ತೆಲುಗು ನಟ ಸಂದೀಪ್ ಕಿಷನ್ ನಟಿ ರೆಜಿನಾ ಡೇಟಿಂಗ್ ರೂಮರ್ ವೈರಲ್, ಅವರ ಸೆಲ್ಫಿ ಸಹ ಸಖತ್ ವೈರಲ್….!

ಸಿನೆಮಾ ಸೆಲೆಬ್ರೆಟಿಗಳ ಸುದ್ದಿ ಕಡಿಮೆ ಸಮಯದಲ್ಲೇ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಅದು ನಿಜವಾಗಿರಲಿ ಅಥವಾ ಸುಳ್ಳಾಗಿರಲಿ ಎಂಬುದನ್ನು ನೋಡದೇ ಕೂಡಲೇ ಎಲ್ಲಾ ಕಡೆ ವೈರಲ್ ಮಾಡಿಬಿಡುತ್ತಾರೆ. ಅದರಲ್ಲೂ ಸಿನೆಮಾ ಸೆಲೆಬ್ರೆಟಿಗಳ ವೈಯುಕ್ತಿಕ ವಿಚಾರಗಳಂತೂ ಬಿರುಗಾಳಿಯಂತೆ ಕ್ಷಣಗಳಲ್ಲೇ ವೈರಲ್ ಆಗಿಬಿಡುತ್ತದೆ. ಇದೀಗ ತೆಲುಗು ಸಿನಿರಂಗದ ಮತ್ತೊಂದು ಜೋಡಿಯ ಬಗ್ಗೆ ರೂಮರ್ ಒಂದು ಹುಟ್ಟಿಕೊಂಡಿದ್ದು. ಅವರು ಹಂಚಿಕೊಂಡ ಸೆಲ್ಫಿ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ತೆಲುಗು ನಟ ಸಂದೀಪ್ ಕಿಷನ್ ಹಾಗೂ ನಟಿ ರೆಜಿನಾ ಕಾಸಂಡ್ರ ನಡುವೆ ಪ್ರೇಮ ಪಯಣ ಸಾಗುತ್ತಿದೆ ಎಂದು ಸುದ್ದಿ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.

ತೆಲುಗು ಸಿನಿರಂಗದ ಯಂಗ್ ಹಿರೋ ಸಂದೀಪ್ ಕಿಷನ್ ಸದ್ಯ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಂದೀಪ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಮೊದಲಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನೆಮಾಗಳಲ್ಲಿ ಕಾಣಿಸಿಕೊಂಡರು. ಆದರೆ ಇತ್ತೀಚಿಗೆ ಅವರ ಜೋರು ಕಡಿಮೆಯಾಗಿದೆ ಎನ್ನಬಹುದಾಗಿದೆ. ಇನ್ನೂ ಸಿನೆಮಾಗಳಲ್ಲಿ ಬಿಗ್ ಬ್ರೇಕ್ ಕಂಡುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಅದೇ ರೀತಿ ತೆಲುಗು ನಟಿಯಾಗಿ ಕ್ರೇಜ್ ಸಂಪಾದಿಸಿಕೊಂಡಿದ್ದ ರೆಜಿನಾ ಸಹ ಸಾಲು ಸಾಲು ಸಿನೆಮಾಗಳ ಮೂಲಕ ಬ್ಯುಸಿಯಾಗಿದ್ದಾರೆ. ಗ್ಲಾಮರ್‍ ಬ್ಯೂಟಿ ಎಂದೇ ಖ್ಯಾತಿ ಪಡೆದುಕೊಂಡ ರೆಜಿನಾ ಒಳ್ಳೆಯ ಅವಕಾಶಗಳನ್ನು ದಕ್ಕಿಸಿಕೊಂಡು ಸಿನೆಮಾಗಳಲ್ಲಿ ಮುನ್ನುಗ್ಗುತ್ತಿದ್ದಾರೆ. ಇದೀಗ ಅವರಿಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂಬ ರೂಮರ್‍ ಗಳು ಬಿರುಗಾಳಿಯಂತೆ ಹರಿದಾಡುತ್ತಿವೆ.

