಾವಿಪೂಡಿ ನಿರ್ದೇಶನದಲ್ಲಿ ಮೂಡಿಬಂದ ಮಾಸ್ ಮಹಾರಾಜ ರವಿತೇಜ ನಾಯಕನಾಗಿ ನಟಿಸಿದ್ದ ರಾಜಾ ದಿ ಗ್ರೇಟ್ ಎಂಬ ಸಿನೆಮಾ ಮೆಹರೀನ್ ಗೆ ದೊಡ್ಡ ಬ್ರೇಕ್ ನೀಡಿತ್ತು ಎನ್ನಬಹುದು. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ರೆಸ್ಪಾನ್ಸ್ ತಂದುಕೊಟ್ಟಿದ್ದು, ಈ ಸಿನೆಮಾ ಆಕೆಗೆ ತುಂಬಾ ಸಕ್ಸಸ್ ತಂದುಕೊಟ್ಟ ಸಿನೆಮಾ ಎನ್ನಬಹುದಾಗಿದೆ.
ಬಳಿಕ ಆಕೆಗೆ ಎಫ್-2 ಎಂಬ ಸಿನೆಮಾ ಸಹ ದೊಡ್ಡ ಹಿಟ್ ನೀಡಿತ್ತು. ಇತ್ತೀಗಷ್ಟೆ ಈ ಸಿನೆಮಾದ ಸೀಕ್ವೆಲ್ ಸಹ ಎಫ್-3 ರೂಪದಲ್ಲಿ ತೆರೆಗೆ ಬಂದಿತ್ತು. ಈ ಸಿನೆಮಾ ಪಕ್ಕಾ ಕಾಮಿಡಿ ಎಂಟರ್ ಟ್ರೈನರ್ ಸಿನೆಮಾ ಆಗಿದ್ದು ಪ್ರೇಕ್ಷಕರನ್ನು ತುಂಬಾ ನಗಿಸಿದೆ. ಬಾಕ್ಸ್ ಆಫೀಸ್ ನಲ್ಲೂ ಸಹ ಎಫ್-3 ಸಿನೆಮಾ ಒಳ್ಳೆಯ ಕಲೆಕ್ಷನ್ ಮಾಡಿದೆ. ಸದ್ಯ ಮೆಹರೀನ್ ಎಫ್-3 ಸಕ್ಸಸ್ ಖುಷಿಯಲ್ಲಿ ವಿದೇಶಕ್ಕೆ ಹಾರಿದ್ದಾರೆ. ಪ್ಲೋರಿಡಾ ಎಂಬ ಪ್ರದೇಶದಲ್ಲಿ ಆಕೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿನ ವಾಟರ್ ಗೇಮ್ಸ್ ನಲ್ಲಿ ಆಕೆ ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಾ ಕೆಲವೊಂದುಪೊಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಬಿಕಿನಿ ಧರಿಸಿದ ಈಕೆಯ ದೇಹದ ಮೈಮಾಟಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಅಮೇರಿಕಾ ಪಶ್ಚಿಮ ತೀರದ ಪ್ಲೋರಿಡಾ ಎಂಬಲ್ಲಿ ಆಕೆ ತನ್ನ ಸಹೋದರ ಗುರ್ಫುತೆ ಜೊತೆ ಸಂತೋಷದಿಂದ ಪ್ರವಾಸವನ್ನು ಕಳೆಯುತ್ತಿದ್ದಾರೆ.
ಸೋಷಿಯಲ್ ಮಿಡಿಯಾದಲ್ಲಿ ಆಕೆ ಹಂಚಿಕೊಂಡ ಪೊಟೋಗಳ ಮೂಲಕ ಮತಷ್ಟು ಕ್ರೇಜ್ ದಕ್ಕಿಸಿಕೊಂಡಿದ್ದಾರೆ. ಸದಾ ಹೊಸ ಹಾಟ್ ಪೊಟೋಶೂಟ್ ಹಂಚಿಕೊಳ್ಳುವ ಜೊತೆಗೆ ತಮ್ಮ ವೈಯುಕ್ತಿಕ ವಿಚಾರಗಳ ಬಗ್ಗೆ ಸಹ ಸೋಷಿಯಲ್ ಮಿಡಿಯಾ ಮೂಲಕವೇ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ಮೆಹರೀನ್ ಹಂಚಿಕೊಂಡ ವಿದೇಶಿ ಪಿಕ್ ಗಳು ಎಲ್ಲರನ್ನು ಆಕರ್ಷಣೆ ಮಾಡಿದೆ. ಆಕೆಯ ಥಂಡರ್ ಥೈಸ್ ಪ್ರದರ್ಶನ ಮಾಡುತ್ತಾ, ಮೆಹರೀನ್ ತಮ್ಮ ಫ್ಯಾಮಿಲಿಯೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ. ಸದ್ಯ ಈ ಪೊಟೋಗಳು ಎಲ್ಲೆಡೆ ವೈರಲ್ ಆಗಿದೆ.
