ಟಾಲಿವುಡ್ ನಲ್ಲಿ ಮತ್ತೊಂದು ಸ್ಟಾರ್ ಜೋಡಿಯ ದಾಂಪತ್ಯ ಜೀವನದಲ್ಲಿ ಬಿರುಕು, ಮತ್ತೆ ಒಂದಾಗಿದ್ದಾರೆಯೇ?

ಸಿನಿರಂಗದಲ್ಲಿ ಲವ್, ಮ್ಯಾರೇಜ್, ಬ್ರೇಕ್ ಅಪ್ ಯಾವಾಗ ಆಗುತ್ತೋ ಎಂಬುದು ಗೊತ್ತಾಗುವುದಿಲ್ಲ. ಎಲ್ಲವೂ ಸರಿಯಾಗಿ ಇರುವ ಸಮಯದಲ್ಲೇ ಜೋಡಿ ದೂರವಾಗುತ್ತಾರೆ. ಇದಕ್ಕೆ ಸಮಂತಾ ನಾಗಚೈತನ್ಯ ಜೋಡಿ ಸಹ ಒಂದಾಗಿದೆ. ಸಮಂತಾ ಹಾಗೂ ನಾಗಚೈತನ್ಯ ಟಾಲಿವುಡ್ ನಲ್ಲಿ ಕ್ಯೂಟ್ ಜೋಡಿ ಎಂದೇ ಕರೆಯಲಾಗುತ್ತಿತ್ತು. ಆದರೆ ಏನಾಯಿತು ಎಂದು ಇಂದಿಗೂ ಗೊತ್ತಿಲ್ಲ ಅವರು ಮದುವೆಯಾದ ಕೆಲವೇ ವರ್ಷಗಳಲ್ಲಿ ವಿಚ್ಚೇದನ ಪಡೆದುಕೊಂಡರು. ಇದೀಗ ಟಾಲಿವುಡ್ ನಲ್ಲಿ ಮತ್ತೊಂದು ಜೋಡಿಯ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಶೀಘ್ರದಲ್ಲೇ ಬೇರೆಯಾಗಲಿದ್ದಾರೆ ಎಂದು ಸುದ್ದಿಗಳು ಜೋರಾಗಿ ಹರಿದಾಡುತ್ತಿದೆ.  ಜೊತೆಗೆ ಇದೀಗ ಆ ಜೋಡಿ ಮತ್ತೆ ಒಂದಾಗಿದೆ ಎನ್ನಲಾಗುತ್ತಿದೆ.

ಆ ಜೋಡಿ ಬೇರೆ ಯಾರೂ ಅಲ್ಲ ಟಾಲಿವುಡ್ ಸ್ಟಾರ್‍ ನಟ ರಾಣಾ ದಗ್ಗುಬಾಟಿ ಹಾಗೂ ಮಿಹಿಕಾ ಬಜಾಜ್. ಈ ಜೋಡಿಯೇ ಇದೀಗ ಬೇರೆಯಾಗಲಿದ್ದಾರೆ ಎಂಬ ಸುದ್ದಿಗಳು ಟಾಲಿವುಡ್ ವಲಯದಲ್ಲಿ ಜೋರಾಗಿ ಹರಿದಾಡುತ್ತಿವೆ. ಇನ್ನೂ ರಾಣಾ ದಗ್ಗುಬಾಟಿ ಹಾಘು ಮಿಹಿಕಾ ಬಜಾಜ್ ರವರ ಮದುವೆಯಾಗಿ ಸುಮಾರು 2 ವರ್ಷ ತುಂಬಿದೆ. ಇದೀಗ ಈ ಜೋಡಿಯ ನಡುವೆ ಬಿರುಕು ಬಿಟ್ಟಿದೆ ಎನ್ನಲಾಗುತ್ತಿದೆ. ಆದರೆ ಈ ಕುರಿತು ರಾಣಾ ಆಗಲೀ ಅಥವಾ ಮಿಹಿಕಾ ಆಗಲಿ ಅಧಿಕೃತವಾಗಿ ಹೇಳಿಕೆ ಕೊಟ್ಟಿಲ್ಲವಾದರು. ಅವರ ಇತ್ತಿಚಿನ ಕೆಲವೊಂದು ಕೆಲಸಗಳು ಜೋಡಿ ಬೇರೆಯಾಗಲಿದ್ದಾರೆ ಎಂಬುದಕ್ಕೆ ಪುಷ್ಟಿ ನೀಡುವಂತಿದೆ. ಇತ್ತೀಚಿಗಷ್ಟೆ ಸೋಷಿಯಲ್ ಮಿಡಿಯಾದಿಂದ ಅವರ ಪೋಸ್ಟ್ ಗಳು ಡಿಲೀಟ್ ಆಗಿದೆ. ಜೊತೆಗೆ ಇಬ್ಬರೂ ಜಂಟಿಯಾಗಿ ಕಾಣಿಸಿಕೊಂಡ ಪೊಟೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ಶೇರ್‍ ಮಾಡುವುದನ್ನೆ ಬಿಟ್ಟಿದ್ದಾರೆ. ರಾಣಾ ಸಹ ತನ್ನ ಇನ್ಸ್ಟಾ ಖಾತೆಯಲ್ಲಿ ಪೊಟೋಗಳನ್ನು ಡಿಲೀಟ್ ಮಾಡಿದ್ದಾರೆ. ಇದರಿಂದಾಗಿ ಈ ಜೋಡಿ ಶೀಘ್ರದಲ್ಲೇ ಬೇರೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಮಿಹಿಕಾ ಇದೀಗ ಹಂಚಿಕೊಂಡ ಪೊಟೋಗಳು ಈ ರೂಮರ್‍ ಗೆ ಬ್ರೇಕ್ ಹಾಕಿದೆ ಎಂದೂ ಸಹ ಹೇಳಲಾಗುತ್ತಿದೆ.