ನಟ ಸಂದೀಪ್ ಪ್ರಸ್ತಾನಂ ಎಂಬ ತೆಲುಗು ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಳಿಕ ವೆಂಕಟಾದ್ರಿ ಎಕ್ಸ್ ಪ್ರೆಸ್, ಬಿರುವಾ ಸೇರಿದಂತೆ ಕೆಲವೊಂದು ಹಿಟ್ ಸಿನೆಮಾಗಳ ಮೂಲಕ ತೆಲುಗು ಪ್ರೇಕ್ಷಕರಿಗೆ ಹತ್ತಿರವಾದರು. ಸೌತ್ ಸಿನಿರಂಗದಲ್ಲಿ ಬಹುಬೇಡಿಕೆ ಹೊಂದಿರುವ ರೆಜಿನಾ ಸಂದೀಪ್ ಗೂ ಮುಂಚೆಯೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು.  ಸಂದೀಪ್ ಹಾಗೂ ರೆಜಿನಾ ಇಬ್ಬರೂ ರಾರಾ ಕೃಷ್ಣಯ್ಯಮ ನಕ್ಷತ್ರಂ ಎಂಬ ತೆಲುಗು ಸಿನೆಮಾಗಳಲ್ಲಿ ನಟಿಸಿದ್ದರು. ಸದ್ಯ ನಟಿ ರೆಜಿನಾ ಕೈತುಂಬಾ ಸಿನೆಮಾಗಳಿದ್ದು, ಆಕೆ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇದೀಗ ಸಂದೀಪ್ ಹಾಗೂ ರೆಜಿನಾ ರವರ ಒಂದು ಸೆಲ್ಫಿ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ನಟ ಸಂದೀಪ್ ಹಾಗೂ ರೆಜಿನಾ ಡೇಟಿಂಗ್ ನಲ್ಲಿದ್ದಾರೆ ಎಂಬ ರೂಮರ್‍ ಸೋಷಿಯಲ್ ಮಿಡಿಯಾ ತುಂಬಾ ಹರಿದಾಡುತ್ತಿದೆ. ಈ ಹಿಂದೆ ಈಗಾಗಲೇ ಅವರ ಬಗ್ಗೆ ಅನೇಕ ಬಾರಿ ಇಂತಹ ರೂಮರ್‍ ಗಳು ಹುಟ್ಟಿಕೊಂಡಿತ್ತು. ಇದೀಗ ಮತ್ತೊಮ್ಮೆ ಅವರ ಡೇಟಿಂಗ್ ವಿಚಾರ ಹೊರಬಂದಿದೆ. ಇದೀಗ ಅವರ ಅವರ ಕ್ಲೋಜಡ್ ಸೆಲ್ಫಿಯೊಂದು ಹಂಚಿಕೊಂಡಿದ್ದರು. ರೆಜಿನಾಗೆ ಹ್ಯಾಪಿ ಬರ್ತ್ ಡೇ ಬೇಬಿ, ಲವ್ ಯು, ಎಲ್ಲಾ ವಿಚಾರಗಳಲ್ಲೂ ಸಹ ನಿನಗೆ ಒಳ್ಳೆಯದು ಆಗಲಿ ಎಂದು ಕೋರುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಸದ್ಯ ಈ ಪೊಟೋ ಮೂಲಕ ಇಬ್ಬರೂ ಡೇಟಿಂಗ್ ನಲ್ಲಿರುವುದು ನಿಜ ಎಂದು ರೂಮರ್‍ ಗಳು ಜೊರಾಗಿದ್ದು, ಈ ಬಗ್ಗೆ ಸಂದೀಪ್ ಅಥವಾ ರೆಜಿನಾ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Previous articleಸ್ಲೀವ್ ಲೆಸ್ ರವಿಕೆ, ತಲೆಯಲ್ಲಿ ಮಲ್ಲಿಗೆ ಧರಿಸಿ ಟ್ರೆಡಿಷನಲ್ ಆಗಿಯೇ ಫಿದಾ ಆಗುವಂತಹ ಪೋಸ್ ಕೊಟ್ಟ ಪೂಜಾ ಹೆಗ್ಡೆ….!
Next articleಶಾರ್ಟ್ ಡ್ರೆಸ್ ಧರಿಸಿ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ ಅಖಂಡ ಬ್ಯೂಟಿ ಪ್ರಗ್ಯಾ ಜೈಸ್ವಾಲ್….!