Film News

ಮದುವೆ ಕುರಿತಂತೆ ಕ್ಲಾರಿಟಿ ಕೊಟ್ಟ ನಟ, ಶೀಘ್ರದಲ್ಲೇ ಪ್ರೇಯಸಿಯನ್ನು ಪರಿಚಯಿಸಲಿದ್ದಾರಂತೆ ವಿಶಾಲ್…..!

ಇತ್ತೀಚಿಗೆ ಕೆಲವು ದಿನಗಳಿಂದ ತಮಿಳಿನ ಸ್ಟಾರ್‍ ನಟ ವಿಶಾಲ್ ರವರ ಮದುವೆ ಬಗ್ಗೆ ಅನೇಕ ಸುದ್ದಿಗಳು ಹರಿದಾಡುತ್ತಿವೆ. ತಮಿಳು ಸಿನಿರಂಗದಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚಿಲರ್‍ ಆಗಿರುವ ವಿಶಾಲ್ ವಯಸ್ಸಿನಲ್ಲಿ ಹಾಫ್ ಸೆಂಚುರಿ ಹೊಡೆಯಲು ಹತ್ತಿರದಲ್ಲೇ ಇದ್ದಾರೆ. ಅನೇಕ ಬಾರಿ ಅವರ ಮದುವೆ ಬಗ್ಗೆ ರೂಮರ್‍ ಗಳು ಹರಿದಾಡಿತ್ತು. ಜೊತೆಗೆ ಹೈದರಬಾದ್ ಮೂಲದ ಯುವತಿಯೊಂದಿಗೆ ಎಂಗೇಜ್ ಮೆಂಟ್ ಆಗಿ ಬಳಿಕ ಅದು ರದ್ದಾಗಿದ್ದು ಸಹ ಇದೆ. ಇದೀಗ ವಿಶಾಲ್ ಮದುವೆ ರೂಮರ್‍ ಬಗ್ಗೆ ಕ್ಲಾರಿಟಿಯನ್ನು ಕೊಟ್ಟಿದ್ದಾರೆ.

ತಮಿಳು ಸಿನಿರಂಗದಲ್ಲಿ ಮೋಸ್ಟ್ ಎಲಿಜಿಬುಲ್ ಬ್ಯಾಚಿಲರ್‍ ಎಂದ ಕೂಡಲೇ ನೆನಪಿಗೆ ಬರುವುದು ವಿಶಾಲ್. ಸುಮಾರು ವರ್ಷಗಳಿಂದ ವಿಶಾಲ್ ಮದುವೆ ಕುರಿತಂತೆ ಅನೇಕ ರೂಮರ್‍ ಗಳು ಹುಟ್ಟಿಕೊಳ್ಳುತ್ತಲೇ ಇದೆ. ಸಾಮಾನ್ಯವಾಗಿ ಸಿನೆಮಾ ರಂಗದವರ ಮೇಲೆ ಇಂತಹ ರೂಮರ್‍ ಗಳು ಆಗಾಗ ಕೇಳಿಬರುತ್ತಲೇ ಇರುತ್ತವೆ. ಈ ಹಾದಿಯಲ್ಲೇ ವಿಶಾಲ್ ರನ್ನು ಸಹ ಅವರ ಅಭಿಮಾನಿಗಳು ನೇರವಾಗಿಯೇ ಆಗಾಗ ನಿಮ್ಮ ಮದುವೆ ಯಾವಾಗ ಎಂದು ಕೇಳುತ್ತಲೇ ಇರುತ್ತಾರೆ. ವಿಶಾಲ್ ನಟಿ ಅಭಿನಯ ಎಂಬಾಕೆಯೊಂದಿಗೆ ಪ್ರೀತಿಯಲ್ಲಿದ್ದಾರೆ ಎಂದು ಹೊಸದಾಗಿ ರೂಮರ್‍ ಕೇಳಿಬರುತ್ತಿದೆ. ಇದ್ದರೂ ಪ್ರೇಮ ಪಯಣ ಸಾಗಿಸುತ್ತಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ಇನ್ನೂ ಇತ್ತೀಚಿಗಷ್ಟೆ ವಿಶಾಲ್ ತಮ್ಮ ಮದುವೆಯ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ. ಶೀಘ್ರದಲ್ಲೇ ತನ್ನ ಪ್ರೇಯಸಿಯನ್ನು ಪರಿಚಯ ಮಾಡುವುದಾಗಿ ಹಿಂಟ್ ಕೊಟ್ಟಿದ್ದಾರೆ.

