ಗಾಳಿ ಸುದ್ದಿಗಳಿಗೆ ಖಡಕ್ ಉತ್ತರ ನೀಡಿದ ಟಾಲಿವುಡ್ ಹಿರೋ!

ಹೈದರಾಬಾದ್: ಸಿನಿರಂಗದಲ್ಲಿ ಹಲವು ಗೆಲುವು, ಹಲವು ಸೋಲುಗಳನ್ನು ಕಂಡ ಟಾಲಿವುಡ್ ಹಿರೋ ರಾಮ್ ಪೋತಿನೇನಿ ರವರ ವಿರುದ್ದ ಹಬ್ಬಿದ ಗಾಳಿ ಸುದ್ದಿಗಳಿಗೆ ಖಡಕ್ ಉತ್ತರ ನೀಡಿದ್ದಾರೆ.

ಅಂದಹಾಗೆ ರಾಮ್ ಪೋತುನೇನಿ ಈ ರೀತಿಯಲ್ಲಿ ಗರಂ ಆಗಲು ಕಾರಣ ಅವರ ವಿರುದ್ದ ಹರಡಿದ ಗಾಳಿ ಸುದ್ದಿ. ನಟ ರಾಮ್ ಪೋತುನೇನಿ ಗೆ ಸಿನೆಮಾಗಳು ಕಡಿಮೆ ಆಗಿವೆ. ರಾಮ್ ಮೇಲೆ ಬಂಡವಾಳ ಹಾಕಲು ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ ಎಂಬೆಲ್ಲಾ ಗಾಳಿ ಸುದ್ದಿಗಳು ಹರಿದಾಡುತ್ತಿದೆಯಂತೆ. ಈ ವಿಚಾರ ರಾಮ್ ರವರಿಗೆ ತಲುಪಿದ್ದು ಗಾಳಿ ಸುದ್ದಿ ಹಬ್ಬಸಿದವರಿಗೆ ಖಡಕ್ ಆಗಿ ಉತ್ತರ ನೀಡಿದ್ದಾರೆ.

ಟಾಲಿವುಡ್ ನ ರಾಮ್ ಪೋತುನೇನಿ ದೇವದಾಸ್ ಚಿತ್ರದ ಮೂಲಕ ಸಿನಿರಂಗಕ್ಕೆ ಎಂಟ್ರಿಕೊಟ್ಟದ್ದು, ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಹ್ಯಾಟ್ರಿಕ್ ಹಿಟ್ ಆಗಲಿ ಅಥವಾ ಸೂಪರ್ ಹಿಟ್ ಆಗಲಿ ಅವರ ಚಿತ್ರಗಳಿಗೆ ದೊರೆಯಲಿಲ್ಲ. ಇದೀಗ ಅವರ ವಿರುದ್ದ ಹಬ್ಬಿದ ಗಾಳಿ ಸುದ್ದಿಗೆ ಖಡಕ್ ಉತ್ತರ ನೀಡಿದ್ದಾರೆ. ನನ್ನ ಬಳಿ ಅನೇಕ ಸಿನೆಮಾಗಳಿವೆ, ನಾನು ಆತುರವಾಗಿ ಯಾವುದೇ ಸಿನೆಮಾ ಕತೆಗಳನ್ನು ಒಪ್ಪಿಕೊಳ್ಳುವುದಿಲ್ಲ. ಒಂದು ಕತೆಯ ಮೇಲೆ ಸಾಕಷ್ಟು ಯೋಚನೆ ಮಾಡಿ ಒಪ್ಪಿಕೊಳ್ಳುತ್ತೇನೆ. ನಿರಂತರವಾಗಿ ಸಿನೆಮಾಗಳನ್ನು ಮಾಡುವುದು ನನಗೆ ಇಷ್ಟವಿಲ್ಲ. ನನಗೆ ಚಿತ್ರದ ಕತೆ ಮುಖ್ಯವೇ ಹೊರತು ಹಣಕ್ಕಾಗಿ ನಾನು ಸಿನೆಮಾಗಳನ್ನು ಮಾಡುವುದಿಲ್ಲ. ನಾನು ಈಗಲೂ ಒಪ್ಪಿಗೆ ನೀಡಿದರೇ ಹತ್ತಾರು ಸಿನೆಮಾಗಳು ರೆಡಿಯಾಗಿವೆ ಎಂದು ಗಾಳಿ ಸುದ್ದಿ ಹಬ್ಬಿಸಿರುವವರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ರಾಮ್ ಪೋತುನೇನಿ ನಟಿಸಿರುವ ರೆಡ್ ಸಿನೆಮಾ ಬಿಡುಗಡೆಗೆ ಸಿದ್ದವಾಗಿದ್ದು, ಈ ಚಿತ್ರದ ಮೇಲೆ ರಾಮ್ ಭಾರಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಸಂಕ್ರಾಂತಿ ಹಬ್ಬದಂದು ಈ ಚಿತ್ರ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

Previous articleಫೈಟರ್ ಸಿನೆಮಾದಲ್ಲಿ ಒಂದಾಗಲಿದ್ದಾರೆ ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್
Next articleರಾಜಕೀಯ ಪ್ರವೇಶ ಮಾಡುವಂತೆ ಅಭಿಮಾನಿಗಳ ಒತ್ತಡ: ಒತ್ತಾಯಿಸಬೇಡಿ ಎಂದು ರಜನಿ ಮನವಿ