ಸುಡಿಗಾಲಿ ಸುಧೀರ್ ಗೆ ಆರೋಗ್ಯ ಸಮಸ್ಯೆಯಂತೆ, ಆತನ ಆರೋಗ್ಯ ಸಮಸ್ಯೆಯೇನು? ವೈರಲ್ ಆದ ಸುದ್ದಿ…!

ತೆಲುಗು ಕಿರುತೆರೆಯಲ್ಲಿ ಕಾಮಿಡಿ ಶೋ, ಜಬರ್ದಸ್ತ್ ಜೊತೆಗೆ ಸಿನೆಮಾಗಳ ಮೂಲಕ ಕ್ರೇಜ್ ಹೊಂದಿರುವ ನಟರಲ್ಲಿ ಸುಡಿಗಾಲಿ ಸುಧೀರ್‍ ಒಬ್ಬರಾಗಿದ್ದಾರೆ. ಇತ್ತಿಚಿಗಷ್ಟೆ ಜಬರ್ದಸ್ತ್ ಶೋ ನಿಂದ ಹೊರಬಂದು ಕೆಲವೊಂದು ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಸಿನೆಮಾ ಸ್ಟಾರ್‍ ನಟರಿಗಿರುವಂತೆ ಕಿರುತೆರೆಯಲ್ಲೂ ಸಹ ಸುಧೀರ್‍ ಗೆ ಬಿಗ್ ಫ್ಯಾನ್ ಫಾಲೋಯಿಂಗ್ ಇದೆ. ಆ ಮೂಲಕ ಕಿರುತೆರೆಯಲ್ಲಿ ಬಹುಬೇಡಿಕೆಯ ಕಲಾವಿದರಾಗಿ ಹೊರಹೊಮ್ಮಿದ್ದಾರೆ. ಜೊತೆಗೆ ಸಿನೆಮಾಗಳಲ್ಲೂ ಸಹ ನಟಿಸಿದ್ದರು. ಆದರೆ ಆತನಿಗೆ ಬಿಗ್ ಬ್ರೇಕ್ ನೀಡುವ ಸಿನೆಮಾ ಇನ್ನೂ ಸಿಕ್ಕಿಲ್ಲ.

ಇನ್ನೂ ಸುಧೀರ್‍ ಇತ್ತೀಚಿಗಷ್ಟೆ ಜಬರ್ದಸ್ತ್ ಶೋ ನಿಂದ ಹೊರಹೋಗಿದ್ದು, ಬೇರೆ ಶೋಗಳ ಮೂಲಕ ಪುಲ್ ಆಕ್ಟೀವ್ ಆಗುತ್ತಾರೆ ಎಂದುಕೊಳ್ಳಲಾಗಿತ್ತು. ಆದರೆ ಆತ ಮಾತ್ರ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಸಿನೆಮಾಗಳಲ್ಲಿ ಆಫರ್‍ ಗಳು ಬರುತ್ತಿರುವ ಕಾರಣದಿಂದ ಆತ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರು ಎಂದುಕೊಂಡಿದ್ದರು. ಆದರೆ ಸುಧೀರ್‍ ಸಿನೆಮಾಗಳ ಕಾರಣದಿಂದ ಕಾಣಿಸಿಕೊಳ್ಳುತ್ತಿಲ್ಲ. ಬದಲಿಗೆ ಆತನಿಗೆ ಆರೋಗ್ಯ ಸಮಸ್ಯೆಯೊಂದು ಎದುರಾಗಿದ್ದು, ಆ ಕಾರಣದಿಂದಲೇ ಆತ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಎಂಬ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ. ಅಷ್ಟಕ್ಕೂ ಸುಧೀರ್ ಯಾವ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ವಿಚಾರಕ್ಕೆ ಬಂದರೇ.

