ಎರಡನೇ ಮದುವೆಯ ಬಗ್ಗೆ ಸ್ಪಷ್ಟನೆ ಕೊಟ್ಟ ಮಂಚು ಮನೋಜ್, ಶೀಘ್ರದಲ್ಲೇ ಹೊಸ ಜೀವನ ಸ್ಟಾರ್ಟ್ ಆಗಲಿದೆ ಎಂದ ಮನೋಜ್…..!

ಟಾಲಿವುಡ್ ನಲ್ಲಿ ಮಂಚು ಕುಟುಂಬದ ಖ್ಯಾತ ನಟ ಮಂಚು ಮನೋಜ್ ಕಳೆದೆರಡು ವರ್ಷಗಳ ಹಿಂದೆಯಷ್ಟೆ ಪ್ರಣತಿ ಯೊಂದಿಗೆ ವಿಚ್ಚೇದನ ಪಡೆದುಕೊಂಡರು. ಸುಮಾರು ದಿನಗಳಿಂದ ಮತ್ತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಇಂಟರ್‍ ನೆಟ್ ನಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. ಭೂಮಾ ನಾಗಿರೆಡ್ಡಿ ಎಂಬುವವರ ಎರಡನೇ ಪುತ್ರಿ ಭೂಮಾ ಮೌನಿಕ ರೆಡ್ಡಿ ಯವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೀಗ ಮನೋಜ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ತೆಲುಗು ನಟ ಮಂಚು ಮನೋಜ್ ತನ್ನ ಮೊದಲನೇ ಪತ್ನಿ ಪ್ರಣತಿಯನ್ನು ಕಳೆದ 2015 ರಲ್ಲಿ ಮದುವೆಯಾದರು. ಬಳಿಕ 2019 ರಲ್ಲಿ ವಿಚ್ಚೇದನ ಪಡೆದುಕೊಂಡರು. ಬಳಿಕ ಸಿಂಗಲ್ ಆಗಿಯೇ ಜೀವನ ಸಾಗಿಸುತ್ತಿರುವ ಮನೋಜ್ ಮಾಜಿ ಮಂತ್ರಿ ಭೂಮಾನಾಗಿರೆಡ್ಡಿ ಮಗಳು ಭೂಮಾ ಮೌನಿಕಾ ರೆಡ್ಡಿಯೊಂದಿಗೆ ಸಹಜೀವನ ನಡೆಸುತ್ತಿದ್ದಾರೆ ಎಂಬ ಪ್ರಚಾರ ಜೋರಾಗಿಯೇ ನಡೆಯುತ್ತಿದೆ. ಇದನ್ನು ಪುಷ್ಟಿ ಕರಿಸುವಂತೆ ಕಳೆದ ಗಣೇಶ ಹಬ್ಬದಂದು ಇಬ್ಬರೂ ಜೊತೆಯಾಗಿಯೇ ಬಂದು ಪೂಜೆಯಲ್ಲಿ ಭಾಗವಹಿಸಿದ್ದರು. ಅಂದಿನಿಂದ ಇಬ್ಬರ ಬಗ್ಗೆ ಸುದ್ದಿಗಳು ಹರಿದಾಡಲು ಶುರುವಾಗಿತ್ತು. ಇದೀಗ ಮಂಚು ಮನೋಜ್ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.  ಇತ್ತೀಚಿಗಷ್ಟೆ ಮಿಡಿಯಾದೊಂದಿಗೆ ಮಾತನಾಡಿದ ಮನೋಜ್ ತಮ್ಮ ಜೀವನದ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಇತ್ತೀಚಿಗಷ್ಟೆ ನಟ ಮನೋಜ್ ದರ್ಗಾಗೆ ಭೇಟಿ ಕೊಟ್ಟು, ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ಈ ವೇಳೆ ಮಿಡಿಯಾದೊಂದಿಗೆ ಮಾತನಾಡಿದ ಅವರು ಶೀಘ್ರದಲ್ಲೇ ಹೊಸ ಸಿನೆಮಾಗಳನ್ನು ಪ್ರಾರಂಭಿಸುವುದಾಗಿ ಹಾಗೂ ಹೊಸ ಜೀವನವನ್ನೂ ಸಹ ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ. ನೇರವಾಗಿ ಮನೋಜ್ ಮೌನಿಕಾ ರೆಡ್ಡಿ ಬಗ್ಗೆ ಮಾತನಾಡದೇ ಇದ್ದರೂ ಸಹ ಹೊಸ ಜೀವನ ಪ್ರಾರಂಭಿಸುವುದಾಗಿ ಹಿಂಟ್ ಕೊಟ್ಟಿದ್ದಾರೆ. ಸುಮಾರು ದಿನಗಳಿಂದ ಮೌನಿಕಾ ರೆಡ್ಡಿ ಜೊತೆಯಾಗಿಯೇ ಸಹಜೀವನ ನಡೆಸುತ್ತಿದ್ದಾರೆ ಎಂಬ ಗುಸು ಗುಸು ಪಿಸು ಪಿಸು ಕೇಳಿಬರುತ್ತಿದೆ. ಅಂತಹ ಸಮಯದಲ್ಲಿ ಮನೋಜ್ ಶೀಘ್ರದಲ್ಲೇ ಹೊಸ ಜೀವನ ಪ್ರಾರಂಭಿಸುವುದಾಗಿ ಹೇಳಿದ ಕಾರಣದಿಂದ ಮನೋಜ್ ಹಾಗೂ ಮೌನಿಕಾ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಈ ಬಗ್ಗೆ ಅವರು ಮದುವೆ ಯಾವಾಗ ಆಗಲಿದ್ದಾರೆ ಎಂಬ ಬಗ್ಗೆ ಸಹ ಕುತೂಹಲ ಮೂಡಿಸಿದೆ.

