ಬಾಲಿವುಡ್ ನಲ್ಲಿ ಸಂಚಲನ ಸೃಷ್ಟಿ ಮಾಡಿದ ಪ್ರಕರಣಗಳಲ್ಲಿ ಸುಶಾಂತ್ ಸಿಂಗ್ ಮರಣದ ಸುದ್ದಿ. ಸಿನಿರಂಗದಲ್ಲಿ ದೊಡ್ಡ ಸ್ಟಾರ್ ನಟನಾಗಿ ಅನೇಕ ಸಿನೆಮಾಗಳ ಮೂಲಕ ಸಿನಿರಸಿಕರನ್ನು ರಂಜಿಸಬೇಕಿದ್ದ ಸುಶಾಂತ್ ಸಿಂಗ್ ಅಕಾಲಿಕ ಮರಣ ಹೊಂದಿದ್ದರು. ಆವರದ್ದು ಆತ್ಮಹತ್ಯೆ ಯೇ ಅಥವಾ ಕೊಲೆಯೋ ಎಂಬುದು ಇಂದಿಗೂ ಸಹ ಸ್ಪಷ್ಟವಾಗಿಲ್ಲ. ಸುಮಾರು ಎರಡೂವರೆ ವರ್ಷ ಕಳೆದಿದ್ದು, ಇತ್ತೀಚಿಗಷ್ಟೆ ಸುಶಾಂತ್ ಸಿಂಗ್ ಮೃತದೇಹವನ್ನು ಪರೀಕ್ಷೆ ಮಾಡಿದಂತಹ ಸಿಬ್ಬಂದಿಯೊಬ್ಬರು ನೀಡಿದ ಹೇಳಿಕೆಯಿಂದ ಈ ಕೇಸ್ ಮೇಲೆ ಮತಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ಇದೀಗ ಸುಶಾಂತ್ ಸಿಂಗ್ ಸಹೋದರಿ ಸಹ ಪ್ರತಿಕ್ರಿಯೆ ನೀಡಿದ್ದಾರೆ.
ಬಾಲಿವುಡ್ ನ ಯುವ ನಟ ಸುಶಾಂತ್ ಸಿಂಗ್ ರಜಪೂತ್ ಅನುಮಾನಸ್ಪದವಾಗಿ ಮರಣ ಹೊಂದಿದ್ದರು. ಈ ಸುದ್ದಿ ಇಡೀ ಬಾಲಿವುಡ್ ಸಿನಿರಂಗವನ್ನೇ ತಲ್ಲಣ ಗೊಳಿಸಿತ್ತು. ಅವರ ಸಾವಿನ ಬಳಿಕ ದಿನಕ್ಕೊಂದು ಟ್ವಿಸ್ಟ್ ಎಂಬಂತೆ ಟ್ವಿಸ್ಟ್ ಗಳು ಬಂದವು. ಅವರ ಸಾವಿನ ಸುದ್ದಿ ದೊಡ್ಡ ಮಟ್ಟದ ಚರ್ಚೆಗಳಿಗೂ ಸಹ ಕಾರಣವಾಗಿತ್ತು. ಇದೀಗ ಸುಶಾಂತ್ ಸಿಂಗ್ ರವರ ಮೃತದೇಹವನ್ನು ಪರೀಕ್ಷೆ ಮಾಡಿದಂತಹ ಸಿಬ್ಬಂದಿ ಯೊಬ್ಬರು ಶಾಕಿಂಗ್ ವಿಚಾರವೊಂದನ್ನು ಹೊರಹಾಕಿದ್ದಾರೆ. ಆತ ಸುಶಾಂತ್ ಸಿಂಗ್ ಆತ್ಮಹತ್ಯೆಯಲ್ಲ, ಅದು ಒಂದು ಕೊಲೆಯಾಗಿರಬಹುದು ಎಂದು ಅನ್ನಿಸುತ್ತಿದೆ ಎಂದು ಹೇಳಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ರವರ ಶವ ಪರೀಕ್ಷೆಯನ್ನು ಮಾಡಿದ ರೂಪ ಕುಮಾರ್ ಶಾ ಎಂಬಾತ ಇದೀಗ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದರು. ಇದೀಗ ಸುಶಾಂತ್ ಸಿಂಗ್ ಸಹೋದರಿ ಸಹ ಈ ಬಗ್ಗೆ ಆಗ್ರಹವೊಂದನ್ನು ವ್ಯಕ್ತಪಡಿಸಿದ್ದಾರೆ.