ಇನ್ನೂ ರಾಣಾ ಪತ್ನಿ ಮಿಹಿಕಾ ಸೋಷಿಯಲ್ ಮಿಡಿಯಾದಲ್ಲಿ ತನ್ನ ಪತಿ ಜೊತೆಗಿರುವಂತಹ ಕೆಲವೊಂದು ರೊಮ್ಯಾಂಟಿಕ್ ಪೊಟೋಗಳನ್ನು ಹಂಚಿಕೊಂಡು ಬ್ರೇಕ್ ಅಪ್ ವದಂತಿಗೆ ಬ್ರೇಕ್ ಹಾಕಿದ್ದಾರೆ. ಇನ್ನೂ ಇಂದು ರಾಣಾ ಹಾಗೂ ಮಿಹಿಕಾ ರವರ ಎರಡನೇ ವರ್ಷದ ಮದುವೆ ವಾರ್ಷಿಕೋತ್ಸವ. ಕಳೆದ ಆಗಸ್ಟ್ 8, 2020 ರಂದು ರಾಣಾ ಮಿಹಿಕಾ ಮದುವೆಯಾದರು.  ಆದರೆ ಈ ಜೋಡಿಯ ಮದುವೆಯಾದ ಕೆಲವೇ ತಿಂಗಳಲ್ಲೇ ಇಬ್ಬರ ನಡುವೆ ವಿಭೇದಗಳು ಉಂಟಾಗಿದೆ ಎಂದು ಸುದ್ದಿಗಳು ಹರಿದಾಡಿತ್ತು. ಈ ಸುದ್ದಿ ಜೋರಾಗಿ ಹರಿದಾಡುತ್ತಿದ್ದರೂ ಸಹ ಈ ಜೋಡಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ ಇದೀಗ ಮಿಹಿಕಾ ಸೋಷಿಯಲ್ ಮಿಡಿಯಾದಲ್ಲಿ ರೊಮ್ಯಾಂಟಿಕ್ ಪೊಟೋಗಳನ್ನು ಹಂಚಿಕೊಳ್ಳುವ ಮೂಲಕ ಎಲ್ಲಾ ರೂಮರ್‍ ಗಳಿಗೂ ನಾಂದಿ ಹಾಡಿದ್ದಾರೆ.

ಸದ್ಯ ಮಿಹಿಕಾ ಹಾಗೂ ರಾಣಾ ಹಂಚಿಕೊಂಡ ರೊಮ್ಯಾಂಟಿಕ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಸದ್ದು ಮಾಡುತ್ತಿದೆ. ಇನ್ನೂ ಈ ಪೊಟೋಗಳಿಗೆ ಸಿನಿಮಾ ಗಣ್ಯರಿಂದ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ರಾಣಾ ಮಾತ್ರ ಯಾವುದೇ ಪೊಟೋಗಳನ್ನು ಶೇರ್‍ ಮಾಡಿಲ್ಲ. ಬದಲಿಗೆ ಇನ್ಸ್ಟಾಖಾತೆಯಲ್ಲಿನ ಎಲ್ಲಾ ಪೊಟೋಗಳನ್ನು ಡಿಲೀಟ್ ಮಾಡಿದ್ದಾರೆ. ಇದರಿಂದಾಗಿ ಈ ಜೋಡಿ ಬೇರೆಯಾಗಿದ್ದಾರಾ ಅಥವಾ ಒಂದಾಗಿದ್ದಾರಾ ಎಂಬ ಗೊಂದಲ ಸಹ ಸೃಷ್ಟಿಯಾಗಿದೆ. ಒಟ್ಟಿನಲ್ಲಿ ಈ ಜೋಡಿ ಒಂದಾಗಿ ನೂರು ಕಾಲ ಚೆನ್ನಾಗಿ ಬಾಳಲಿ ಎಂದು ಎಲ್ಲರೂ ಆಶಯ ವ್ಯಕ್ತಪಡಿಸಿದ್ದಾರೆ.

Previous articleತಣ್ಣಗಿರುವ ಸಮಯದಲ್ಲಿ ಬಿಸಿಯೇರಿಸಿದ ಚೆಂದುಳ್ಳಿ ಚೆಲುವೆ ನಿವೇತಾ, ಕಿಲ್ಲಿಂಗ್ ಪೋಸ್ ಕೊಟ್ಟ ನಟಿ…!
Next articleಬಾಲಿವುಡ್ ನಟಿಯರನ್ನೂ ಹಿಂದಿಕ್ಕಿದ ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ..!