ಹೈದರಾಬಾದ್: ಇತ್ತಿಚಿಗೆ ಹಾರರ್ ಚಿತ್ರಗಳು ಸರಣಿಯಾಗಿ ಬರುತ್ತಿದ್ದು, ಪ್ರತಿಯೊಂದು ಸಿನೆಮಾ ವಿಭಿನ್ನ ರೀತಿಯ ಕಥನಗಳನ್ನು ಹೊಂದಿದ್ದು ಹಾರರ್ ಸಿನಿರಸಿಕರನ್ನು ರಂಜಿಸುತ್ತಿವೆ. ಇದೀಗ ಟಾಲಿವುಡ್‌ನಲ್ಲಿ ಮತ್ತೊಂದು ಹಾರರ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಯೂಟೂಬ್‌ನಲ್ಲಿ ಟ್ರೆಂಡಿಂಗ್ ಆಗಿದೆ.
ಟಾಲಿವುಡ್‌ನ ವೀರಸಾಗರ್ ಎಂಬ ನಿರ್ದೇಶಕನ ಸಾರಥ್ಯದಲ್ಲಿ ಮೂಡಿಬಂದಿರುವ ಚಿತ್ರವೇ ಮರಣಂ. ಇದೇ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಯೂಟೂಬ್ ನಲ್ಲಿ ಎಲ್ಲರನ್ನೂ ಆಕರ್ಷಿಸುತ್ತಿದೆ. ಜೊತೆಗೆ ಭಯವನ್ನು ಸಹ ಹುಟ್ಟಿಸುತ್ತಿದೆಯಂತೆ. ಈ ಚಿತ್ರ ಹಿರೋ ಹಾಗೂ ಹಿರೋಯಿನ್ ಮೇಲೆ ಹಾರರ್ ಕಂಟೆಂಟ್‌ನೊಂದಿಗೆ ನಿರ್ಮಾಣ ಮಾಡಲಾಗಿದೆ. ಒಳ್ಳೆಯ ಕಾನ್ಸೆಪ್ಟ್ ಚಿತ್ರವಾಗಿ ಎಲ್ಲರನ್ನೂ ರಂಜಿಸುತ್ತದೆ.
ಇತ್ತೀಚಿಗಷ್ಟೆ ಮರಣಂ ಚಿತ್ರದ ನಿರ್ಮಾಪಕ ಕಳ್ಯಾಣ್ ಚಿತ್ರದ ಟೀಸರ್ ಲಾಂಚ್ ಮಾಡಿದ್ದಾರೆ. ಜೊತೆಗೆ ಒಳ್ಳೆಯ ಕಂಟೆಂಟ್ ಇರುವಂತಹ ಹಾರರ್ ಸಿನೆಮಾಗಳಿಗೆ ದೊಡ್ಡ ಮಟ್ಟದಲ್ಲಿ ಡಿಮ್ಯಾಂಡ್ ಇರುತ್ತದೆ ಎಂದು ಸಹ ಹೇಳಿದ್ದಾರೆ. ಜೊತೆಗೆ ಈ ಚಿತ್ರದಲ್ಲಿ ನಟಿಸಿರುವ ಎಲ್ಲರಿಗೂ ಉತ್ತಮ ಭವಿಷ್ಯತ್ ಸಹ ರೂಪುಗೊಳ್ಳಲಿದೆ ಎಂದಿದ್ದಾರೆ.
ಇನ್ನೂ ಟೀಸರ್ ವಿಷಯಕ್ಕೆ ಬಂದಾಗ ಮರಣಂ ಚಿತ್ರದ ನಾಯಕಿಗೆ ದೆವ್ವ ಹಿಡಿದಿದ್ದು, ವಿಚಿತ್ರವಾಗಿ ವರ್ತಿಸುತ್ತಿರುತ್ತಾರೆ. ಆದರೆ ಹಿರೋ ಮಾತ್ರ ಕೂಲ್ ಆಗಿ ಸೈಲೆಂಟ್ ಆಗಿ ಇರುತ್ತಾರೆ. ಇನ್ನೂ ಚಿತ್ರದಲ್ಲಿ ಹಾರರ್ ಕಟೆಂಡ್ ಭರ್ಜರಿಯಾಗಿ ಇರುತ್ತದೆ ಎಂದು ಹೇಳಲಾಗುತ್ತಿದೆ. ಸದ್ಯ ಮರಣಂ ಚಿತ್ರ ಶೂಟಿಂಗ್ ಕೆಲಸದಲ್ಲಿ ಬ್ಯುಸಿಯಾಗಿದ್ದು, ಶೀಘ್ರದಲ್ಲೇ ತೆರೆಗೆ ಬರಲಿದೆ.
