Film News

ಟಾಲಿವುಡ್ ಖ್ಯಾತ ಖಳನಟ ನರ್ಸಿಂಗ್ ಯಾದವ್ ನಿಧನ

ಹೈದರಾಬಾದ್: ಟಾಲಿವುಡ್ ನ ಖ್ಯಾತ ಕಲಾವಿದ ಅನೇಕ ಸಿನೆಮಾಗಳಲ್ಲಿ ಖಳನಟ ಅಭಿನಯಿಸಿದ್ದ ನರ್ಸಿಂಗ್ ಯಾದವ್ ಅನಾರೋಗ್ಯದ ನಿಮಿತ್ತ ಹೈದರಬಾದ್‌ನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

52 ವರ್ಷದ ನರ್ಸಿಂಗ್ ಯಾದವ್ ಅನೇಕ ಸಿನೆಮಾಗಳಲ್ಲಿ ಹಾಸ್ಯ ಹಾಗೂ ಖಳನಟನಾಗಿ ಮಿಂಚಿದ್ದಾರೆ. ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ನರ್ಸಿಂಗ್ ರವರನ್ನು ಸೋಮಾಜಿಗೂಡದಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ನರ್ಸಿಂಗ್ ರವರು ಹೇಮಹೆಮಿಲು ಚಿತ್ರದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದು, ತೆಲುಗು, ತಮಿಳು, ಹಿಂದಿ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದರು. ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ರವರ ಮೊಮೆಂಟ್ ಚಿತ್ರದ ಮೂಲಕ ಇನಷ್ಟು ಖ್ಯಾತಿಗೆ ಪಾತ್ರರಾದರು ನರ್ಸಿಂಗ್ ರವರು. ಈ ಹಿಂದೆ ಸಂದರ್ಶನವೊಂದರಲ್ಲಿ ನಾನು ನಟನೆ ಹೇಗೆ ಮಾಡಬೇಕೆಂಬುದನ್ನು ರಾಮ್ ಗೋಪಾಲ್ ವರ್ಮ ರವರಿಂದ ಕಲಿತೆ ಎಂದು ಹೇಳಿದ್ದರು. ಇನ್ನೂ ನರ್ಸಿಂಗ್ ಯಾದವ್ ರವರು, ಮುಠಾಮೇಸ್ತ್ರಿ, ಮಾಸ್ಟರ್, ಇಡಿಯಟ್, ಜಾನಿ, ಪೋಕಿರಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದು, ಕೊನೆಯದಾಗಿ ಮೆಗಾಸ್ಟಾರ್ ರವರ 150ನೇ ಸಿನೆಮಾ ಖೈದಿ ನಂ 150 ಚಿತ್ರದಲ್ಲಿ ಅಭಿನಯಿಸಿದ್ದರು.

Trending

To Top