ಹೈದರಾಬಾದ್: ದಕ್ಷಿಣ ಭಾರತದ ಬಹುಬೇಡಿಕೆ ನಟಿ ತಮನ್ನಾ ರವರಿಗೆ ಕೊರೋನಾ ಬಂದಿದ್ದು, ಇದೀಗ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನೂ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳಲು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ಚಿತ್ರಗಳು ವೈರಲ್ ಆಗಿದೆ.
ಅಂದಹಾಗೆ ಸಿನೆಮಾ ಸೆಲೆಬ್ರೆಟಿಗಳು ಸದಾ ಫಿಟ್ನೆಸ್ ಹಾಗೂ ಡಯಟ್ ಕುರಿತಂತೆ ಹೆಚ್ಚು ಗಮನಹರಿಸುತ್ತಿರುತ್ತಾರೆ. ಆದರೆ ಕೊರೋನಾ ಸೋಂಕಿನಿಂದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ತಮನ್ನಾ ಸ್ವಲ್ಪ ದಪ್ಪವಾಗಿದ್ದರಂತೆ. ಈ ಕಾರಣಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ಗೆ ಸಹ ಗುರಿಯಾಗಿದ್ದರು ತಮನ್ನಾ, ಆದರೆ ಈ ಟ್ರೋಲ್ಗಳಿಗೆ ಕಿವಿಕೊಡದೇ ಜಿಮ್ ನಲ್ಲಿ ಬೆವರು ಸುರಿಸುತ್ತಾ ತಮ್ಮ ಫಿಟ್ನೆಸ್ ಮರಳಿ ಪಡೆದಿದ್ದಾರೆ.
ಕೊರೋನಾದಿಂದಾಗಿ ಸುಮಾರು ದಿನಗಳ ಕಾಲ ಮನೆಯಲ್ಲಿಯೇ ವಿಶ್ರಾಂತಿ ಪಡೆದಿರುವ ತಮನ್ನಾ ಇದೀಗ ತಮ್ಮ ಮೊದಲಿನ ದೇಹದ ಮೈಕಟ್ಟನ್ನು ಪಡೆದುಕೊಂಡಿದ್ದಾರೆ. ಸುಮಾರು ೨ ತಿಂಗಳುಗಳ ಕಾಲ ಜಿಮ್ ನಲ್ಲಿ ವರ್ಕೌಟ್ ಮಾಡಿದ್ದಾರೆ. ಇದೀಗ ಜಿಮ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ತಮನ್ನಾ, ನಾನು ಮೊದಲ ಮೈಕಟ್ಟನ್ನು ಪಡೆದುಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಸದ್ಯ ತಮನ್ನಾ ಅನೇಕ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದು, ಕನ್ನಡದ ಲವ್ ಮಾಕ್ ಟೇಲ್ ಚಿತ್ರದ ರಿಮೇಕ್ ನಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಅಂಧಾಧುನ್ ರಿಮೇಕ್ ಚಿತ್ರದಲ್ಲಿ ಹಾಗೂ ಸೀಟಿಮಾರ್ ಎಂಬ ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದಾರೆ.
