ಕಿರುತೆರೆಯಲ್ಲಿ ಬೆಸ್ಟ್ ಜೋಡಿಯಾಗಿ ರಂಜಿಸಿದ ರಶ್ಮಿ ಅಂಡ್ ಸುಧೀರ್ ಇದೀಗ ಬೆಳ್ಳಿತೆರೆಯಲ್ಲೂ ರಂಜಿಸಲು ಸಿದ್ದವಾಗುತ್ತಿದ್ದಾರೆ….!

ತೆಲುಗು ಕಿರುತೆರೆಯಲ್ಲಿ ಬೆಸ್ಟ್ ಜೋಡಿ ಎಂದೇ ಕರೆಯಲಾಗುವ ಸುಡಿಗಾಲಿ ಸುಧೀರ್‍ ಹಾಗೂ ರಶ್ಮಿ ಗೌತಮ್ ರವರಿಗೆ ದೊಡ್ಡ ಸಂಖ್ಯೆಯ ಫ್ಯಾನ್ ಫಾಲೋಯಿಂಗ್ ಇದೆ. ಕಿರುತೆರೆಯಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳುವ ಈ ಜೋಡಿ ಸಿನೆಮಾಗಳಲ್ಲಿ ಸಹ ಜೋಡಿಯಾಗಿ ನಟಿಸಬೇಕೆಂದು ಅವರ ಅಭಿಮಾನಿಗಳೂ ಸುಮಾರು ದಿನಗಳಿಂದ ಕೋರುತ್ತಿದ್ದರು. ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಸುಧೀರ್‍ ಹಾಗೂ ರಶ್ಮಿ ಕಾಂಬಿನೇಷನ್ ನಲ್ಲಿ ಸಿನೆಮಾ ಒಂದು ಮೂಡಿಬರಲಿದೆ. ಈ ಸಿನೆಮಾದಲ್ಲಿ ಈ ಜೋಡಿ ರೊಮ್ಯಾನ್ಸ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕಿರುತೆರೆಯಲ್ಲಿ ಸುಧೀರ್‍ ಹಾಗೂ ರಶ್ಮಿ ಜೋಡಿಗೆ ತುಂಬಾನೆ ಕ್ರೇಜ್ ಇದೆ. ಜಬರ್ದಸ್ತ್ ಶೋ ಮೂಲಕ ಈ ಜೋಡಿಯ ಹವಾ ಶುರುವಾಯಿತು. ಈ ಶೋ ನಲ್ಲಿ ಅವರ ಲವ್ ಟ್ರಾಕ್, ರೊಮ್ಯಾನ್ಸ್, ಕೆಮಿಸ್ಟ್ರಿ ಎಲ್ಲವೂ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಅದರಲ್ಲೂ ಡಿ ರಿಯಾಲಿಟಿ ಶೋ ನಲ್ಲಿ ಈ ಜೋಡಿ ಮತಷ್ಟು ಸಂಚಲನ ಸೃಷ್ಟಿ ಮಾಡಿದ್ದರು. ಇನ್ನೂ ಕಿರುತೆರೆಯಲ್ಲಿ ಈ ಜೋಡಿಯನ್ನು ನೋಡಲು ಕಾತುರದಿಂದ ಕಾಯುತ್ತಲೇ ಇರುತ್ತಾರೆ. ಇದೀಗ ಸಿನೆಮಾದ ಮೂಲಕ ಈ ಜೋಡಿ ಮತಷ್ಟು ಫೇಂ ಪಡೆದುಕೊಳ್ಳಲಿದ್ದಾರೆ. ಅದರಲ್ಲೂ ಜಬರ್ದಸ್ತ್ ನಲ್ಲಿ ಇವರ ಈವೆಂಟ್ ಗಳು, ಸ್ಕಿಟ್ಸ್, ಎರಡು ಬಾರಿ ಫೇಕ್ ಮದುವೆ ಸಹ ನಡೆದಿತ್ತು. ಅವರ ಮದುವೆ ನಿಜವಾದ ಮದುವೆಗೂ ಕಡಿಮೆಯಿಲ್ಲ ಎಂಬಂತಿತ್ತು ಎಂಬ ಮಾತುಗಳೂ ಸಹ ಇದೆ. ಅನೇಕ ಶೋಗಳ ಮೂಲಕ ಒಳ್ಳೆಯ ಟಿ.ಆರ್‍.ಪಿ ತಂದುಕೊಂಟ್ಟಂತಹ ಈ ಜೋಡಿ ಇದೀಗ ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಳ್ಳಲಿದ್ದಾರೆ.

