Actors

ತಿರುಪತಿಯಿಂದ ನಟಿ ತಾರಾ ಪಾರಾಗಿ ಬಂದಿದ್ದು ಹೇಗೆ ಗೊತ್ತಾ?

ಈಗ ದೇಶಾದ್ಯಂತ ಭಾರಿ ಮಳೆಯಾಗುತ್ತಿದೆ. ಎಲ್ಲೆಡೆ ಮಳೆಯ ಅಬ್ಬರ ಜೋರಾಗಿದೆ. ಇಡೀ ದೇಶಾದ್ಯಂತ ಮಳೆಯಿಂದ ಬಹಳ ತೊಂದರೆ ಉಂಟಾಗಿದೆ. ಬೆಳೆ ನಾಶ ಆಗುವುದರ ಜೊತೆ ಜನ ಜೀವನಕ್ಕೂ ತೊಂದರೆ ಉಂಟಾಗಿದೆ. ಮಳೆಯಿಂದ ಜನರು ಬಹಳ ತೊಂದರೆ ಅನುಭವಿಸುವ ಹಾಗೆ ಆಗಿದೆ.

ಈ ವರ್ಷದ ಮಳೆಯಿಂದಾಗಿ ಹಿಂದೆಂದು ನಡೆದಿರದ ಘಟನೆಗಳು ಸಹ ನಡೆಯುತ್ತಿದೆ. ಮೈಸೂರಿನಲ್ಲಿ 4 ಕ್ಕಿಂತ ಹೆಚ್ಚು ಬಾರಿ ಚಾಮುಂಡಿ ಬೆಟ್ಟದ ಭೂಕುಸಿತ ಉಂಟಾಗಿದೆ. ಇನ್ನು ತಿರುಪತಿಯಲ್ಲಿ ಸಹ ದೇವಸ್ಥಾನಕ್ಕೆ ಜಲದಿಗ್ಬಂಧನ ಉಂಟಾಗಿದೆ. ಇದರಿಂದ ಅಲ್ಲಿನ ಜನರಿಗೆ ಬಹಳ ಸಮಸ್ಯೆ ಆಗಿದೆ.

ಪರಿಸ್ಥಿತಿ ಹೀಗಿದ್ದಾಗ, ತಿರುಪತಿ ದೇವರ ದರ್ಶನ ಪಡೆಯಲು ನಟಿ ತಾರಾ ಹೋಗಿದ್ದರು, ಅಲ್ಲಿನ ಮಳೆ ಮತ್ತು ನೀರಿಗೆ ಸಿಕ್ಕಿಹಾಕಿಕೊಂಡು ಬಹಳ ತೊಂದರೆ ಅನುಭವಿಸಿದ್ದಾರೆ. ಕಾರ್ ಓಡಿಸಲು ಸಹ ತಿರುಪತಿಯಲ್ಲಿ ಕಷ್ಟವಾಗಿದೆ. ಇಡೀ ರಸ್ತೆಯನ್ನು ನೀರು ಅವರಿಸಿಕೊಂಡಿತ್ತು. ಅಂಗಡಿ ಮಳಿಗೆಗಳ ಒಳಗೂ ನೀರು ಹೋಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಬರುವುದೇ ಬಹಳ ಕಷ್ಟವಾಗಿತ್ತು ಎಂದಿದ್ದಾರೆ ನಟಿ ತಾರಾ.

Trending

To Top