Film News

ಪ್ಯಾನ್ ಇಂಡಿಯಾದಡಿ ಬರಲಿದೆ ಸೂರ್ಯಪುತ್ರ ಮಹಾವೀರ ಕರ್ಣ ಚಿತ್ರ

ಮುಂಬೈ: ಇದೀಗ ಪ್ಯಾನ್ ಇಂಡಿಯಾ ಚಿತ್ರಗಳದ್ದೇ ಸದ್ದು. ಈ ಸಾಲಿಗೆ ಮತ್ತೊಂದು ಬಿಗ್ ಬಜೆಟ್ ಸಿನೆಮಾವೊಂದು ತಯಾರಾಗಲಿದೆ. ಸೂರ್ಯಪುತ್ರ ಮಹಾವೀರ ಕರ್ಣ ಎಂಬ ಚಿತ್ರ ಪ್ಯಾನ್ ಇಂಡಿಯಾದಡಿ ೫ ಭಾಷೆಯಲ್ಲಿ ತೆರೆಗೆ ಬರಲಿದೆ.

ನಿನ್ನೆಯಷ್ಟೆ ಈ ