ನಮ್ಮ ಕನ್ನಡದ ಸೂಪರ್ ಸ್ಟಾರ್ ಗಳಿಗೆ ಸಿಕ್ಕ ಹೊಸ ಬಿರುದು ಗಳು ಏನು ಗೊತ್ತ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

title1
title1

ನಮ್ಮ ಕನ್ನಡ ರಂಗದ ಹೀರೋ ಗಳಿಗೆ ಅಭಿಮಾನಿ ದೇವರುಗಳು ಈಗಾಗಲೇ ಕೊಟ್ಟಿರುವ ಬಿರುದುಗಳು ಕಡಿಮೆ ಏನು ಇಲ್ಲ.
ಆದರೆ ಅವರಿಗೆ ಇನ್ನೂ ಹೆಚ್ಚು ಖುಷಿ ಕೊಡುವ ವಿಚಾರ ಏನಂದರೆ ಅವರ ಮೆಚ್ಚಿನ ಹೀರೋ ಗಳಿಗೆ ಹೊಸ ಹೊಸ ಬಿರುದುಗಳನ್ನು ಕೊಡುವುದು ಇತ್ತೀಚೆಗೆ ಚಂದನವನದ ಸ್ಟಾರ್‌ ನಟರಾದ ದರ್ಶನ್‌, ಸುದೀಪ್‌, ಪುನೀತ್‌ ರಾಜ್‌ಕುಮಾರ್‌ ಮತ್ತು ಶಿವರಾಜ್ ಕುಮಾರ್ ರವರಿಗೆ ಇತ್ತೀಚೆಗೆ ಹೊಸ ಬಿರುದುಗಳು ಬರುತ್ತಿರುವುದು ವಿಶೇಷ.
ನಟ ದರ್ಶನ್‌ ರವರಿಗೆ ‘ಕರುನಾಡ ಕಲಾ ಕುಲತಿಲಕ’ ಎಂಬ ಬಿರುದು ದೊರಕಿದೆ: ದರ್ಶನ್‌ ರವರು ಇತ್ತೀಚೆಗೆ ಕತಾರ್‌ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ದರ್ಶನ್ ಅವರಿಗೆ ‘ಕರುನಾಡ ಕಲಾ ಕುಲತಿಲಕ’ ಎಂದು ಬಿರುದನ್ನು ನೀಡಿ ಸನ್ಮಾನಿಸಲಾಯಿತು. ದರ್ಶನ್‌ ರವರು ಅದನ್ನು ಖುಷಿಯಿಂದಲೇ ಸ್ವೀಕರಿಸಿದರು. ಸನ್ಮಾನಿಸಲಾದ ಕೆಲವೊಂದು ಫೋಟೋಗಳ ನೋಡಿ ಅವರ ಅಭಿಮಾನಿಗಳು, ನಮ್ಮ ನೆಚ್ಚಿನ ನಟ ಇನ್ನು ಮುಂದೆ ಕರುನಾಡ ಕಲಾ ಕುಲತಿಲಕ ಎಂದು ಕರೆದಿದ್ದಾರೆ. ಸದಾ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಯಜಮಾನ ಚಿತ್ರದ ಶೂಟಿಂಗ್ ನಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಇತ್ತೀಚಿಗೆ ಅಂಬಿ ನಿಧನದ ಸುದ್ದಿ ಕೇಳಿ ಸ್ವೀಡನ್ ದೇಶದಿಂದ ಯಜಮಾನ ಶೂಟಿಂಗ್ ಅರ್ಧದಲ್ಲಿ ಸ್ಟಾಪ್ ಮಾಡಿ ಬೆಂಗಳೂರಿಗೆ ಬಂದರು. ಈಗ ಅಂಬಿ ಅವರ ಎಲ್ಲಾ ಕಾರ್ಯಗಳು ಮುಗಿದ ಮೇಲೆ ಇದೆ ವಾರ ಮತ್ತೆ ಸ್ವೀಡನ್ ದೇಶಕ್ಕೆ ವಾಪಾಸ್ ಹೊಗಳಿದ್ದಾರೆ.

ಕಿಚ್ಚನಿಗೆ ಬಯಸದೆ ಬಂತು ‘ ಬಾದ್ ಶಾ’ ಎಂಬ ಬಿರುದು : ಕಿಚ್ಚ ಸುದೀಪ್‌ ಅವರ ಹೊಸ ಸಿನಿಮಾ ಪೈಲ್ವಾನ್‌. ಸಿನಿಮಾದ ಪಾತ್ರಕ್ಕಾಗಿ ಸಾಕಷ್ಟು ತಯಾರಿ, ಕಸರತ್ತು ಮಾಡುತ್ತ ಬರುತ್ತಿದ್ದಾರೆ. ಕಿಚ್ಚ ಅವರಿಗೆ ಪೈಲ್ವಾನ್‌ ಚಿತ್ರತಂಡವೂ ಮತ್ತು ಕಿಚ್ಚನ ಅಭಿಮಾನಿಗಳು ಸುದೀಪ್ ಅವರಿಗೆ ‘ಬಾದ್‌ಶಾ’ ಎಂಬ ಬಿರುದನ್ನು ನೀಡಿದ್ದಾರೆ. ಇತ್ತೀಚಿಗೆ ಕಿಚ್ಚ ಸುದೀಪ್ ಅವರು ದಿ ವಿಲನ್ ಚಿತ್ರದಲ್ಲಿ ನಟಿಸಿದ್ದರು. ಚಿತ್ರ ಬಿಡುಗಡೆ ಆಗಿ ಎಲ್ಲೆಡೆ ಒಳ್ಳೆಯ ಪ್ರದರ್ಶನ ಕಾಣಿತು. ಸದ್ಯ ಸುದೀಪ್ ಅವರು ತಮ್ಮ ಹೊಸ ಚಿತ್ರ ಪೈಲ್ವಾನ್ ಅಲ್ಲಿ ಬ್ಯುಸಿ ಆಗಿದ್ದಾರೆ. ಚಿತ್ರದ ಶೂಟಿಂಗ್ ಮುಗಿದಿದೆ ಇನ್ನೇನು ಬಿಡುಗಡೆಗೆ ರೆಡಿ ಆಗಿದೆ.

ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಸಪಡಿಸಿಕೊಂಡ ಬಿರುದು ‘ರಾಜರತ್ನ’: ಈ ವರ್ಷ ತರೆಕಂಡಂತಹ ಅವರ ರಾಜ್‌ಕುಮಾರ ಸಿನಿಮಾದಲ್ಲಿ ‘ರಾಜರತ್ನ’ ಎಂದು ಕರೆಯಲ್ಪಟ್ಟಿತು. ಮತ್ತು ಆ ಹೆಸರಿನಲ್ಲಿ ಅವರನ್ನು ಕರೆಯುತ್ತಿದ್ದರು ಹಾಗು ಈಗ ರಾಜಕುಮಾರ ಸಿನಿಮಾವನ್ನು ನಿರ್ದೇಶಿದ್ದ ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಅವರ ಮತ್ತೊಂದು ಚಿತ್ರ ಇದರಲ್ಲಿ ಪುನೀತ್ ರಾಜಕುಮಾರ್ ನಟಿಸುತ್ತಿದ್ದು ಹೊಸ ಚಿತ್ರದ ಹೆಸರು ‘ಯುವ ರತ್ನ’ ಎಂದು ಇರುವುದರಿಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ಈ ಬಿರುದು ಸೂಕ್ತವಾಗಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಸದ್ಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಪವನ್ ವಡೆಯರ್ ನಿರ್ದೇಶನದ ನಟ ಸಾರ್ವಭೌಮ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಚಿತ್ರದ ಶೂಟಿಂಗ್ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಈ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಜೊತೆ ರಚಿತಾ ರಾಮ್ ಅವರು ನಟಿಸಿದ್ದಾರೆ.

ಭರತ ಚಕ್ರವರ್ತಿ’ ಯಾದ ಶಿವಣ್ಣ : ಸರಳ ಜೀವಿಯಾದ ಶಿವಣ್ಣ ಅವರಿಗೆ ಅಂದರೆ ಶಿವರಾಜ್‌ಕುಮಾರ್‌ ಅವರಿಗೆ  ಹೊಸ ಬಿರುದೊಂದು ಬಂದಿದ್ದು ಆ ಬಿರುದೇ ‘ಭರತಚಕ್ರವರ್ತಿ’ ಎಂದು, ಟಗರು ಚಿತ್ರದ ಯಶಸ್ಸಿನ ನಂತರ ಟಗರು ನಿರ್ಮಾಪಕ ಶ್ರೀಕಾಂತ್‌ ಮತ್ತು ಅಭಿಮಾನಿಗಳೂ ಅವರಿಗೆ ಈ ಬಿರುದು ಕೊಟ್ಟಿದ್ದಾರೆ. ಅದಲ್ಲದೆ ಇತ್ತೀಚೆಗೆ ಅವರು ಆಸ್ಪ್ರೇಲಿಯಾಗೆ ಹೋದಾಗ ಅಲ್ಲಿ ‘ಮುಂಬಾ ಸ್ಟಾರ್‌’ ಎಂದು ಬಿರುದನ್ನು ನೀಡಿ ಗೌರವಿಸಲಾಗಿತ್ತು. ಶಿವಣ್ಣ ಅವರು ಸದ್ಯ ಅವರ ಹೊಸ ಚಿತ್ರ ಕವಚ ಚಿತ್ರದಲ್ಲಿ ಬಹಳ ಬ್ಯುಸಿ ಇದ್ದಾರೆ. ಈ ಚಿತ್ರದಲ್ಲಿ ಶಿವಣ್ಣ ಅವರು ಒಬ್ಬ ಕುರುಡನ ಪಾತ್ರವನ್ನು ಮಾಡಿದ್ದಾರೆ. ಈ ಚಿತ್ರ ಇದೆ ವರ್ಷ ಡಿಸೆಂಬರ್ ತಿಂಗಳಲ್ಲಿ ತೆರೆಕಾಣಲಿದೆ.

Previous article(video)ಇವರೆಲ್ಲ ಬರಿ ವಿಷ್ಣು ಹೆಸರು ಹೇಳ್ಕೊಂಡು ದುಡ್ ಮಾಡ್ಕೊಂಡ್ರು! ಅಂತ ಭಾರತಿ ಹೇಳಿದ್ದು ಯಾರಿಗೆ ಗೊತ್ತ
Next articleವಿಷ್ಣುದಾದಾ ಸ್ಮಾರಕಕ್ಕೆ ಭೂಮಿ ನೀಡಲು ಮುಂದಾದ ಅಭಿಮಾನಿ! ಹೆಮ್ಮೆಯಿಂದ ಶೇರ್ ಮಾಡಿರಿ