News

ದಿ ವಿಲನ್ ಚಿತ್ರದ EXCLUSIVE ರಿವ್ಯೂ! ಚಿತ್ರ ಹೇಗಿದೆ ಗೊತ್ತ! ಚಿತ್ರದಲ್ಲಿ ವಿಲನ್ ಯಾರು ಗೊತ್ತ!

the-villain-review

ದಿ ವಿಲನ್ ಚಿತ್ರದ ಎಕ್ಸ್ಕ್ಲೂಸಿವ್ ರಿವ್ಯೂ! ಮೊಟ್ಟ ಮೊದಲ ರಿವ್ಯೂ ನಮ್ಮಲ್ಲಿ ಮಾತ್ರ! ಶೇರ್ ಮಾಡಿ
ಜೋಗಿ ಪ್ರೇಮ್ ನಿರ್ದೇಶನ ದಿ ವಿಲನ್ ಚಿತ್ರ ಇಂದು ಎಲ್ಲೆಡೆ ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸತತ ಎರಡು ವರ್ಷಗಳಿಂದ ಪ್ರೇಮ್ ಹಾಗು ತಂಡ ಈ ಚಿತ್ರಕ್ಕೆ ಕಷ್ಟ ಪಟ್ಟು ದುಡಿದಿದ್ದಾರೆ. ಚಿತ್ರಕ್ಕೆ ಪ್ರೇಕ್ಷಕ ಪ್ರಭುಗಳು ಫುಲ್ ಡಿಲ್ ಕುಶ್ ಆಗಿದ್ದಾರೆ. ದಿ ವಿಲನ್ ಚಿತ್ರಕ್ಕೆ ಒಂದು ವಾರದ ಹಿಂದೆಯೇ ಟಿಕೆಟ್ ಕೊಡುವುದನ್ನು ಶುರು ಮಾಡಿದ್ದರು.

ನಿರ್ದೇಶಕ ಜೋಗಿ ಪ್ರೇಮ್ ಅವರು ಕರುನಾಡ ಚಕ್ರವರ್ತಿ ಶಿವಣ್ಣ ಹಾಗು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು ಸಮ ತೂಕದಲ್ಲಿ ಸಿನಿಮಾದಲ್ಲಿ ತೋರಿಸಿದ್ದಾರೆ. ಇಬ್ಬರು ಸೂಪರ್ ಸ್ಟಾರ್ಸ್ ಗಳಿಗೆ ಸಮತಟ್ಟವಾದ ಡೈಲಾಗ್ ಗಳು, ಫೈಟ್ ಗಳು, ಎಮೋಷನ್ ಗಳು ಹಾಗು ಕಥೆಯನ್ನು ಕೊಟ್ಟಿದ್ದಾರೆ. ದಿ ವಿಲನ್ ಚಿತ್ರನೋಡಿದ್ರೇ ನಿಮಗೆ ಈ ಚಿತ್ರದಲ್ಲಿ ಸುದೀಪ್ ಹಾಗು ಶಿವಣ್ಣ ಇಬ್ಬರು ಹೀರೋಗಳು ಎಂದು ಅನಿಸುತ್ತೆ. ಇದರಲ್ಲಿ ಯಾರು ಕೂಡ ವಿಲ್ಲನ್ ಅಲ್ಲ!

ಶಿವಣ್ಣ ಅವರು ಪಕ್ಕ ಲೋಕಲ್ ಪಾತ್ರ ಹಾಗು ಪಕ್ಕ ಕ್ಲಾಸ್ ಪಾತ್ರ ಕೂಡ ಮಾಡಿದ್ದಾರೆ. ಶಿವಣ್ಣ ಅವರ ಪರ್ಫಾರ್ಮೆನ್ಸ್ ಬಗ್ಗೆ ಮಾತಾಡೋ ಹಾಗೆ ಇಲ್ಲ ಕಣ್ರೀ. ಪ್ರತಿಯೊಂದು ಸೀನಲ್ಲಿ ಕೂಡ ಶಿವಣ್ಣ ಅಭೂತ ನಟನೆ ಮಾಡಿದ್ದಾರೆ. ಶಿವಣ್ಣ ಲಾಂಗ್ ಹಿಡಿಯುವ ಸೀನ್ ಬಂದಾಗ ಅಭಿಮಾನಿಗಳು ಹುಚ್ಚೆದ್ದು ಕುಣಿಯುವುದು ಪಕ್ಕ!

ಇನ್ನು ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ನಟನೆ ಬಗ್ಗೆ ದೂಸರಾ ಮಾತ್ ಇಲ್ಲ! ಕಿಚ್ಚ ಸುದೀಪ್ ಅವರು ಪಕ್ಕಾ ಕ್ಲಾಸ್ ಪಾತ್ರವನ್ನು ದಿ ವಿಲನ್ ಚಿತ್ರದಲ್ಲಿ ಮಾಡಿದ್ದಾರೆ. ಇನ್ನು ಹೆರೋಯಿನ್ ಅಮಿ ಜ್ಯಾಕ್ಸನ್ ಪರ್ಫಾರ್ಮೆನ್ಸ್ ಅಷ್ಟು ಹೇಳಿಕೊಳ್ಳುವಷ್ಟು ಇಲ್ಲ! ಅವರು ಡೈಲಾಗ್ ಗಳು , ಮಾತುಗಳು ಬಹಳ ನಾಟಕೀಯವಾಗಿ ಮೂಡಿ ಬಂದಿದೆ ಎಂಬುದು ಒಂದು ಬೇಸರದ ಸಂಗತಿ.

ದಿ ವಿಲನ್ ಚಿತ್ರದ ಹಾಡುಗಳು ಒಂದರಕಿಂತ ಒಂದು ಅದ್ಭುತ. ಅರ್ಜುನ್ ಜನ್ಯ ಅವರು ಬಹಳ ಅದ್ಭುತ ವಾದ ಹಾಡುಗಳನ್ನು ಹಾಗು ಬ್ಯಾಕ್ಗ್ರೌಂಡ್ ಸ್ಕೋರ್ ಕೊಟ್ಟಿದ್ದಾರೆ. ಇಡೀ ಚಿತ್ರದಲ್ಲಿ ಮ್ಯೂಸಿಕ್ ಬಹಳ ಚನ್ನಾಗಿ ಮೂಡಿ ಬಂದಿದೆ.

ದಿ ವಿಲನ್ ಚಿತ್ರ ಸುಮಾರು 3 ಗಂಟೆ ಇದ್ದು, ಕೆಲವೊಂದು ಕಡೆ ಸ್ವಲ್ಪ LAG ಅನಿಸುತ್ತೆ. ಅದು ಬಿಟ್ಟರೆ ಇಡೀ ಚಿತ್ರವನ್ನು ಎಂಜಾಯ್ ಮಾಡಿಕೊಂಡು ನೋಡಬಹುದು. ಶಿವಣ್ಣ ಹಾಗು ಸುದೀಪ್ ಅಭಿಮಾನಿಗಳಿಗೆ ಇದೊಂದು ಹಬ್ಬ ಎಂದೇ ಹೇಳಬಹುದು.

Click to comment

You must be logged in to post a comment Login

Leave a Reply

Trending

To Top