ಟಾಪ್ ನಟಿ ಟಬು ಗೆ ಮದುವೆಯಾಗದೇ ಇರಲು ಆ ಬಾಲಿವುಡ್ ನಾಯಕನಂತೆ ಕಾರಣ?

90ರ ದಶಕದಲ್ಲಿ ಟಾಲಿವುಡ್ ನಲ್ಲಿ ಕ್ರೇಜ್ ಹೊಂದಿದ ನಟಿಯರಲ್ಲಿ ಟಬು ಸಹ ಒಬ್ಬರಾಗಿದ್ದರು. ಟಾಲಿವುಡ್ ನಲ್ಲಿ ದೊಡ್ಡ ಕ್ರೇಜ್ ಹೊಂದಿದ ನಟಿ ಟಬು ಅನೇಕ ಸ್ಟಾರ್‍ ನಟರ ಜೊತೆ ತೆರೆ ಹಂಚಿಕೊಂಡಿದ್ದರು. ಆಕೆಯ ಸಮಕಾಲಿನರಾದ ಅನೇಕರು ಸಿನೆಮಾಗಳಿಂದ ರಿಟೈರ್‍ ಮೆಂಟ್ ತೆಗೆದುಕೊಂಡು ಮದುವೆಯಾಗಿ ಫ್ಯಾಮಿಲಿ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ, ಆದರೆ ಟಬು ಮಾತ್ರ ಇನ್ನೂ ಸಿಂಗಲ್ ಆಗೆ ಇದ್ದಾರೆ. ಇದಕ್ಕೆ ಬಾಲಿವುಡ್ ನ ದೊಡ್ಡ ಸ್ಟಾರ್‍ ನಟ ಕಾರಣವಂತೆ. ಈ ಕುರಿತು ಸ್ವತಃ ಟಬು ರವರೇ ಹೇಳಿದ್ದಾರೆ ಎನ್ನಲಾಗಿದೆ.

ನಟಿ ಟಬು 90 ರ ದಶಕದಲ್ಲಿ ಸ್ಟಾರ್‍ ನಟಿಯಾಗಿ ಅನೇಕ ಸ್ಟಾರ್‍ ನಟರ ಜೊತೆ ತೆರೆಹಂಚಿಕೊಂಡಿದ್ದರು. ಹೈದರಾಬಾದ್ ಮೂಲಕದ ಈಕೆ ವಿಕ್ಟರಿ ವೆಂಕಟೇಶ್ ಅಭಿನಯದ ಕೂಲಿ ನಂ1 ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಳಿಕ ಸಾಲು ಸಾಲು ಸಿನೆಮಾಗಳಲ್ಲಿ ಕಾಣಿಸಿಕೊಂಡರು. ಕಡಿಮೆ ಸಮಯದಲ್ಲೇ ದೊಡ್ಡ ಸ್ಟಾರ್‍ ನಟಿಯಾದರು. ತೆಲುಗು ಸೇರಿದಂತೆ ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ಸಹ ಹಿಟ್ ಸಿನೆಮಾಗಳನ್ನು ನೀಡುವ ಮೂಲಕ ದೊಡ್ಡ ಅಭಿಮಾನಿ ಬಳಗವನ್ನು ಸಹ ದಕ್ಕಿಸಿಕೊಂಡರು. ಈಗಲೂ ಸಹ ಕೆಲವೊಂದು ಸಿನೆಮಾಗಳಲ್ಲಿ ನಟಿ ಟಬು ನಟಿಸುತ್ತಿದ್ದಾರೆ. ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಅದರಲ್ಲೂ ಗ್ಲಾಮರಸ್ ಪಾತ್ರಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಆದರೆ ಈಕೆ ಇನ್ನೂ ಮದುವೆಯಾಗದೇ ಇದ್ದು ಸಿಂಗಲ್ ಆಗಿದ್ದುಕೊಂಡೆ ಜೀವನ ಸಾಗಿಸುತ್ತಿದ್ದಾರೆ.

