ನಯನತಾರಾ ಊರ್ವಶಿಯಂತೆ, ಶ್ರುತಿ ಹಾಸನ್ ರಾಕ್ಷಸಿಯಂತೆ ಹಾಗಂತ ಹೇಳಿದ್ದು ಬಾಲಯ್ಯ….!

ತೆಲುಗು ಸಿನಿರಂಗದಲ್ಲಿ ನಂದಮೂರಿ ಕುಟುಂಬದ ನಟಸಿಂಹ ಬಾಲಕೃಷ್ಣ ರವರು ಅನೇಕ ಸಿನೆಮಾಗಳ ಮೂಲಕ ದೊಡ್ಡ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. ರಾಜಕೀಯ ಹಾಗೂ ಸಿನೆಮಾಗಳನ್ನು ಮಾಡುತ್ತಾ ಮುಂದೆ ಸಾಗುತ್ತಿದ್ದಾರೆ. ಇದೀಗ ಬಾಲಯ್ಯ ಕಾರ್ಯಕ್ರಮವೊಂದರಲ್ಲಿ ನಯನತಾರ ರವರನ್ನು ಊರ್ವಶಿಯೆಂದು, ಶ್ರುತಿ ಹಾಸನ್ ರವರನ್ನು ರಾಕ್ಷಸಿ ಎಂದು ಹೇಳಿದ್ದಾರೆ. ಸದ್ಯ ಬಾಲಕೃಷ್ಣ ರವರ ಈ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ಬಾಲಕೃಷ್ಣ ಹಾಗೇ ಹೇಳಿದ್ದು, ಯಾಕೆ ಯಾವ ಕಾರ್ಯಕ್ರಮದಲ್ಲಿ ಎಂಬ ವಿಚಾರಕ್ಕೆ ಬಂದರೇ,

ನಟ ಬಾಲಕೃಷ್ಣ ಸಿನಿರಂಗದ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ಸಿನೆಮಾ ಕಾರ್ಯಕ್ರಮಗಳ ಹೊರತಾಗಿ ಅನೇಕ ಮನರಂಜನೆ ಕಾರ್ಯಕ್ರಮಗಳಲ್ಲೂ ಸಹ ಗೆಸ್ಟ್ ಆಗಿ ಹೋಗುತ್ತಿರುತ್ತಾರೆ. ಇದೀಗ ಬಾಲಕೃಷ್ಣ ಹೋಸ್ಟ್ ಮಾಡುವ ಅನ್ ಸ್ಟಾಪಬುಲ್ ಎಂಬ ಟಾಕ್ ಶೋ ಮೂಲಕ ಅನೇಕ ಗಣ್ಯರನ್ನು ಸಂದರ್ಶನ ಮಾಡುತ್ತಿರುತ್ತಾರೆ. ಅಲ್ಲು ಕುಟುಂಬದೊಂದಿಗೆ ಅವಿನಾಭಾವ ಸಂಬಂಧವಿರುವ ಬಾಲಕೃಷ್ಣ ಈ ಹಿಂದೆ ಅಲ್ಲು ಅರ್ಜುನ್ ಸಿನೆಮಾಗಳ ಅನೇಕ ಕಾರ್ಯಕ್ರಮಗಳಲ್ಲೂ ಸಹ ಭಾಗಿಯಾಗಿದ್ದರು. ಇದೀಗ ಅಲ್ಲು ಕುಟುಂಬದ ಅಲ್ಲು ಶಿರೀಷ್ ಅಭಿನಯದ ಊರ್ವಶಿವೋ, ರಾಕ್ಷಸಿವೋ ಎಂಬ ಸಿನೆಮಾದ ಪ್ರಿ ರಿಲೀಸ್ ಈವೆಂಟ್ ನಲ್ಲಿ ಬಾಲಕೃಷ್ಣ ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಾಲಕೃಷ್ಣ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಾಲಯ್ಯ ಎಂದಿನಂತೆ ಫನ್ನಿಯಾಗಿ ಕೆಲವೊಂದು ವಿಚಾರಗಳನ್ನು ಹೊರಹಾಕಿದ್ದಾರೆ.

