ಹೈದರಾಬಾದ್: ಬಹುಬೇಡಿಕೆಯ ನಟಿ ಮಿಲ್ಕಿ ಬ್ಯೂಟಿ ತಮನ್ನಾ ರವರು ಶೂಟಿಂಗ್ ಸೆಟ್ ನಲ್ಲಿ ಬಸ್ ಓಡಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದ ಅಭಿಮಾನಿಗಳು ಲೈಕ್ ಮಾಡುವುದರ ಜೊತೆಗೆ ಕಾಮೆಂಟ್ ಗಳನ್ನು ಮಾಡಿ ಸ್ಟೇಟಸ್ ಗಳಲ್ಲಿ ಹಾಕಿಕೊಳ್ಳುತ್ತಿದ್ದಾರೆ.
ಬಸ್ ಓಡಿಸುವ ವಿಡಿಯೋವನ್ನು ಸ್ವಯಃ ತಮನ್ನಾ ರವರೇ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಶೂಟಿಂಗ್ ಸಮಯದಲ್ಲಿ ಅನೇಕ ನಟಿಯರು ಕಾರು, ಸೈಕಲ್, ಟ್ರಾಕ್ಟರ್ ಸಹ ಚಲಾಯಿಸಿ ಅಚ್ಚರಿ ಮೂಡಿಸಿದ್ದು, ಇದೀಗ ತಮನ್ನಾ ಬಸ್ ಚಲಾಯಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಕೊರೋನಾ ಲಾಕ್ ಡೌನ್ ತೆರವಿನ ನಂತರ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ತಮನ್ನಾ ಗೋಪಿಚಂದ್ ನಾಯಕನಾಗಿ ನಟಿಸುತ್ತಿರುವ ಸೀಟಿಮಾರ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಇನ್ನೂ ಈ ಚಿತ್ರವನ್ನು ಸಂಪತ್ ನಂದಿ ನಿರ್ದೇಶನ ಮಾಡುತ್ತಿದ್ದಾರೆ. ನಾಗಶೇಖರ್ ನಿರ್ದೇಶನ ಲವ್ ಮಾಕ್ ಟೇಲ್ ಕನ್ನಡ ಚಿತ್ರದ ರಿಮೇಕ್ ನಲ್ಲೂ ಸಹ ತಮನ್ನಾ ಕಾಣಿಸಿಕೊಳ್ಳಲಿದ್ದಾರೆ. ಹಿಂದಿ ಭಾಷೆಯಲ್ಲಿ ಅಂಧಾದುನ್ ಹಾಗು ತೆಲುಗು ಭಾಷೆಯ ಎಫ್-೩, ಬೋಲೆ ಚೂಡಿಯಾ ಸೇರಿದಂತೆ ಅನೇಕ ಸಿನೆಮಾಗಳಲ್ಲಿ ತಮನ್ನಾ ಬ್ಯುಸಿಯಾಗಿದ್ದಾರೆ.
