ತಮಿಳಿನ ಕಿರುತೆರೆ ನಟಿಯೊಬ್ಬರು ಕಾಲಿವುಡ್ ಸ್ಟಾರ್ ನಟ ಸಿಂಬು ಮನೆಯ ಮುಂದೆ ನನಗೆ ಸಿಂಬು ಬೇಕು ಎಂದು ಪ್ರತಿಭಟನೆ ನಡೆಸಿದ ಕುರಿತು ವರದಿಯಾಗಿದೆ. ಮಧ್ಯರಾತ್ರಿ ಸಿಂಬು ಮನೆಯ ಮುಂದೆ ಕುಳಿತು ನನಗೆ ಸಿಂಬು ಬೇಕು ಎಂದು ಹೈಡ್ರಾಮಾ ಸೃಷ್ಟಿ ಮಾಡಿದ್ದಾರೆ. ಇದೀಗ ಈಕೆ ಏಕೆ ಪ್ರತಿಭಟನೆ ಮಾಡಿದಳು ಎಂಬುದರ ಕುರಿತು ಕಾಲಿವುಡ್ ನಲ್ಲಿ ಚರ್ಚೆ ಶುರುವಾಗಿದೆ.
ಕಾಲಿವುಡ್ ನಲ್ಲಿ ಕೆಲವು ದಿನಗಳ ಹಿಂದೆಯಷ್ಟೆ ನಟ ಸಿಂಬು ಹಾಗೂ ನಟಿ ನಿಧಿ ಅಗರ್ವಾಲ್ ನಡುವೆ ಪ್ರೇಮ ಪಯಣ ಸಾಗುತ್ತಿದೆ. ಶೀಘ್ರದಲ್ಲೇ ಈ ಜೋಡಿ ಮದುವೆಯಾಗಲಿದೆ ಎಂಬೆಲ್ಲಾ ಸುದ್ದಿಗಳು ಹರಿದಾಡಿದ್ದವು. ಇದೀಗ ಮತ್ತೊಬ್ಬ ಹುಡುಗಿ ಸಿಂಬು ಬೇಕು ಎಂದು ಪ್ರತಿಭಟನೆ ಮಾಡುತ್ತಿರುವುದು ಚರ್ಚೆಗೆ ಕಾರಣವಾಗಿದೆ. ತಮಿಳಿನಿ ಯಾರಡಿ ನೀ ಮೋಹಿನಿ ಎಂಬ ಧಾರವಾಹಿಯ ಮೂಲಕ ಖ್ಯಾತಿ ಪಡೆದ ಶ್ರೀನಿಧಿ ಎಂಬ ಕಿರುತೆರೆ ನಟಿಯೇ ಸಿಂಬು ಬೇಕು ಎಂದು ಸಿಂಬು ಮನೆಯ ಮುಂದೆ ಹೈಡ್ರಾಮ ಮಾಡಿದ ನಟಿ. ಈ ಹಿಂದೆಯೂ ಸಹ ಸೋಷಿಯಲ್ ಮಿಡಿಯಾದಲ್ಲಿ ಶ್ರೀನಿಧಿ ಸಿಂಬು ರವರನ್ನು ಮದುವೆಯಾಗಲು ಸಿದ್ದ ಎಂದು ಹೇಳಿದ್ದು, ಈ ಕುರಿತು ವಿಡಿಯೋ ಸಹ ಬಿಡುಗಡೆ ಮಾಡಿದ್ದರಂತೆ. ಇದರ ಜೊತೆಗೆ ಶ್ರೀನಿಧಿ ಆಗಾಗ ಕೆಲವೊಂದು ನಟರ ಬಗ್ಗೆ ಟೀಕೆ ಮಾಡುತ್ತಿರುತ್ತಾರೆ. ಇದೀಗ ಸಿಂಬು ಮನೆಯ ಮುಂದೆಯೇ ಹೈಡ್ರಾಮಾ ಸೃಷ್ಟಿಸಿದ್ದಾಳೆ.