ಇನ್ನೂ ನಟ ಸುಶಾಂತ್ ಸಿಂಗ್ ಕಳೆದ 2020 ಜೂನ್ 14 ರಂದು ಮೃತಪಟ್ಟರು. ನೇಣು ಬಿಗಿದ ಸ್ಥಿತಿಯಲ್ಲಿ ಸುಶಾಂತ್ ಸಿಂಗ್ ಮೃತ ದೇಹ ಕಂಡುಬಂದಿತ್ತು. ಕೂಪರ್ ಆಸ್ಪತ್ರೆಯಲ್ಲಿ ಸುಶಾಂತ್ ಸಿಂಗ್ ಮೃತದೇಹವನ್ನು ಪರೀಕ್ಷೆ ಮಾಡಲಾಗಿತ್ತು. ಶವಾಗಾರದ ಸಿಬ್ಬಂದಿ ರೂಪ್ ಕುಮಾರ್ ಶಾ ಎಂಬಾತ ಸುಶಾಂತ್ ಸಿಂಗ್ ದೇಹದ ಮೇಲಿನ ಗಾಯದ ಗುರುತುಗಳ ಬಗ್ಗೆ ಹೇಳಿದ್ದು, ಇದೀಗ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಇನ್ನೂ ಸುಶಾಂತ್ ಸಿಂಗ್ ಸಾವಿನ ಪ್ರಕರಣವನ್ನು ಸಿಬಿಐ ತಂಡ ಇನ್ನೂ ತನಿಖೆ ನಡೆಸುತ್ತಿದೆ. ಇದೀಗ ರೂಪ್ ಕುಮಾರ್ ಶಾ ಹೇಳಿಕೆಯನ್ನು ಸಿಬಿಐ ಗಂಭೀರವಾಗಿ ಪರಿಗಣಿಸಿ ಪ್ರಕರಣದ ತನಿಖೆ ನಡೆಸಬೇಕೆಂದು ಸುಶಾಂತ್ ಸಿಂಗ್ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಆಗ್ರಹಿಸಿದ್ದಾರೆ.
ಶ್ವೇತಾ ಸಿಂಗ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈ ಸಾಕ್ಷಿ ಸತ್ಯವಾಗಿದ್ದರೇ ಸಿಬಿಐ ಈ ಬಗ್ಗೆ ಗಮನ ಹರಿಸಬೇಕು. ಸಿಬಿಐನವರು ನ್ಯಾಯ ಸಮ್ಮತವಾದ ತನಿಖೆ ನಡೆಸುತ್ತೀರಾ ಎಂದು ನಾವು ನಂಬಿದ್ದೇವೆ, ಆದರೆ ಇನ್ನೂ ಈ ಪ್ರಕರಣ ಅಂತ್ಯವಾಗಿಲ್ಲ ಎಂಬುದು ನಮಗೆ ತುಂಬಾ ನೋವಿನ ಸಂಗತಿಯಾಗಿದೆ ಎಂದು ಸೋಷಿಯಲ್ ಮಿಡಿಯಾ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ಶ್ವೇತಾ ಸಿಂಗ್ ಪೋಸ್ಟ್ ಗೆ ಅನೇಕ ಅಭಿಮಾನಿಗಳೂ ಸಹ ಬೆಂಬಲ ನೀಡುತ್ತಿದ್ದಾರೆ.