Film News

ತಮಿಳುನಾಡು ಸರ್ಕಾರದಿಂದ ಬಿಗ್ ಅಪ್ ಡೇಟ್: ಖುಷಿಯಲ್ಲಿ ಚಿತ್ರರಂಗ!

ಚೆನೈ: ಕೊರೋನಾ ಹಾವಳಿಯನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಲಾಕ್ ಡೌನ್ ಹೇರಿದ್ದು, ಸುಮಾರು  ತಿಂಗಳುಗಳ ಕಾಲ ಚಿತ್ರಮಂದಿರಗಳು ಬಂದ್ ಆಗಿತ್ತು. ನಂತರ ಹಂತ ಹಂತವಾಗಿ ಲಾಕ್ ಡೌನ್ ತೆರವು ಮಾಡಿದಾಗ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಸನಗಳ ಭರ್ತಿಗೆ ಅವಕಾಶ ನೀಡಿತ್ತು ಸರ್ಕಾರ.

ಇದೀಗ ತಮಿಳುನಾಡು ಸರ್ಕಾರ ನಿರ್ಮಾಪಕರಿಗೆ ಗುಡ್ ನ್ಯೂಸ್ ನೀಡಿದೆ. ಅದು ಏನೆಂದರೇ ತಮಿಳುನಾಡಿನಲ್ಲಿನ ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಆಸನಗಳ ಭರ್ತಿಗೆ ಅವಕಾಶ ನೀಡಿದೆ ಎನ್ನಲಾಗಿದೆ. ನಿರ್ಮಾಪಕರು ಧೈರ್ಯವಾಗಿ ಬಿಗ್ ಬಜೆಟ್ ಚಿತ್ರಗಳನ್ನು ಧೈರ್ಯವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬಹುದಾಗಿದೆ.

ಲಾಕ್ ಡೌನ್ ತೆರವಿನ ನಂತರ ಚಿತ್ರಮಂದಿರಗಳನ್ನು ತೆರೆಯಲು ಸರ್ಕಾರ ಅವಕಾಶ ನೀಡಿದ್ದು, ಶೇ.೫೦ ರಷ್ಟು ಆಸನಗಳ ಭರ್ತಿಗೆ ಮಾತ್ರ ಅವಕಾಶ ನೀಡಿತ್ತು. ಇದರಿಂದಾಗಿ ಬಿಗ್ ಬಜೆಟ್ ಸಿನೆಮಾಗಳನ್ನು ಥಿಯೇಟರ್ ಗಳಲ್ಲಿ ರಿಲೀಸ್ ಮಾಡಲು ಹಿಂದೇಟು ಹಾಕುತ್ತಿದ್ದರು. ಇನ್ನೂ ಜನವರಿ ಮಾಹೆಯಿಂದಾದರೂ ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಆಸನಗಳ ಭರ್ತಿಗೆ ಅವಕಾಶ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿತ್ತು ಚಿತ್ರರಂಗ. ಇದೀಗ ತಮಿಳುನಾಡು ಸರ್ಕಾರ ಅವಕಾಶ ನೀಡಿದೆ.

ಮತ್ತೊಂದು ವಿಚಾರವೆಂದರೇ ಈ ಹಿಂದೆ ತಮಿಳು ನಟ ವಿಜಯ್ ತಮಿಳುನಾಡು ಸಿಎಂ ಪಳನಿಸ್ವಾಮಿ ರವರನ್ನು ಭೇಟಿ ಮಾಡಿ ಚಿತ್ರಮಂದಿರಗಳಲ್ಲು ಶೇ.100 ರಷ್ಟು ಆಸನಗಳ ಭರ್ತಿಗೆ ಅವಕಾಶ ಮಾಡಿಕೊಡಿ ಎಂದು ಮನವಿ ಸಹ ಮಾಡಿದ್ದರು. ನಂತರ ಮಾಸ್ಟರ್ ಚಿತ್ರವನ್ನು ಜ.೧೩ ರಂದು ರಿಲೀಸ್ ಮಾಡಲು ಅನೌನ್ಸ್ ಸಹ ಮಾಡಿದ್ದರು. ಪ್ರಸ್ತುತ ತಮಿಳುನಾಡು ಸರ್ಕಾರ ಮಾತ್ರ ಈ ಆದೇಶ ಜಾರಿ ಮಾಡಿದ್ದು, ಇತರೆ ರಾಜ್ಯಗಳು ಯಾವಾಗ ನಿರ್ಧಾರಕ್ಕೆ ಬರಲಿದೆ ಎಂಬ ಮಾಹಿತಿಗಾಗಿ ಆಯಾ ಚಿತ್ರರಂಗ ಕಾಯುತ್ತಿದೆ.

Trending

To Top