ಇಂದಿಗೂ ಸಹ ಸಿಂಗಲ್ ಆಗಿರುವ ಟಬು ತುಂಬಾ ಹ್ಯಾಪಿಯಾಗಿದ್ದಾರಂತೆ. ಸದ್ಯ ಸಿಂಗಲ್ ಆಗಿದ್ದುಕೊಂಡು ಸುಖಕರ ಜೀವನವನ್ನು ಸಾಗಿಸುತ್ತಿದ್ದಾರಂತೆ. ಇತ್ತೀಚಿಗೆ ಆಕೆ ಚಿಟ್ ಚಾಟ್ ವೊಂದರಲ್ಲಿ ಆಕೆ ಸಿಂಗಲ್ ಆಗಿರಲು ಕಾರಣವಾದರೂ ಏನು ಎಂಬುದರ ಬಗ್ಗೆ ರಿವೀಲ್ ಮಾಡಿದ್ದಾರೆ. ಬಾಲಿವುಡ್ ಸ್ಟಾರ್‍ ನಟನಿಂದಾಗಿ ಆಕೆ ಸಿಂಗಲ್ ಆಗಿರಲು ಕಾರಣ ಎಂದಿದ್ದಾರೆ. ಬಾಲಿವುಡ್ ಸ್ಟಾರ್‍ ನಟ ಅಜಯ್ ದೇವಗನ್ ಜೊತೆ ರಿಲೇಷನ್ ಶಿಪ್ ಕುರಿತು ಟಬು ಮಾತನಾಡಿದ್ದು, ಇದೀಗ ಇದು ಎಲ್ಲೆಡೆ ವೈರಲ್ ಆಗಿದೆ. ಅಷ್ಟೇಅಲ್ಲದೇ ಟಬು ಮದುವೆಯಾಗದೇ ಇರಲು ಕಾರಣ ಸಹ ಅಜಯ್ ದೇವಗನ್ ಅಂತೆ. ಸದ್ಯ ಈ ಕಾಮೆಂಟ್ ಗಳು ಇಂಡಸ್ಟ್ರಿಯಲ್ಲಿ ಟಾಕ್ ಆಫ್ ದಿ ಟೌನ್ ಆಗಿದೆ.

ನಟಿ ಟಬು ಚಿಟ್ ಚಾಟ್ ನಲ್ಲಿ ಫನ್ನಿಯಾಗಿ ಮಾತನಾಡಿದ್ದಾರೆ. ಅಜಯ್ ದೇವಗನ್ ಜೊತೆ ರಿಲೇಷನ್ ಶಿಪ್ ಕುರಿತು ಮಾತನಾಡಿದ್ದು, ಆಕೆ ಸಿಂಗಲ್ ಆಗಿರಲು ಕಾರಣವೇ ಅಜಯ್ ದೇವಗನ್ ಅಂತೆ. ಟಬು ಕಜಿನ್ ಸಮೀರ್‍  ಹಾಗೂ ಅಜಯ್ ದೇವಗನ್ ಒಳ್ಳೆಯ ಸ್ನೇಹಿತರಂತೆ. ನಾನು ಯಂಗ್ ಆಗಿರುವಾಗ ನನ್ನ ಮೇಲೆ ಹಾಗೂ ಅಜಯ್ ಮೇಲೆ ಸಮೀರ್‍ ನಿಗಾ ವಹಿಸಿದ್ದರು ಎಂದು ಹೇಳಿದ್ದಾರೆ ಟಬು. ನಾನು ಯಂಗ್ ಆಗಿದ್ದಾಗ ಸಮೀರ್‍ ಹಾಗೂ ಅಜಯ್ ನನ್ನ ಮೇಲೆ ನಿಗಾ ವಹಿಸಿದ್ದರು. ನನ್ನನ್ನು ಫಾಲೋ ಮಾಡಿದ್ದರು. ನನ್ನ ಜೊತೆ ಯಾರಾದರೂ ಮಾತನಾಡಲು ಬಂದರೇ ಅಂತಹ ಹುಡುಗರನ್ನು ಹೊಡೆಯುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದರು. ನಾನು ಈಗ ಸಿಂಗಲ್ ಆಗಿರುಲು ಅಜಯ್ ದೇವಗನ್ ರವರೇ ಕಾರಣ ಎಂದು ನಗುತ್ತಾ ಹೇಳಿದ್ದಾರೆ. ಅವರು ಆ ರೀತಿ ಮಾಡದೇ ಇದಿದ್ದರೇ ನಾನು ಯಾರನ್ನಾದರೂ ಲವ್ ಮಾಡಿ ಮದುವೆ ಆಗುತ್ತಿದ್ದೆ ಎಂದು ಫನ್ನಿ ಉತ್ತರ ನೀಡಿದ್ದಾರೆ.

Previous articleಪುಷ್ಪಾ-2 ಸಿನೆಮಾದಲ್ಲಿ ಶ್ರೀವಲ್ಲಿ ಪಾತ್ರವನ್ನು ಮಧ್ಯದಲ್ಲೆ ಸಾಯಿಸಿ, ಫಾರಿನ್ ಬ್ಯೂಟಿ ಎಂಟ್ರಿಯಂತೆ…..!
Next articleಪೂಜಾ ಹೆಗ್ಡೆ ಯನ್ನು ಬಿಟ್ ಮಾಡಿದ ರಶ್ಮಿಕಾ, ಸಂಭಾವನೆಯಲ್ಲಿ ಟಾಪ್ 1 ಸ್ಥಾನ ಪಡೆದುಕೊಂಡ ನ್ಯಾಷನಲ್ ಕ್ರಷ್!