Film News

ದಿ ಫ್ಯಾಮಿಲಿ ಮ್ಯಾನ್-೨ ಬಿಡುಗಡೆ ಡೇಟ್ ಅನೌನ್ಸ್!

ಹೈದರಾಬಾದ್: ಈಗಾಗಲೇ ಕೇವಲ ಚಲನಚಿತ್ರಗಳಲ್ಲಿ ಮಾತ್ರವಲ್ಲದೇ ಅನೇಕ ಷೋಗಳಲ್ಲಿಯೂ ತಮ್ಮ ಸಾಮರ್ಥ್ಯ ತೋರಿಸಿದ ಸಮಂತಾ ಇದೀಗ ವೆಬ್ ಸರಣಿಯಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದು, ಹಿಂದಿ ಭಾಷೆಯ ದಿ ಫ್ಯಾಮಿಲಿ ಮ್ಯಾನ್ ೨ ನಲ್ಲಿ ಪವರ್ ಪುಲ್ ಪಾತ್ರದಲ್ಲಿ ನಡಿಸಿದ್ದಾರೆ.

ಇನ್ನೂ ದಿ ಫ್ಯಾಮಿಲಿ ಮ್ಯಾನ್ ಸೀಸನ್ ೨ ವೆಬ್ ಸರಣಿಯು ಫೆಬ್ರವರಿ ೧೨ ರಿಂದ ಅಮೇಜಾನ್ ಪ್ರೈಂ ನಲ್ಲಿ ಬಿಡುಗಡೆಯಾಗಲಿದೆಯಂತೆ. ಈಗಾಗಲೇ ಫ್ಯಾಮಿಲಿ ಮ್ಯಾನ್ ಸೀಸನ್ ೧ ಭಾರಿ ಹಿಟ್ ಹೊಡೆದಿದ್ದು, ಸೀಸನ್ ೨ ಸಹ ಭಾರಿ ಪ್ರಮಾಣದಲ್ಲಿ ಹಿಟ್ ಹೊಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ದಿ ಫ್ಯಾಮಿಲಿ ಮ್ಯಾನ್ ಸೀಸನ್ ೨ ವೆಬ್ ಸರಣಿಯಲ್ಲಿ ಪ್ರಿಯಮಣಿ, ಮನೋಜ್ ಬಾಜಪೇಯಿ, ಶರೀಬ್, ಹಶೀಮ್, ಸಮಂತಾ ಸೇರಿದಂತೆ ಇನ್ನೂ ಅನೇಕ ಖ್ಯಾತ ಕಲಾವಿದರು ನಟಿಸಿದ್ದಾರೆ. ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಸಮಂತಾ ನಟಿಸಲಿದ್ದು, ಫ್ಯಾಮಿಲಿ ಮ್ಯಾನ್ ಪಾತ್ರ ಯಾರು ಪೋಷಿಸಲಿದ್ದಾರೆ ಎಂಬುದರ ಬಗ್ಗೆ ಸಮಂತಾ ಸಹ ಕೂತೂಹಲ ಹೊಂದಿದ್ದಾರಂತೆ.

ಈ ಹಿಂದೆ ಸಮಂತಾ ತೆಲುಗು ಬಿಗ್ ಬಾಸ್ ಸೀಸನ್ ೪ನ ಕೆಲ ಎಪಿಸೋಡ್ ಗಳನ್ನು ಸಹ ನಿರೂಪಣೆ ಮಾಡಿದ್ದು, ಇದೀಗ ಆಹಾ ಒಟಿಟಿ ಯಲ್ಲಿ ಸ್ಯಾಮ್ ಜ್ಯಾಮ್ ಹೆಸರಿನ ಷೋ ಭಾರಿ ಪ್ಯಾಪುಲರ್ ಆಗಿದೆ.

Trending

To Top