Film News

ಮತ್ತೊಮ್ಮೆ ಚಿರು ಜೊತೆ ನಟಿಸಲಿದ್ದಾರೆ ನಟ ಶ್ರೀಕಾಂತ್!

ಹೈದರಾಬಾದ್: ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಶಂಕರ್‌ದಾದ ಎಂ.ಬಿ.ಬಿ.ಎಸ್ ಹಾಗೂ ಶಂಕರ್‌ದಾದಾ ಜಿಂದಾಬಾದ್ ಚಿತ್ರಗಳಲ್ಲಿ ಚಿರು ಜೊತೆ ಅಭಿನಯಿಸಿರುವ ನಟ ಶ್ರಿಕಾಂತ್ ಮತ್ತೊಮ್ಮೆ ಅಭಿನಯಿಸಲಿದ್ದಾರೆ ಎಂದು ತಿಳಿದು ಬಂದಿದೆ.

ನಟ ಶ್ರೀಕಾಂತ್ ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ನಟ ಬಾಲಕೃಷ್ಣ ಅಭಿನಯದ ಶ್ರೀರಾಮರಾಜ್ಯಂ, ನಟ ವಿಕ್ಟರಿ ವೆಂಕಟೇಶ್ ಅಭಿನಯದ ಸಂಕ್ರಾಂತಿ ಹಾಗೂ ಷಾಡೋ ಚಿತ್ರದಲ್ಲಿ, ನಾಗಾರ್‍ಜುನ ಅಭಿನಯದ ಷಿರಡಿ ಸಾಯಿಬಾಬ, ರಾಮ್ ಚರಣ್ ಅಭಿನಯದ ಗೋವಿಂದುಡು ಅಂದರಿವಾಡುಲೇ, ಅಲ್ಲುಅರ್ಜುನ್ ಅಭಿನಯದ ಸರೈನೋಡು ಚಿತ್ರದಲ್ಲಿ ಹಾಗೂ ನಾಗಚೈತನ್ಯ ಅಭಿನಯದ ಯುದ್ದಂ ಶರಣಂ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದು, ಇದೀಗ ಮೆಗಾಸ್ಟಾರ್ ಅಭಿನಯಿಸಲಿರುವ ಲೂಸಿಫರ್ ಚಿತ್ರದಲ್ಲಿ ಸಹ ನಟ ಶ್ರೀಕಾಂತ್ ನಟಿಸಲಿದ್ದಾರೆ ಎನ್ನಲಾಗಿದೆ.

ನಟ ಶ್ರೀಕಾಂತ್ ಫ್ಯಾಮಿಲಿ ಆಧಾರಿತ ಚಿತ್ರಗಳಲ್ಲಿ ನಟಿಸುವ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ನಂತರ ನೆಗಟೀವ್ ಪಾತ್ರಗಳಲ್ಲೂ ಸಹ ತಮ್ಮ ಛಾಪನ್ನು ಮೂಡಿಸಿಕೊಂಡಿದ್ದರು. ನಂತರ ಪುನಃ ನಾಯಕನಾಗಿ ನಟಿಸಲು ಆರಂಭಿಸಿದರು. ಅಷ್ಟೇ ಅಲ್ಲದೇ ಆಕ್ಷನ್ ಸಿನೆಮಾಗಳನ್ನು ಸಹ ಮಾಡಿದ್ದು, ಸ್ಟಾರ್ ನಟರ ಜೊತೆಗೆ ಪೋಷಕ ಪಾತ್ರದಲ್ಲೂ ಸಹ ನಟಿಸುತ್ತಿದ್ದಾರೆ. ಇದೀಗ ಮೆಗಾಸ್ಟಾರ್ ಚಿರಂಜೀವಿ ರವರೊಂದಿಗೆ ಮತ್ತೊಮ್ಮೆ ತೆರೆ ಹಂಚಿಕೊಳ್ಳಲಿದ್ದಾರೆ.

Trending

To Top