ಅಲ್ಲು ಅರ್ಜುನ್ ಪುಷ್ಪ ಚಿತ್ರದಲ್ಲಿ ಈ ಸೀನ್ ಹೈಲೈಟ್ ಆಗಲಿದೆ!

ಹೈದರಾಬಾದ್: ತೆಲುಗು ಸಿನಿರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಪುಷ್ಪ ಚಿತ್ರ ಈಗಾಗಲೇ ವಿಭಿನ್ನ ಪೋಸ್ಟರ್‌ಗಳ ಮೂಲಕ ಅಭಿಮಾನಿಗಳನ್ನು ಫಿದಾ ಮಾಡಿದೆ. ಇದೀಗ ಬೆಟ್ಟದ ಮೇಲೆ 500 ಕಲಾವಿದರೊಂದಿಗೆ ತೆಗೆಯುವ ಸೀನ್ ಚಿತ್ರಕ್ಕೆ ಹೈಲೈಟ್ ಆಗಲಿದೆ ಎನ್ನಲಾಗುತ್ತಿದೆ.

ಬ್ರಿಲಿಯೆಂಟ್ ನಿರ್ದೇಶನ ಸುಕುಮಾರ್ ಪುಷ್ಪ ಚಿತ್ರವನ್ನು ಬಹಳಷ್ಟು ಶ್ರಮಪಟ್ಟು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿನ ಯಾವುದೇ ಚಿಕ್ಕ ಸನ್ನಿವೇಶ ಕೂಡ ದೊಡ್ಡ ಮಟ್ಟದಲ್ಲಿರುವಂತೆ ನೋಡಿಕೊಳ್ಳುತ್ತಿದ್ದಾರೆ. ಇದರ ಭಾಗವಾಗಿಯೇ ಪುಷ್ಪ ಚಿತ್ರದಲ್ಲಿನ ಒಂದು ಸನ್ನಿವೇಶ ಬೆಟ್ಟ ಮೇಲೆ ಚಿತ್ರೀಕರಿಸಲಾಗುತ್ತಿದೆ. 500 ಮಂದಿ ಬೆಟ್ಟದ ಮೇಲಿದ್ದು, ಬೆಟ್ಟದ ಕೆಳಗಿನಿಂದ ಶೂಟಿಂಗ್ ಮಾಡಲಾಗಿದೆಯಂತೆ. ಇನ್ನೂ ಈ ಬೆಟ್ಟಕ್ಕೆ ರಸ್ತೆಯಿಲ್ಲದ ಕಾರಣ 500 ಮಂದಿಯನ್ನು ಬೆಟ್ಟದ ಮೇಲೆ ಕಳುಹಿಸಲು ಸಾಕಷ್ಟು ಶ್ರಮ ವಹಿಸಿದ್ದಾರೆ ಸುಕುಮಾರ್. ಬೆಟ್ಟಕ್ಕೆ ಸಣ್ಣ ರಸ್ತೆಯನ್ನು ಸಹ ನಿರ್ಮಾಣ ಮಾಡಿದ್ದಾರಂತೆ. ಇನ್ನೂ ಈ ದೃಶ್ಯ ಕಂಡ ನಿರ್ಮಾಪಕರು ತುಂಬಾ ಖುಷಿ ಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಪುಷ್ಪ ಚಿತ್ರದ ಮತ್ತೊಂದು ಇಂಟರೆಸ್ಟಿಂಗ್ ವಿಚಾರವೆಂದರೇ ಚಿತ್ರದ ವಿಲನ್ ಪಾತ್ರದ ಕುರಿತು. ಪುಷ್ಪ ಚಿತ್ರಕ್ಕೆ ತಕ್ಕಂತೆ ವಿಲನ್ ಸಹ ಚಿತ್ರದಲ್ಲಿರಲು ಸುಕುಮಾರ್ ಅನೇಕ ಕಲಾವಿದರನ್ನು ಭೇಟಿಯಾಗಿದ್ದರಂತೆ. ಈ ಹಿಂದೆ ವಿಲನ್ ರೋಲ್ ಪಾತ್ರಕ್ಕಾಗಿ ತಮಿಳು ನಟ ಆರ್‍ಯ, ಶಿಂಬು, ವಿಜಯ್ ಸೇತುಪತಿ ನಟಿಸಲಿದ್ದಾರೆ ಎನ್ನುವ ಸುದ್ದಿ ಸಹ ಇತ್ತು. ಆದರೆ ಈ ಚಿತ್ರದಲ್ಲಿ ವಿಲನ್ ಪಾತ್ರವನ್ನು ಸುನಿಲ್ ಪೋಷಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಟಾಲಿವುಡ್ ಕಾಮಿಡಿ ನಟರಲ್ಲಿ ಸುನೀಲ್ ಸಹ ಒಬ್ಬರಾಗಿದ್ದು, ಇದೀಗ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಆದರೆ ಸುನೀಲ್ ಮೈನ್ ವಿಲನ್ ಆಗಿರುತ್ತಾರಾ, ಅಥವಾ ಸಬ್ ವಿಲನ್ ಆಗಿರುತ್ತಾರಾ ಎಂಬುದು ಇನಷ್ಟೆ ತಿಳಿಯಬೇಕಿದೆ. ಸದ್ಯ ಹೈದರಾಬಾದ್ ನಲ್ಲಿ ಶೂಟಿಂಗ್ ನಡೆಯುತ್ತಿದ್ದು, ಇಲ್ಲಿನ ಶೆಡ್ಯೂಲ್ಡ್ ಮುಗಿದ ಕೂಡಲೇ ಕೇರಳದಲ್ಲಿ ಶೂಟಿಂಗ್‌ಗಾಗಿ ಪುಷ್ಪ ಟೀಮ್ ತೆರಳಲಿದೆಯಂತೆ.

Previous articleಶಿವರಾತ್ರಿ ಹಬ್ಬದಂದು ಸರ್ಕಾರು ವಾರಿ ಪಾಟ ತಂಡದಿಂದ ಸ್ಪೆಷಲ್ ವಿಡಿಯೋ!
Next articleಅಮೀರ್ ಖಾನ್ ಕಾಣಿಸಿಕೊಳ್ಳಲಿದ್ದಾರೆ ಚೆಸ್ ಮಾಂತ್ರಿಕನ ಪಾತ್ರದಲ್ಲಿ!