Film News

ರಾಬರ್ಟ್ ಬಿಡುಗಡೆ ಕುರಿತಂತೆ ಸ್ಪಷ್ಟನೆ ನೀಡಿದ ನಿರ್ದೇಶಕ ತರುಣ್!

ಬೆಂಗಳೂರು: ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ರಾಬರ್ಟ್ ಬಿಡುಗಡೆ ಕುರಿತಂತೆ ಸ್ಪಷ್ಟನೆಯೊಂದನ್ನು ನೀಡಿದ್ದಾರೆ ಚಿತ್ರದ ನಿರ್ದೇಶಕ ತರುಣ್ ಸುಧೀರ್.

ಈ ಕುರಿತು ಸ್ಪಷ್ಟನೆ ನೀಡಿರುವ ನಿರ್ದೇಶಕ ತರುಣ್ ಸದ್ಯಕ್ಕೆ ಸಿನೆಮಾ ಬಿಡುಗಡೆಯ ದಿನಾಂಕ ನಿಗಧಿ ಮಾಡಿಲ್ಲ. ರಿಲೀಸ್ ಕುರಿತು ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ನಿರ್ಧಾರ ಮಾಡುತ್ತಾರೆ. ಕಳೆದ ಏಪ್ರಿಲ್ ತಿಂಗಳಲ್ಲಿಯೇ ಸಿನೆಮಾ ಬಿಡುಗಡೆಯಾಗಬೇಕಿತ್ತು. ಆದರೆ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಂದೂಡಲಾಯಿತು. ಈಗಲೂ ರಿಲೀಸ್ ಮಾಡೋಕೆ ನಾವು ರೆಡಿಯಾಗಿದ್ದೇವೆ. ಆದರೆ ಚಿತ್ರಕ್ಕೆ ಕೋಟಿಗಳ ಬಂಡವಾಳ ಹೂಡಿರುವ ನಿರ್ಮಾಪಕರು ಈ ಕುರಿತು ಯೋಚನೆ ಮಾಡಬೇಕು. ಪ್ರಸ್ತುತ ಲಾಕ್ ಡೌನ್ ಸಡಲಿಕೆಯಾಗಿದ್ದು, ಸಿನೆಮಾ ಥಿಯೇಟರ್ ಗಳಲ್ಲಿ ಕೇವಲ ೫೦% ರಷ್ಟು ಜನಕ್ಕೆ ಮಾತ್ರ ಅವಕಾಶ ನೀಡಿದ್ದಾರೆ. ಆದ್ದರಿಂದ ಸಿನೆಮಾಗೆ ಮಾಡಿದ ಬಂಡವಾಳ ವಾಪಸ್ಸು ಬರಬೇಕಲ್ಲವೇ, ಈ ಕುರಿತು ಸಹ ಯೋಚನೆ ಮಾಡಬೇಕಿದೆ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೇ ರಾಬರ್ಟ್ ಸಿನೆಮಾ ರಿಲೀಸ್ ಕುರಿತಂತೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಬ್ಲೂ ಪ್ರಿಂಟ್ ಸಹ ಸಿದ್ದ ಮಾಡಿದ್ದೇವೆ. ಬಿಡುಗಡೆ ದಿನಾಂಕದ ಬಗ್ಗೆ ಸ್ಪಷ್ಟನೆ ಸಿಕ್ಕ ನಂತರ ಪ್ರಚಾರ, ಚಿತ್ರದ ಹಾಡುಗಳು, ಟ್ರೈಲರ್ ಎಲ್ಲವನ್ನೂ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ. ನಿನ್ನೆಯಷ್ಟೆ ಕಾಮಿಡಿ ಕಿಂಗ್ ಶರಣ್ ಹಾಗೂ ತರುಣ್ ಕಾಂಬಿನೇಷನ್ ನಲ್ಲಿ ಗುರುಶಿಷ್ಯರು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಸಹ ಬಿಡುಗಡೆಯಾಗಿದೆ.

Trending

To Top