ಇನ್ನೂ ಸುಧೀರ್‍ ಹಾಗೂ ರಶ್ಮಿ ರವರನ್ನು ದೊಡ್ಡ ಪರದೆಯ ಮೇಲೆ ನೋಡಲು ಅವರ ಫ್ಯಾನ್ಸ್ ಗಳ ಆಶಯವಾಗಿತ್ತು. ಇಬ್ಬರೂ ಸಿನೆಮಾದಲ್ಲಿ ನಟಿಸಿದರೇ ತುಂಬಾ ಚೆನ್ನಾಗಿರುತ್ತಿತ್ತು ಎಂಬ ಮಾತುಗಳೂ ಸಹ ಇದೆ. ಈಗಾಗಲೇ ನಟನಾಗಿ ಸುಧೀರ್‍ ಎಂಟ್ರಿ ಕೊಟ್ಟಿದ್ದಾನೆ. ಸುಧೀರ್‍ ಅಭಿಮಾನಿಗಳೂ ಸಹ ರಶ್ಮಿ ಜೊತೆ ಸಿನೆಮಾ ಯಾವಾಗ ಎಂದೂ, ರಶ್ಮಿ ರವರನ್ನೂ ಸಹ ಸುಧೀರ್‍ ಜೊತೆಗೆ ಸಿನೆಮಾ ಯಾವಾಗ ಎಂದೂ ಸಹ ಕೇಳಿದ್ದುಂಟು. ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ಸುಧೀರ್‍ ಈ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ. ಸುಧೀರ್‍ ಅಭಿನಯದ ಗಾಲೋಡು ಎಂಬ ಸಿನೆಮಾ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದರು. ನಾನು ರಶ್ಮಿ ಸಿನೆಮಾದಲ್ಲಿ ನಟಿಸಲಿದ್ದೇವೆ. ಗಜ್ಜಲ ಗುರಂ ಎಂಬ ಟೈಟಲ್ ನಲ್ಲಿ ಸಿನೆಮಾ ಒಂದು ಬರಲಿದ್ದು, ಈ ಸಿನೆಮಾ ಚರ್ಚೆಯ ದಶೆಯಲ್ಲಿದೆ. ಈ ಸಿನೆಮಾ ಲೇಡಿ ಓರಿಯೆಂಟೆಡ್ ಸಿನೆಮಾ ಎನ್ನಲಾಗುತ್ತಿದೆ. ನನ್ನ ಪಾತ್ರ ತುಂಬಾ ಪ್ರಮುಖವಾಗಿರುತ್ತದೆ. ಈ ಸಿನೆಮಾದ ಮೂಲಕ ಸುದೀರ್‍ ಹಾಗೂ ರಶ್ಮಿ ರವರನ್ನು ಒಂದೆ ಪರದೆಯ ಮೇಲೆ ನೋಡಲಿದ್ದೀರಿ ಎಂದು ಸುಧೀರ ಹೇಳಿದ್ದಾರೆ.

ಇನ್ನೂ ಸುಧೀರ್‍ ಅಭಿನಯದ ಗಾಲೋಡು ಎಂಬ ಸಿನೆಮಾ ನ.18 ರಂದು ಬಿಡುಗಡೆಯಾಗಲಿದೆ. ಈ ಸಿನೆಮಾದಲ್ಲಿ ಸುಧೀರ್‍ ಮಾಸ್ ಲುಕ್ಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನೆಮಾದ ಮೇಲೆ ಸುಧೀರ್‍ ತುಂಬಾನೆ ಆಶಾ ಭಾವನೆಯನ್ನು ಇಟ್ಟುಕೊಂಡಿದ್ದಾರೆ. ಈ ಸಿನೆಮಾದಲ್ಲೂ ಸಹ ಮೊದಲಿಗೆ ರಶ್ಮಿ ರವರನ್ನೇ ನಟಿಯಾಗಿ ಅಂದುಕೊಂಡಿದ್ದರಂತೆ. ಆದರೆ ಕೆಲವೊಂದು ಕಾರಣಗಳಿಂದ ಅದು ಜರುಗಲಿಲ್ಲ ಎನ್ನಲಾಗಿದೆ. ಸದ್ಯ ಸುಧೀರ್‍ ನೀಡಿದ ಹೇಳಿಕೆಯಿಂದ ಸುಧೀರ್‍ ಹಾಗೂ ರಶ್ಮಿ ಕಾಂಬಿನೇಷನ್ ಸಿನೆಮಾದ ಬಗ್ಗೆ ಅವರ ಅಭಿಮಾನಿಗಳು ಉತ್ಸುಕರಾಗಿದ್ದಾರೆ.

Previous articleಮದುವೆ ರೂಮರ್ ಬಗ್ಗೆ ಕೊನೆಗೂ ಸ್ಪಂದಿಸಿದ ಮಿಲ್ಕಿ ಬ್ಯೂಟಿ, ಆಕೆ ಮದುವೆಯಾಗಲಿರುವ ವ್ಯಕ್ತಿಯನ್ನು ಪರಿಚಯಿಸಿದ ತಮನ್ನಾ…!
Next articleರಾಮ್ ಚರಣ್ ವರ್ಕೌಟ್ ವಿಡಿಯೋ ಸಖತ್ ವೈರಲ್, RC15 ನೆಕ್ಸ್ಟ್ ಶೆಡ್ಯೂಲ್ಡ್ ಗಾಗಿ ಹೆವಿ ವರ್ಕೌಟ್…!