Film News

‘ಲವ್ ಮಾಕ್ ಟೇಲ್’ ತೆಲುಗು ರಿಮೇಕ್ ನಲ್ಲಿ ತಮನ್ನಾ ನಾಯಕಿ

ಹೈದರಾಬಾದ್: ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಹೊಡೆದಿರುವ ಲವ್ ಮಾಕ್ ಟೇಲ್ ಚಿತ್ರ ತೆಲುಗು ಭಾಷೆಯಲ್ಲಿ ಡಬ್ಬಿಂಗ್ ಆಗುತ್ತಿದ್ದು, ಈ ಚಿತ್ರದಲ್ಲಿ ತಮನ್ನಾ ನಾಯಕಿಯಾಗಿ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ.

ಸ್ಯಾಂಡಲ್ ವುಡ್ ನಲ್ಲಿ ಸೂಪರ್ ಡೂಪರ್ ಹಿಟ್ ಹೊಡೆದಿರುವ ಲವ್ ಮಾಕ್ ಟೇಲ್ ಚಿತ್ರ ತೆಲುಗು ಭಾಷೆಯಲ್ಲಿ ರಿಮೇಕ್ ಆಗುತ್ತಿರುವ ಬಗ್ಗೆ ಎಲ್ಲರಿಗೂ ತಿಳಿದಿರುವ ಮಾಹಿತಿಯಾಗಿದ್ದು, ಪ್ರಸ್ತುತ ಈ ಚಿತ್ರದಲ್ಲಿ ನಿಧಿಮಾ ಪಾತ್ರದಲ್ಲಿ ತಮನ್ನಾ, ಆದಿ ಪಾತ್ರದಲ್ಲಿ ನಟ ಸತ್ಯದೇವ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ತಮಿಳುನಲ್ಲಿ ಚಿತ್ರ ರಿಮೇಕ್ ಆಗುತ್ತಿದ್ದು, ಶೂಟಿಂಗ್ ಕೆಲಸಗಳು ಭರ್ಜರಿಯಾಗಿ ನಡೆಯುತ್ತಿದೆ. ಈ ಚಿತ್ರವನ್ನು ಕನ್ನಡ ನಿರ್ದೇಶಕ ನಾಗಶೇಖರ್ ನಿರ್ದೇಶಿಸಲಿದ್ದು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ನಿರ್ದೇಶಕ ನಾಗಶೇಖರ್ ತಮನ್ನಾ ಹಾಗೂ ಸತ್ಯದೇವ್ ಜೊತೆಗಿರುವ ಪೊಟೋ ಶೇರ್ ಮಾಡಿ, ನನ್ನ ತೆಲುಗು ಸಿನೆಮಾದ ಜರ್ನಿ ಪ್ರಾರಂಭವಾಗಿದೆ ಎಂದು ಬರೆದುಕೊಂಡಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಮತ್ತೊರ್ವ ನಟಿ ಮೇಘಾ ಆಕಾಶ್ ಸಹ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಯಾವೆಲ್ಲಾ ನಟರು ಅಭಿನಯಿಸಲಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿಲ್ಲ.  ಪ್ರಸ್ತುತ ಕನ್ನಡದಲ್ಲಿ ಲವ್ ಮಾಕ್ ಟೇಲ್ ಭಾಗ-೨ ಚಿತ್ರದ ಕೆಲಸಗಳು ನಡೆಯುತ್ತಿದ್ದು, ನಟ ಹಾಗೂ ನಿರ್ದೇಶಕ ಕೃಷ್ಣ ಈಗಾಗಲೇ ಸಾಕಷ್ಟು ಭಾಗದ ಚಿತ್ರೀಕರಣ ಪೂರ್ಣಗೊಳಿಸಿದ್ದು, ಮುಂದಿನ ವರ್ಷದಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.

Trending

To Top