Film News

ಜಯಲಲಿತಾ ಜೀವನಾಧಾರಿತ ಚಿತ್ರ ತಲೈವಿ: ಕಂಗನಾ ನ್ಯೂ ಸ್ಟಿಲ್ಸ್

ಚೆನ್ನೈ: ಇತ್ತೀಚಿಗೆ ಬರೀ ಕಾಂಟ್ರವರ್ಸಿಗಳಿಂದ ಸುದ್ದಿಯಲ್ಲಿದ್ದ ನಟಿ ಕಂಗನಾ ರಾಣವತ್ ತಮಿಳುನಾಡಿನಲ್ಲಿ ರಾಜಕಾರಣದಲ್ಲಿ ಪವರ್ ಪುಲ್ ಆಗಿದ್ದ ಜಯಲಲಿತ ರವರ ಜೀವನಾಧಾರಿತ ಚಿತ್ರವನ್ನು ತಲೈವಿ ಮೂಲಕ ತೆರೆಮೇಲೆ ತರಲಾಗುತ್ತಿದ್ದು, ಜಯಲಲಿತಾ ಪುಣ್ಯತಿಥಿಯಂದು ಕಂಗನಾ ನ್ಯೂ ಸ್ಟಿಲ್ಸ್ ನೀಡಿದ್ದಾರೆ.

ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಇಡೀ ದೇಶದಲ್ಲೇ ಪ್ರಭಾವಿ ಮಹಿಳಾ ರಾಜಕಾರಣಿಯಾಗಿದ್ದರು. ಅವರ ದೈವಾದೀನರಾಗಿ ಇಂದಿಗೆ ನಾಲ್ಕು ವರ್ಷಗಳು ತುಂಬಿದ್ದು, ಅವರ ನೆನಪಿನಲ್ಲಿ ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿರುವ ತಲೈವಿ ಚಿತ್ರದ ಕೆಲವೊಂದು ನ್ಯೂ ಸ್ಟಿಲ್ಸ್‌ಗಳನ್ನು ಹಂಚಿಕೊಂಡಿದ್ದಾರೆ ಕಂಗನಾ. ಜಯಾ ಅಮ್ಮನ ಪುಣ್ಯ ತಿಥಿಯಂದು ನಮ್ಮ ತಲೈವಿ ಎಂದು ಚಿತ್ರದ ನ್ಯೂ ಪೋಟೊಗಳನ್ನು ಹಂಚಿಕೊಳ್ಳುತ್ತಿದ್ದೇವೆ ಅದಕ್ಕಾಗಿ ನಮ್ಮ ತಂಡಕ್ಕೆ ಧನ್ಯವಾದಗಳು ಜೊತೆಗೆ ಚಿತ್ರವನ್ನು ಶೀಘ್ರ ಪೂರ್ಣಗೊಳಿಸಬೇಕೆಂದು ನಿರಂತರವಾಗಿ ಕೆಲಸ ಮಾಡುತ್ತಿರುವ ನಿರ್ದೇಶನ ವಿಜಯ್ ರವರಿಗೂ ವಿಶೇಷ ಧನ್ಯವಾದಗಳನ್ನು ತಿಳಿಸುತ್ತಾ ಪೊಟೋಗಳನ್ನು ಹಂಚಿಕೊಂಡಿದ್ದಾರೆ.

ಇನ್ನೂ ಈ ಸಿನೆಮಾದ ಫಸ್ಟ್ ಲುಕ್ ರಿಲೀಸ್ ಆದ ವೇಳೆ ಕಂಗನಾರವರನ್ನು ನೋಡಿ ಕೆಲವರು ಗೇಲಿ ಮಾಡಿದ್ದರು. ಆದರೆ ಜಯಾ ಪಾತ್ರವನ್ನು ನಿರ್ವಹಿಸಲು ಕಂಗನಾ ಬದಲಾಗುತ್ತಿರುವ ಪರಿಯನ್ನು ಕಂಡು ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದರು. ಶೀಘ್ರದಲ್ಲಿಯೇ ಸಿನೆಮಾದ ಎಲ್ಲಾ ಕೆಲಸಗಳು ಮುಕ್ತಾಯವಾಗಲಿದೆ. ಎ.ಎಲ್.ವಿಜಯ್ ಈ ಚಿತ್ರವನ್ನು ನಿರ್ದೇಶಿಸಲಿದ್ದು, ಎಂ.ಜಿ.ರಾಮಚಂದ್ರನ್ ಪಾತ್ರವನ್ನು ಅರವಿಂದ್ ಸ್ವಾಮಿ ಮಾಡಲಿದ್ದಾರೆ. ಪ್ರಕಾಶ್ ರೈ ಕರುಣಾನಿಧಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ವಿಷ್ಣು ಇಂಧೂರಿ ಹಾಗೂ ಶೈಲೇಶ್ ಸಿಂಗ್ ಚಿತ್ರದ ನಿರ್ಮಾಪಕರಾಗಿದ್ದಾರೆ.

Trending

To Top