ಕೆಲವೊಂದು ಮಾದ್ಯಮಗಳ ಪ್ರಕಾರ ಸುಧೀರ್‍ ಭಯಂಕರವಾದ ರೋಗದಿಂದ ಬಳಲುತ್ತಿದ್ದಾರಂತೆ. ಜೊತೆಗೆ ಆತ ತೆರೆಮೇಲೆ ಕಾಣಿಸಿಕೊಳ್ಳುವುದು ಸಹ ಕಷ್ಟ ಎಂಬೆಲ್ಲಾ ಸುದ್ದಿಗಳು ಹರಿದಾಡುತ್ತಿವೆ. ಈ ರೂಮರ್‍ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸುಧೀರ್‍ ಅಭಿಮಾನಿಗಳೂ ಸಹ ಕಂಗಾಲಾಗಿದ್ದಾರೆ. ಅಷ್ಟಕ್ಕೂ ಸುಧೀರ್‍ ಗೆ ಏನಾಗಿದೆ. ಆತ ಹೇಗಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ನಿಜಕ್ಕೂ ಸುಧೀರ್‍ ಭಯಂಕರವಾದ ವ್ಯಾಧಿಯಿಂದ ಬಳಲುತ್ತಿದ್ದಾರೆಯೇ ಅಥವಾ ಇದೆಲ್ಲಾ ರೂಮರ್‍ ಗಳೇ ಎಂದು ಅಭಿಮಾನಿಗಳು ಪ್ರಶ್ನೆಗಳನ್ನು ಸಹ ಹಾಕುತ್ತಿದ್ದಾರೆ. ಇನ್ನೂ ಈ ಸುದ್ದಿಯ ಬಗ್ಗೆ ಸುಧೀರ್‍ ಆಗಲಿ ಆತನ ಸ್ನೇಹಿತರಾಗಲಿ ಅಥವಾ ಅವರ ಕುಟುಂಬಸ್ಥರಾಗಲಿ ಯಾವುದೇ ಪ್ರತಿಕ್ರಿಯೆನ್ನು ಸಹ ನೀಡಿಲ್ಲ. ಈ ಕುರಿತು ಯಾರಾದರೂ ಅಧಿಕೃತ ಮಾಹಿತಿ ನೀಡುತ್ತಾರೇಯೆ ಎಂಬ ಆಶಾಭಾವನೆಯನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ.

ಸುಡಿಗಾಲಿ ಸುಧೀರ್‍ ಒಬ್ಬ ಸಾಮಾನ್ಯ ಜಾಧುಗಾರಾನಾಗಿದ್ದ. ಆದರೆ ಆತ ಜಬರ್ದಸ್ತ್ ಶೋ ಗೆ ಎಂಟ್ರಿ ಕೊಟ್ಟ ಬಳಿಕ ಸೆಲೆಬ್ರೆಟಿಯಾದರು. ದೊಡ್ಡ ನೇಮ್ ಫೇಮ್ ದಕ್ಕಿಸಿಕೊಂಡರು. ಇನ್ನೂ ಸುಧೀರ್‍ ಹಾಗೂ ರಶ್ಮಿ ನಡುವೆ ಲವ್ ಟ್ರಾಕ್ ಸಹ ನಡೆಯುತ್ತಿದೆ ಎಂದು ಹೇಳಲಾಗುತ್ತಿತ್ತು. ಇತ್ತಿಚಿಗಷ್ಟೆ ಆತ ಜಬರ್ದಸ್ತ್ ಶೋ ನಿಂದ ಹೊರಬಂದ ಬಳಿಕ ಇತರೆ ಕೆಲವೊಂದು ಶೋಗಳ ಮೂಲಕ ಕಾಣಿಸಿಕೊಳ್ಳುತ್ತಿದ್ದರು. ಆದರೆ ಕೆಲವು ದಿನಗಳಿಂದ ಆತ ಎಲ್ಲಿಯೂ ಕಾಣಿಸಿಕೊಳ್ಳದ ಕಾರಣ ಆತನಿಗೆ ಏನು ಸಮಸ್ಯೆಯಾಗಿದೆ ಎಂದು ಅಭಿಮಾನಿಗಳು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

Previous articleಬಾಲಕೃಷ್ಣ ರವರ ಕುರಿತು ಶಾಕಿಂಗ್ ಹೇಳಿಕೆ ಕೊಟ್ಟ ರೋಜಾ, ಪ್ಲೂಟು ಬಾಬು ಮುಂದು ಊದು, ಜಗನ್ ಅನ್ನ ಮುಂದು ಕಾದು ಎಂದ್ರು..!
Next articleಕತ್ತಿ ಗುರಾಣಿ ಹಿಡಿದ ಕಾಜಲ್, ಮಾರ್ಷಲ್ ಆರ್ಟ್ಸ್ ಸಹ ಕಲಿಯುತ್ತಿದ್ದಾರಂತೆ ಚಂದಮಾಮ ಕಾಜಲ್ ಅಗರ್ವಾಲ್…!