ಕಿರುತೆರೆ ನಟಿ ಶ್ರೀನಿಧಿ ಆಗಾಗ ಸೋಷಿಯಲ್ ಮಿಡಿಯಾದಲ್ಲಿ ನಟರನ್ನು ಟೀಕಿಸುತ್ತಿರುವ ಹಿನ್ನೆಲೆಯಲ್ಲಿ ಸಿಂಬು ರನ್ನು ಮದುವೆಯಾಗುತ್ತೇನೆ ಎಂದು ಹೇಳಿದರೂ ಕೂಡ ಯಾರೂ ಕಿವಿಗೊಟ್ಟಿರಲಿಲ್ಲ ಎನ್ನಲಾಗುತ್ತಿದೆ. ಇದೀಗ ಏಕಾಏಕಿ ನಟ ಸಿಂಬು ಮನೆಯ ಮುಂದೆ ಸಿಂಬು ಬೇಕು ಎಂದು ಪ್ರತಿಭಟನೆ ಮಾಡಿದ್ದಾರೆ. ಸಿಂಬುರನ್ನು ನೋಡದೇ ನಾನು ಇಲ್ಲಿಂದ ಹೋಗುವುದಿಲ್ಲ. ನನಗೆ ಸಿಂಬು ಬೇಕು ಬೇಕು ಎಂದು ಹೈಡ್ರಾಮಾ ಮಾಡಿದ್ದಾಳೆ. ಈಕೆ ಜೋರಾದ ಕೂಗಾಟ ಕೇಳಿ ಸಿಂಬು ಮನೆಯ ಅಕ್ಕಪಕ್ಕದವರು ಬಂದು ನಟಿಯನ್ನು ಸಮಾಧಾನ ಪಡಿಸಿ ಅಲ್ಲಿಂದ ವಾಪಸ್ಸು ಕಳುಹಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಸಿಂಬು ಏನು ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದುಬಂದಿದೆ.
ಇನ್ನೂ ಕಾಲಿವುಡ್ ನಲ್ಲಿ ತನ್ನದೇ ಆದ ಖ್ಯಾತಿ ಪಡೆದುಕೊಂಡಿರುವ ನಟ ಸಿಂಬು. ಸದ್ಯ ಸಿಂಬು “ಪತ್ತು ತಲೆ” ಎಂಬ ಸಿನೆಮಾ ಕೆಲಸಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಇನ್ನೂ ಈ ಸಿನೆಮಾ ಮೇಲೆ ಹೆಚ್ಚು ನಿರೀಕ್ಷೆಯನ್ನು ಇಟ್ಟುಕೊಂಡಿರುವ ಸಿಂಬು ಸಿನೆಮಾಗಾಗಿ ಬಹಳಷ್ಟು ಕೇರ್ ತೆಗೆದುಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಕೊರೋನಾ ಕುಮಾರ್ ಸೇರಿದಂತೆ ಕೆಲವೊಂದು ಸಿನೆಮಾಗಳಲ್ಲಿ ಸಿಂಬು ಪುಲ್ ಬ್ಯುಸಿಯಾಗಿದ್ದಾರೆ.
ತೆಲುಗಿನಲ್ಲಿ ಬ್ಲಾಕ್ ಬ್ಲಸ್ಟರ್ ಹಿಟ್ ಹೊಡೆದ ವಕೀಲ್ ಸಾಭ್ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ಅನನ್ಯ ನಾಗಳ್ಳ ಇತ್ತೀಚಿಗೆ ಸಖತ್…
ಬಾಲಿವುಡ್ ನಲ್ಲಿ ಫೈರ್ ಬ್ರಾಂಡ್ ಎಂತಲೇ ಖ್ಯಾತಿ ಪಡೆದುಕೊಂಡ ಸ್ಟಾರ್ ನಟಿ ಕಂಗನಾ ರಾನೌತ್ ಆಗಾಗ ದೊಡ್ಡ ದೊಡ್ಡ ಸೆಲೆಬ್ರೆಟಿಗಳ…
ಸಿನೆಮಾಗಳಲ್ಲಿ ಹೋಮ್ಲಿಯಾಗಿ, ಓವರ್ ಗ್ಲಾಮರ್ ಶೋ ಮಾಡದೇ ಕ್ರೇಜ್ ಸಂಪಾದಿಸಿಕೊಂಡ ನಟಿ ಅನುಪಮಾ ಪರಮೇಶ್ವರನ್ ಇತ್ತೀಚಿಗೆ ಗ್ಲಾಮರ್ ಡೋಸ್ ಏರಿಸುತ್ತಿದ್ದಾರೆ.…
ಬಾಲಿವುಡ್ ನ ಮುನ್ನಾ ಮೈಕಲ್ ಎಂಬ ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ನಿಧಿ ಅಗರ್ವಾಲ್ ಕಡಿಮೆ ಸಮಯದಲ್ಲೇ…
ಬಾಲಿವುಡ್ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಅಭಿನಯದ ಮೂಲಕ ಕ್ರೇಜ್ ಪಡೆದುಕೊಂಡಿದ್ದಾರೆ. ಬಾಲಿವುಡ್ ಸ್ಟಾರ್ ನಟ ಶತ್ರುಘ್ನ ಸಿನ್ಹಾ…
ಸಿನೆಮಾ ಸೆಲೆಬ್ರೆಟಿಗಳ ಮದುವೆ ಬಗ್ಗೆ ಸುದ್ದಿಗಳು ಸದಾ ಕೇಳಿಬರುತ್ತಲೇ ಇರುತ್ತದೆ. ಅದರಲ್ಲೂ ನಟಿಯರ ಮದುವೆ ಬಗ್ಗೆ ಅವರ ಅಭಿಮಾನಿಗಳೂ ಸೇರಿದಂತೆ…
Leave a Comment