ತೆಲುಗು ಸಿನಿರಂಗದ ದೊಡ್ಡ ಕುಟುಂಬಗಳಲ್ಲಿ ಮೆಗಾ ಫ್ಯಾಮಿಲಿ ಸಹ ಒಂದಾಗಿದೆ. ರಾಮ್ ಚರಣ್ ಹಾಗೂ ಉಪಾಸನಾ ರವರಿಗೆ ಮದುವೆಯಾಗಿ ಅನೇಕ ವರ್ಷಗಳು ಕಳೆದಿದ್ದು, ಇನ್ನೂ ಮಕ್ಕಳನ್ನು ಪಡೆದುಕೊಂಡಿರಲಿಲ್ಲ. ಈ ಬಗ್ಗೆ ಅನೇಕ ಬಾರಿ ಈ ಜೋಡಿಗೆ ಪ್ರಶ್ನೆಗಳು ಎದುರಾಗಿತ್ತು. ಇದೀಗ ರಾಮ್ ಚರಣ್ ಹಾಗೂ ಉಪಾಸನಾ ತಂದೆ ತಾಯಿಯಾಗಲಿದ್ದಾರೆ. ಈ ವಿಚಾರವನ್ನು ಮೆಗಾಸ್ಟಾರ್ ಚಿರಂಜೀವಿ ಸ್ವತಃ ತಮ್ಮ ಟ್ವಿಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.
ನಟ ರಾಮ್ ಚರಣ್ ಹಾಗೂ ಉಪಾಸನಾ ತಂದೆತಾಯಿಯಾಗುತ್ತಿರುವ ಕುರಿತು ಮೆಗಾಸ್ಟಾರ್ ಚಿರಂಜೀವಿ ಟ್ವಿಟರ್ ವೇದಿಕೆಯ ಮೂಲಕ ತಿಳಿಸಿದ್ದಾರೆ. ಶ್ರೀ ಹನುಮಾನ್ ಜೀ ಆರ್ಶಿವಾದದೊಂದಿಗೆ ರಾಮ್ ಚರಣ್ ಉಪಾಸನಾ ತಮ್ಮ ಮೊದಲನೇ ಮಗುವಿಗೆ ಜನ್ಮ ನೀಡಲಿದ್ದಾರೆ. ಈ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ತುಂಬಾ ಸಂತೋಷ ವ್ಯಕ್ತಪಡಿಸುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೂ ಈ ಪ್ರಕಟಣೆಯನ್ನು ಕೊಣಿದೆಲಾ ಹಾಗೂ ಕಾಮಿನೇನಿ ಕುಟುಂಬಗಳ ವತಿಯಿಂದ ಅಧಿಕೃತವಾಗಿ ಪ್ರಕಟನೆ ಸಹ ನೀಡಲಾಗಿದೆ. ಇನ್ನೂ ಮುಂದಿನ ವರ್ಷ ಚಿರು ಕುಟುಂಬಕ್ಕೆ ತುಂಬಾ ವಿಶೇಷವಾಗಿರಲಿದೆ. ಇನ್ನೂ ಈ ಶುಭ ಸುದ್ದಿಯನ್ನು ಕೇವಲ ಅವರ ಕುಟುಂಬಕ್ಕೆ ಮಾತ್ರವಲ್ಲದೇ ಮೆಗಾ ಫ್ಯಾನ್ಸ್ ಗೂ ಸಹ ಸಂತೋಷ ತಂದಿದೆ. ಇನ್ನೂ ಅನೇಕ ವರ್ಷಗಳಿಂದ ರಾಮ್ ಚರಣ್ ಹಾಗೂ ಉಪಾಸನಾ ದಂಪತಿ ಯಾವಾಗ ತಂದೆತಾಯಿ ಆಗೋದು ಎಂಬ ಚರ್ಚೆಗಳು ಕೇಳಿಬರುತ್ತಿತ್ತು. ಇದೀಗ ಕೊನೆಗೂ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಇನ್ನೂ ರಾಮ್ ಚರಣ್ ಹಾಗೂ ಉಪಾಸನಾ ಪ್ರೀತಿಸಿ ಮದುವೆಯಾದರು. ಪ್ರೀತಿಸಿ ಬಳಿಕ ಪೋಷಕರ ಒಪ್ಪಿಸಿ ಮದುವೆಯಾದರು. ಕಳೆದ 2011 ರಲ್ಲಿ ಡಿಸೆಂಬರ್ ಮಾಹೆಯಲ್ಲಿ ನಿಶ್ಚಿತಾರ್ಥ ನಡೆದಿದ್ದು, 2012 ಜೂನ್ 14 ರಂದು ಅದ್ದೂರಿಯಾಗಿ ಮದುವೆಯಾಗಿತ್ತು. ಅಂದಿನಿಂದ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಾ ಟಾಲಿವುಡ್ ನಲ್ಲಿ ಬೆಸ್ಟ್ ಕಪಲ್ಸ್ ಆಗಿದ್ದಾರೆ. ಇನ್ನೂ ಇತ್ತೀಚಿಗಷ್ಟೆ ಈ ಜೋಡಿ ಅವರ 10ನೇ ವರ್ಷ ವಾರ್ಷಿಕೋತ್ಸವವನ್ನು ಇಟಲಿಯಲ್ಲಿ ಸಂಭ್ರಮದಿಂದ ಆಚರಿಸಿಕೊಂಡರು. ಆ ಸಮಯದಲ್ಲಿ ಅವರ ಸ್ಪೇಷಲ್ ಮೂಮೆಂಟ್ಸ್ ಕೆಲವನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಆ ಪೊಟೋಗಳೂ ಸಹ ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ರಾಮ್ ಚರಣ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದರೇ, ಉಪಾಸನಾ ಅಪೋಲೋ ಆಸ್ಪತ್ರೆಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಾ ಅನೇಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಹ ಭಾಗಿಯಾಗುತ್ತಿರುತ್ತಾರೆ.
ಇನ್ನೂ ರಾಮ್ ಚರಣ್ ರವರು RRR ಸಿನೆಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಇದೀಗ ಖ್ಯಾತ ನಿರ್ದೇಶಕ ಶಂಕರ್ ಸಾರಥ್ಯದಲ್ಲಿ RC15 ಟೈಟಲ್ ನಡಿ ಸಿನೆಮಾ ಮಾಡುತ್ತಿದ್ದಾರೆ. ಈ ಸಿನೆಮಾ ಆಕ್ಷನ್ ಥ್ರಿಲ್ಲರ್ ಸಿನೆಮಾ ಆಗಿದ್ದು, ಟಾಲಿವುಡ್ ನಿರ್ಮಾಪಕ ದಿಲ್ ರಾಜು ಬಂಡವಾಳ ಹೂಡಿದ್ದಾರೆ. ಇನ್ನೂ ಈ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ. ಮುಂದಿನ ವರ್ಷ ಈ ಸಿನೆಮಾ ತೆರೆಕಾಣಬಹುದು ಎನ್ನಲಾಗುತ್ತಿದೆ.