Film News

ರಾಬರ್ಟ್ ತೆಲುಗು ಟೀಸರ್: ಟ್ರೆಂಡಿಂಗ್ ಕ್ರಿಯೇಟ್ ಮಾಡಿದ ರಾಬರ್ಟ್

ಬೆಂಗಳೂರು: ಸ್ಯಾಂಡಲ್‌ವುಡ್‌ನ ಟಾಪ್ ಹಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನೆಮಾದ ತೆಲುಗು ಟೀಸರ್ ಬಿಡುಗಡೆಯಾಗಿದ್ದು, ತೆಲುಗು ಅಭಿಮಾನಿಗಳನ್ನು ಫಿದಾ ಮಾಡಿದೆ.

ರಾಬರ್ಟ್ ತೆಲುಗು ವರ್ಷನ್ ಟೀಸರ್ ಫೆ.3 ರಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಸ್ವಲ್ಪ ಸಮಯದಲ್ಲೆ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ಕ್ರಿಯೇಟ್ ಮಾಡಿದೆ. 121 ಮಿಲಿಯನ್ ಗೂ ಅಧಿಕ ಲೈಕ್ಸ್ ಬಂದಿದ್ದು, 2 ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡಿದೆ. ಆದರೆ ರಾಬರ್ಟ್ ತೆಲುಗು ಟೀಸರ್ ನಲ್ಲಿ ಹಿನ್ನೆಲೆ ಧ್ವನಿ ದರ್ಶನ್ ರವರದಲ್ಲ. ದರ್ಶನ್ ರವರೇ ಹಿನ್ನೆಲೆ ಧ್ವನಿ ನೀಡಿದ್ದರೆ ಇನಷ್ಟು ಅದ್ಬುತವಾಗಿರುತ್ತಿದ್ದು ಟೀಸರ್ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿದೆ.

ಇನ್ನೂ ಮಾರ್ಚ್11 ರಂದು ರಾಬರ್ಟ್ ಸಿನೆಮಾ ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಏಕ ಕಾಲದಲ್ಲಿ ಬಿಡುಗಡೆಯಾಗಲಿದೆ. ಕೆಲವು ದಿನಗಳ ಹಿಂದೆಯಷ್ಟೆ ರಾಬರ್ಟ್ ಚಿತ್ರಕ್ಕೆ ತೆಲುಗು ರಾಜ್ಯಗಳಲ್ಲಿ ಬಿಡುಗಡೆಗೆ ಅಡ್ಡಿಪಡಿಸಲಾಗುತ್ತಿದೆ ಎಂದು ಫಿಲಂ ಚೇಂಬರ್ ಗೆ ದೂರನ್ನು ಸಹ ನೀಡಲಾಗಿತ್ತು. ನಂತರ ಸಭೆಗಳು ಸಹ ನಡೆದವು. ಜೊತೆಗೆ ತೆಲುಗು ನಿರ್ಮಾಪಕರ ಸಂಘವೂ ಸಹ ರಾಬರ್ಟ್ ಚಿತ್ರವನ್ನು ನಮ್ಮ ಚಿತ್ರಗಳಂತೆ ಆತ್ಮೀಯವಾಗಿ ಸ್ವಾಗತಿಸುತ್ತೇವೆ ಎಂದು ನಿರ್ಮಾಪಕ ಉಮಾಪತಿ ಯವರಿಗೆ ಆತ್ಮೀಯವಾಗಿ ಸನ್ಮಾನವನ್ನು ಸಹ ಮಾಡಲಾಗಿತ್ತು. ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿದ್ದು, ಮಾರ್ಚ್ 11 ರಂದು ಕರ್ನಾಟಕ ಹಾಗೂ ತೆಲುಗು ರಾಜ್ಯಗಳಲ್ಲಿ ರಾಬರ್ಟ್ ಅಬ್ಬರ ಶುರುವಾಗಲಿದೆ.

ಇನ್ನೂ ಈ ಚಿತ್ರದಲ್ಲಿ ಆಶಾ ಭಟ್, ವಿನೋಧ್ ಪ್ರಭಾಕರ್, ಜಗಪತಿ ಬಾಬು ಸೇರಿದಂತೆ ಅನೇಕ ಖ್ಯಾತ ಕಲಾವಿದರು ದರ್ಶನ್ ರವರೊಂದಿಗೆ ಬಣ್ಣ ಹಚ್ಚಿದ್ದು, ಶಿವರಾತ್ರಿ ಹಬ್ಬದಂದು ಅಭಿಮಾನಿಗಳಿಗೆ ರಸದೌತಣವನ್ನು ನೀಡಲಿದೆ ರಾಬರ್ಟ್ ಚಿತ್ರ.

Trending

To Top