ಕಳೆದ ಕೆಲವು ದಿನಗಳಿಂದ ವಿಶಾಲ್ ಹಾಗೂ ಅಭಿನಯ ಕುರಿತಂತೆ ಅನೇಕ ರೂಮರ್‍ ಗಳು ಕೇಳಿಬರುತ್ತಿದೆ. ಸದ್ಯ ಇವರಿಬ್ಬರೂ ಗಾಢ ಪ್ರೀತಿಯಲ್ಲಿದ್ದು, ಶೀಘ್ರದಲ್ಲೇ ಮದುವೆ ಸಹ ಆಗಲಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಇವರಿಬ್ಬರೂ ಮಾರ್ಕ್ ಆಂಟೋನಿ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲಿ ವಿಶಾಲ್ ಗೆ ಪತ್ನಿಯಾಗಿ ಅಭಿನಯ ನಟಿಸಿದ್ದಾರೆ. ಈ ಕಾರಣದಿಂದಲೇ ಇವರಿಬ್ಬರೂ  ಪ್ರೇಮ ಪಯಣ ಸಾಗಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದೀಗ ವಿಶಾಲ್ ಸಹ ಈ ಕುರಿತಂತೆ ಕೆಲವೊಂದು ವ್ಯಾಖ್ಯಾನಗಳನ್ನು ಮಾಡಿರುವುದು ಮತಷ್ಟು ರೂಮರ್‍ ಗಳು ಹರಿದಾಡಲು ಕಾರಣವಾಗಿದೆ. ನನಗೆ ಅರೇಂಜ್ಡ್ ಮದುವೆ ಸೆಟ್ ಆಗುವುದಿಲ್ಲ.  ಹಾಗಾಗಿ ಪ್ರೀತಿಸಿದ ಹುಡುಗಿಯನ್ನೇ ಮದುವೆಯಾಗಲಿದ್ದೇನೆ ಎಂದು ಕ್ಲಾರಿಟಿ ಕೊಟ್ಟಿದ್ದರು. ಶೀಘ್ರದಲ್ಲೇ ಪ್ರೀತಿಸಿದ ಹುಡುಗಿಯನ್ನು ಪರಿಚಯ ಮಾಡುತ್ತೇನೆ ಎಂದಿದ್ದಾರೆ. ಇನ್ನೂ ಕಲಾವಿದರ ಯೂನಿಯನ್ ಗಾಗಿ ಬಿಲ್ಡಿಂಗ್ ಕಟ್ಟುತ್ತಿದ್ದು, ಇದು ಪೂರ್ಣಗೊಂಡ ಕೂಡಲೇ ಮದುವೆ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.

ಈ ಹಿಂದೆ ವಿಶಾಲ್ ಹಾಗೂ ಶರತ್ ಕುಮಾರ್‍ ಮಗಳಾದ ವರಲಕ್ಷ್ಮೀ ಶರತ್ ಕುಮಾರ್‍ ಜೊತೆಗೆ ಪ್ರೇಮ ಪಯಣ ಸಾಗಿಸಿದ್ದರು ಎಂಬ ಸುದ್ದಿ ಸಹ ಹರಿದಾಡಿತ್ತು. ಶೀಘ್ರದಲ್ಲೇ ಇವರಿಬ್ಬರೂ ಮದುವೆ ಸಹ ಆಗಲಿದ್ದಾರೆ ಎಂದೂ ಹೇಳಲಾಗಿತ್ತು. ಬಳಿಕ ಕೆಲವೇ ದಿನಗಳಲ್ಲಿ ಈ ಸುದ್ದಿ ಸಹ ಹರಿದಾಡುವುದು ನಿಂತುಹೋಯಿತು. ಇದೀಗ ವಿಕಲಚೇತನೆಯಾದ ಅಭಿನಯ ಜೊತೆಗೆ ಪ್ರೇಮ ಪಯಣ ಸಾಗಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ವಿಶಾಲ್ ಒಳ್ಳೆಯ ಗುಣದ ಬಗ್ಗೆ ಚರ್ಚೆಗಳು ನಡೆಯಲಿದೆ ಎನ್ನಲಾಗುತ್ತಿದೆ.

Trending

To Top