Film News

ಏಪ್ರಿಲ್ 23ಕ್ಕೆ ತಲೈವಿ ಅದ್ದೂರಿಯಾಗಿ ತೆರೆಗೆ!

ಚೆನೈ: ತಮಿಳುನಾಡಿನ ಪವರ್‌ಪುಲ್ ಸಿಎಂ ದಿವಂಗತ ಜಯಲಲಿತಾ ರವರ ಬಯೋಪಿಕ್ ಚಿತ್ರವಾಗಿರುವ ತಲೈವಿ ಇದೇ ಏಪ್ರಿಲ್ 23, 2021 ರಂದು ಅದ್ದೂರಿಯಾಗಿ ತೆರೆಗೆ ಬರಲಿದೆ. ಈ ಕುರಿತು ಜಯಲಲಿತಾ ಪಾತ್ರ ಪೋಷಣೆ ಮಾಡಿರುವ ಬಾಲಿವುಡ್ ನಟಿ ಕಂಗನಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಬಹಿರಂಗಪಡಿಸಿದ್ದಾರೆ.

ಕಳೆದೆರಡು ವರ್ಷಗಳಿಂದ ದೇಶದ ಸಿನಿರಂಗದಲ್ಲಿ ಸಾಕಷ್ಟು ನಿರೀಕ್ಷೆ ಹಾಗೂ ಕುತೂಹಲ ಮೂಡಿಸಿರುವ ತಲೈವಿ ಚಿತ್ರದ ಶೂಟಿಂಗ್ ಮುಕ್ತಾಯಗೊಂಡು ತಿಂಗಳುಗಳೇ ಕಳೆದಿದೆ. ಕೊರೊನಾ ಲಾಕ್‌ಡೌನ್ ನಿಂದಾಗಿ ಜೂನ್ 2020 ರಲ್ಲಿ ತೆರೆಗೆ ಬರಬೇಕಿದ್ದ ಈ ಚಿತ್ರ ಏ.೨೩ ರಂದು ಬಿಡುಗಡೆಯಾಗಲಿದೆ. ದೇಶಕಂಡ ಪವರ್‌ಪುಲ್ ಮಹಿಳಾ ಮುಖ್ಯಮಂತ್ರಿ ಎಂದೇ ಖ್ಯಾತಿ ಪಡೆದಿರುವ ಜಯಲಲಿತಾ ರವರ ಬಾಲ್ಯ, ಸಿನೆಮಾ ಪ್ರಯಣ, ರಾಜಕೀಯ ಸೇರಿದಂತೆ ಅನೇಕ ವಿಷಯಗಳ ಕುರಿತು ಈ ಚಿತ್ರದಲ್ಲಿ ತೋರಿಸಲಾಗಿದೆಯಂತೆ.

ಅಂದಹಾಗೆ ಜಯಲಲಿತಾ ರವರ ಜನ್ಮದಿನದಂದೇ ವಿಶೇಷವಾಗಿ ಈ ಚಿತ್ರ ವಿಶ್ವವ್ಯಾಪಿ ಬಿಡುಗಡೆಯಾಗಲಿದೆ. ಏಪ್ರಿಲ್ 23 ರಂದು ಜಯಲಲಿತಾ ರವರ ಹುಟ್ಟುಹಬ್ಬವಾಗಿದ್ದು, ಅದೇ ದಿನ ಚಿತ್ರ ತೆರೆಗೆ ಬರಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನೂ ಕಂಗನಾ ಶೇರ್ ಮಾಡಿರುವ ಪೋಸ್ಟರ್ ನಲ್ಲಿ ತಮಿಳುನಾಡಿನ ಲಕ್ಷಾಂತರ ಜನರ ಭವಿಷ್ಯವನ್ನು ಬದಲಾಯಿಸುವ ಮೂಲಕ ಜಯಲಲಿತಾ ತಲೈವಿ ಆದರೂ ಎಂಬಂತೆ ಪೋಸ್ಟರ್‌ನಲ್ಲಿ ಬಿಂಬಿಸಲಾಗಿದೆ. ಇನ್ನೂ ಈ ಚಿತ್ರ ಬಹುಭಾಷೆಯಲ್ಲಿ ರಿಲೀಸ್ ಆಗಲಿದೆಯಂತೆ. ಅರವಿಂದ್ ಸ್ವಾಮಿ ಎಂಜಿಆರ್ ಪಾತ್ರದಲ್ಲಿ, ಕರುಣಾನಿಧಿ ಪಾತ್ರದಲ್ಲಿ ಪ್ರಕಾಶ್ ರಾಜ್ ಸಹ ನಟಿಸಿದ್ದಾರೆ.

Trending

To Top