ದಕ್ಷಿಣ ಭಾರತ ಚಿತ್ರರಂಗದ ಮಿ’ಲ್ಕಿ ಬ್ಯೂ’ಟಿ ಎಂದೇ ಖ್ಯಾತಿಯಾಗಿರುವ ನಟಿ ತಮನ್ನಾ ಭಾಟಿಯ. ತೆಲುಗು, ತಮಿಳು ಚಿತ್ರರಂಗದಲ್ಲಿ ಬಹಳ ಸಕ್ರಿಯರಾಗಿದ್ದ ನಟಿ ಬಾಲಿವುಡ್ ಗು ಸಹ ಎಂಟ್ರಿ ನೀಡಿದ್ದರು. ಅಲ್ಲಿಯೂ ಸಹ ಈ ನಟಿಗೆ ಬಹಳ ಬೇಡಿಕೆ ಇತ್ತು. ಬಾಹುಬಲಿ ಸಿನಿಮಾದ ಆವಂತಿಕ ಪಾತ್ರ ತಮನ್ನಾರಿಗೆ ಸಾಕಷ್ಟು ಬೇಡಿಕೆ ತಂದುಕೊಟ್ಟಿತ್ತು. ಅನ್ ಲಾಕ್ ಪ್ರಕ್ರಿಯೆ ಶುರುವಾಗಿ ಹೈದರಾಬಾದ್ ನಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ತಮನ್ನಾರಿಗೆ ಕ’ರೊನಾ ಸೋಂ’ಕಿನ ಲಕ್ಷಣಗಳು ಕಾಣಿಸಿಕೊಂಡಿದ್ದು. ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದಾಗ, ಕ’ರೊನಾ ಸೋಂ’ಕು ಪಾ’ಸಿಟಿವ್ ಆಗಿರುವುದು ಧೃಢವಾಗಿದೆ. ಹಾಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ತಮನ್ನಾ. ಶೂ’ಟಿಂಗ್ ನಡೆಯುವ ವೇಳೆ ಈ ರೀತಿ ಆಗಿರುವುದು ಎಲ್ಲರಿಗೂ ಸ್ವಲ್ಪ ಆತಂಕ ತಂದಿದೆ.
ಈ ಹಿಂದೆ ತಮನ್ನಾರ ತಂದೆ ತಾಯಿಗೆ ಕ’ರೊನಾ ‘ಸೋಂಕು ಪಾ’ಸಿಟಿವ್ ಕಂ’ಡುಬಂದಿತ್ತು. ಅವರು ಸಹ ಐ’ಸೋ’ಲೇಷನ್ ನಲ್ಲಿದ್ದರು. ಜೊತೆಗೆ ಬಾಲಿವುಡ್ ನಟಿಯಾದ ಮ’ಲೈಕಾ ಅ’ರೋರಾರಿಗೆ ಸಹ ಕರೊ’ನಾ ಸೋಂ’ಕು ಪಾ’ಸಿಟಿವ್ ಬಂದು ಆ’ಕೆ ಸಹ ಸೆ’ಲ್ಫ್ ಐ’ಸೋ’ಲೇಷನ್ ನಲ್ಲಿದ್ದರು. ಬಿಗ್ ಬಿ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯ ರೈ, ಅವರ ಮಗಳು ಆರಾಧ್ಯ, ನಟ ಅನುಪಮ್ ಖೇರ್ ಅವರ ತಾಯಿ ಸೇರಿದಂತೆ ಸೆಲೆಬ್ರಿಟಿಗಳು ಹಾಗೂ ಅವರ ಕುಟುಂಬದವರು ಕರೊನಾಗೆ ತುತ್ತಾಗಿದ್ದರು.
ದಕ್ಷಿಣ ಭಾರತದ ಬೇರೆ ಭಾಷೆಗಳಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ ತಮನ್ನಾ. ಆದರೆ ಕನ್ನಡದಲ್ಲಿ ಹೆಚ್ಚಾಗಿ ನಟಿಸಿಲ್ಲ. ಕೆಜಿಎಫ್ ಸಿನಿಮಾದ ಒಂದು ಹಾಡು ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆ ಒಂದು ಜಾಹೀರಾತಿನಲ್ಲಿ ನಟಿಸಿದ್ದರು. ಕನ್ನಡದಲ್ಲಿ ಉತ್ತಮ ಕಥೆ ಸಿಕ್ಕರೆ ಬಹಳ ಸಂತೋಷದಿಂದ ನಟಿಸುವುದಾಗಿ, ಅದರಲ್ಲೂ ಪುನೀತ್ ರಾಜ್ ಕುಮಾರ್ ಅವರೊಡನೆ ನಟಿಸುವ ಆಸೆ ತುಂಬಾ ಇದೆ ಇಂದು ಅಪೇಕ್ಷೆ ವ್ಯಕ್ತ ಪಡಿಸಿದ್ದರು ತಮನ್ನಾ. ಈ ನಟಿ ಕನ್ನಡದಲ್ಲಿ ಯಾವಾಗ ನಟಿಸಲಿದ್ದಾರೆ ಕಾದು ನೋಡಬೇಕು.