ಇನ್ನೂ ಮಂಚು ಮನೋಜ್ ಹಾಗೂ ಮೌನಿಕಾ ರೆಡ್ಡಿಯವರಿಗೆ ಈ ಹಿಂದೆ ಬೇರೆ ಬೇರೆ ಮದುವೆಯಾಗಿತ್ತು. ಆದರೆ ಮೌನಿಕಾ ಸಹ ಪತಿಯಿಂದ ವಿಚ್ಚೇದನ ಪಡೆದುಕೊಂಡಿದ್ದಾರೆ. ಅದೇ ರೀತಿ ಮನೋಜ್ ಸಹ ವಿಚ್ಚೇಧನ ಪಡೆದುಕೊಂಡಿದ್ದಾರೆ. ಇಬ್ಬರೂ ಸಹ ಒಂಟಿಯಾಗಿ ಜೀವನ ಸಾಗಿಸುತ್ತಿದ್ದು, ಈ ಎರಡೂ ಕುಟುಂಬಗಳಿಗೂ ಸಹ ಅನೇಕ ವರ್ಷಗಳಿಂದ ಅವಿನಾಭಾವ ಸಂಬಂಧವಿದೆ. ಈ ಹಿನ್ನೆಲೆಯಲ್ಲಿ ಅನೇಕ ಬಾರಿ ಈ ಎರಡೂ ಕುಟುಂಬಗಳಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲೂ ಸಹ ಕಾಣಿಸಿಕೊಳ್ಳುತ್ತಿದ್ದರು.

Previous articleಹಾಟ್ ಕಿಲ್ಲಿಂಗ್ ಲುಕ್ಸ್ ಕೊಟ್ಟ ತೆಲುಗು ಬ್ಯೂಟಿ, ಬಾಲಿವುಡ್ ನಟಿಯರಿಗಿಂತ ಕಡಿಮೆಯಿಲ್ಲ ಎಂಬಂತೆ ಪೋಸ್ ಕೊಟ್ಟ ಬ್ಯೂಟಿ…….!
Next articleಕಾಂತಾರ ಸಿನೆಮಾದ ಮೇಲೆ ಬಾಲಿವುಡ್ ಯಂಗ್ ಬ್ಯೂಟಿ ಜಾನ್ವಿ ಕಪೂರ್ ಇಂಟ್ರಸ್ಟಿಂಗ್ ಕಾಮೆಂಟ್, ಆಕೆ ಹೇಳಿದ್ದು ಏನು?