Uncategorized

ಮಿಲ್ಕೀ ಬ್ಯೂಟಿ ತಮನ್ನಾ ರವರಿಗೆ ಹರಿದು ಬಂದ ಶುಭಾಷಯಗಳು

ಹೈದರಾಬಾದ್: ದಕ್ಷಿಣ ಭಾರತದ ಬಹುಬೇಡಿಕೆ ನಟಿಯರಲ್ಲೊಬ್ಬರಾದ ಮಿಲ್ಕೀ ಬ್ಯೂಟಿ ತಮನ್ನಾ ರವರ ಹುಟ್ಟುಹಬ್ಬ ಇಂದು. ೩೧ನೇ ವಸಂತಕ್ಕೆ ಕಾಲಿಡುತ್ತಿರುವ ತಮನ್ನಾ ರವರಿಗೆ ಸ್ನೇಹಿತರು, ಸ್ಟಾರ್ ನಟರು, ಅಭಿಮಾನಿಗಳಿಂದ ಶುಭಾಷಯಗಳ ಮಹಾಪೂರವೇ ಹರಿದುಬಂದಿದೆ.

ಚಿತ್ರೀಕರಣದ ಸೆಟ್ ನಲ್ಲಿಯೇ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ತಮನ್ನಾ ರವರಿಗೆ ದಕ್ಷಿಣ ಭಾರತ ಸಿನಿರಂಗದ ಖ್ಯಾತ ನಟಿಯರಾದ ಕಾಜಲ್ ಅಗರ್ವಾಲ್, ಸಮಂತಾ, ಶೃತಿ ಹಾಸನ್ ಸೇರಿದಂತೆ ಅನೇಕ ನಟಿಯರು ಪ್ರೀತಿಯಿಂದ ಶುಭಾಷಯಗಳನ್ನು ಕೋರಿದ್ದಾರೆ. ಇನ್ನೂ ತಮನ್ನಾ ಸಿನಿರಂಗದಲ್ಲಿ ಎಲ್ಲರೊಂದಿಗೂ ಉತ್ತಮ ಸ್ನೇಹ ಭಾವ ಹೊಂದಿದ್ದಾರೆ.

ಇನ್ನೂ ಟ್ವಿಟರ್ ನಲ್ಲಿ ಕಾಜಲ್ ಅಗರ್ವಾಲ್ ಶುಭಾಷಯ ತಿಳಿಸಿದ್ದು, ಪ್ರೀತಿಯ ತಮ್ಮಿ ಹುಟ್ಟು ಹಬ್ಬದ ಶುಭಾಷಯಗಳು, ಅದ್ಬುತವಾದ ದಿನಗಳು ನಿನ್ನದಾಗಲಿ, ತಮ್ಮ ಜೀವನದಲ್ಲಿ ಉತ್ತಮವಾದದು ಎಲ್ಲಾ ಸಿಗಲಿ ಎಂದು ಆರ್ಶೀವದಿಸುತ್ತೇನೆ ಎಂದು ಹೇಳಿದ್ದು, ಇದಕ್ಕೆ ಉತ್ತರಿಸಿದ ತಮನ್ನಾ ಕಾಜು ಧನ್ಯವಾದಗಳು ಎಂದಿದ್ದಾರೆ.

ನಟಿ ಶೃತಿ ಹಾಸನ್ ಕೂಡ ಸಹ ಶುಭಾಷಯಗಳನ್ನು ತಿಳಿಸಿದ್ದಾರೆ. ತಮನ್ನಾ ಕಾಮನ್ ಡಿಪಿ ರಿಲೀಸ್ ಮಾಡಿ, ಈ ಡಿಪಿ ರಿಲೀಸ್ ಮಾಡಲು ನನಗೆ ತುಂಬಾ ಸಂತೋಷವಾಗುತ್ತಿದೆ. ಹುಟ್ಟುಹಬ್ಬದ ಶುಭಾಷಯಗಳು ಸ್ವೀಟ್ ಹಾರ್ಟ್ ಎಂದು ಪ್ರೀತಿ ಸಂದೇಶ ಕಳುಹಿಸಿದ್ದಾರೆ.

ಇನ್ನೂ ತಮನ್ನಾ ಆತ್ಮೀಯ ಗೆಳತಿ ಎಂದು ಹೇಳಲಾಗುವ ಸಮಂತಾ ಅಕ್ಕಿನೇನಿ ರವರು ಸಹ ತಮನ್ನಾ ಅವರ ಕಾಮನ್ ಡಿಪಿ ರಿಲೀಸ್ ಮಾಡಿ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರಿದ್ದಾರೆ. ಉತ್ತಮವಾದ ವರ್ಷ ನಿನ್ನದಾಗಲಿ, ಮುಂದೆ ರಿಲೀಸ್ ಆಗುವಂತಹ ನಿನ್ನ ಎಲ್ಲಾ ಚಿತ್ರಗಳನ್ನು ನೋಡು ನಾವು ಉತ್ಸುಕರಾಗಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

Trending

To Top