ಕಾರ್ಯಕ್ರಮದಲ್ಲಿ ಅಲ್ಲು ಶೀರಿಷ್ ಹಾಟ್ ಸೀಟ್ ನಲ್ಲಿ ನೀವಿರುತ್ತೀರಿ, ನಾನು ಪ್ರಶ್ನೆಗಳನ್ನು ಕೇಳುತ್ತೇನೆ ಎಂದು ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆ ಬಾಲಯ್ಯ ಸಹ ತನ್ನ ಸ್ಟೈಲ್ ನಲ್ಲಿಯೇ ಉತ್ತರಗಳನ್ನು ನೀಡಿದ್ದಾರೆ. ಆದರೆ ಬಾಲಯ್ಯ ನೀಡಿದ ಉತ್ತರಗಳು ಎಲ್ಲರನ್ನೂ ಆಶ್ಚರ್ಯಪಡಿಸಿದೆ ಎನ್ನಲಾಗಿದೆ. ಅಲ್ಲು ಶಿರೀಷ್ ನಿಮ್ಮೊಂದಿಗೆ ಕೆಲಸ ಮಾಡಿದ ವಿಜಯಶಾಂತಿ, ನಯನತಾರ, ಸಿಮ್ರಾನ್ ಇದೀಗ ಹೊಸ ಸಿನೆಮಾದಲ್ಲಿ ನಟಿಸುತ್ತಿರುವ ಶ್ರುತಿ ಹಾಸನ್ ಇವರಲ್ಲಿ ಊರ್ವಶಿ ಯಾರು, ರಾಕ್ಷಸಿ ಯಾರು ಎಂದು ಕೇಳಿದ್ದಾರೆ. ಕೂಡಲೇ ಬಾಲಯ್ಯ ಊರ್ವಶಿ ನಯನತಾರಾ, ರಾಕ್ಷಸಿ ಶ್ರುತಿ ಹಾಸನ್ ಎಂದಿದ್ದಾರೆ. ಜೊತೆಗೆ ಬಾಲಯ್ಯ ನಟಿಸಿದ ಸಿನೆಮಾಗಳ ಬಗ್ಗೆ ಸಹ ಕೆಲವೊಂದು ಪ್ರಶ್ನೆಗಳು ಎದುರಾಗಿದ್ದು, ಬಾಲಕೃಷ್ಣ ಸಹ ಫನ್ನಿಯಾಗಿ ಉತ್ತರ ನೀಡಿದ್ದಾರೆ. ಸದ್ಯ ಬಾಲಕೃಷ್ಣ ಹಾಗೂ ಶಿರೀಷ್ ನಡುವಣ ಈ ಪ್ರಶ್ನೋತ್ತರಗಳು ಸಖತ್ ಎಂಜಾಯ್ ನೀಡಿದೆ ಎನ್ನಲಾಗುತ್ತಿದೆ.

ಇನ್ನೂ ಕಾರ್ಯಕ್ರಮದಲ್ಲಿ ನಿರ್ಮಾಪಕ ಅಲ್ಲು ಅರವಿಂದ್ ಆತನ ಪತ್ನಿ  ಸೇರಿದಂತೆ ಅನೇಕ ಗಣ್ಯರಿದ್ದು ಎಲ್ಲರೂ ಎಂಜಾಯ್ ಮಾಡಿದ್ದಾರೆ. ಈ ಸಿನೆಮಾದ ಇದೇ ನ.4 ರಂದು ತೆರೆ ಕಾಣಲಿದ್ದು, ಈ ಸಿನೆಮಾದಲ್ಲಿ ಅಲ್ಲು ಶಿರೀಷ್ ಜೊತೆಗೆ ಅನು ಇಮ್ಮಾನ್ಯುಯೆಲ್ ಬಣ್ಣ ಹಚ್ಚಿದ್ದಾರೆ. ಈ ಸಿನೆಮಾದ ಮೇಲೆ ಅಲ್ಲು ಶಿರೀಷ್ ತುಂಬಾನೆ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ. ಅಂದಹಾಗೆ ಅಲ್ಲು ಶಿರೀಷ್ ಹಾಗೂ ಅನು ಇಮ್ಮಾನ್ಯುಯೆಲ್ ಬಗ್ಗೆ ಡೇಟಿಂಗ್ ರೂಮರ್‍ ಸಹ ಹರಿದಾಡುತ್ತಿದೆ.

Previous articleವೇದಿಕೆಯ ಮೇಲೆ ಪ್ರಭಾಸ್ ರವರನ್ನು ಅಣ್ಣಾ ಎಂದು ಕರೆದ ಯಂಗ್ ಬ್ಯೂಟಿ, ಹಾಟ್ ಟಾಪಿಕ್ ಆದ ಆಕೆಯ ಹೇಳಿಕೆ…!
Next articleಶೀಘ್ರದಲ್ಲೇ ಆ ನಟಿಯೊಂದಿಗೆ ಕಾಲಿವುಡ್ ಸ್ಟಾರ್ ನಟ ವಿಶಾಲ್ ಮದುವೆ, ಆ ನಟಿ ಯಾರು?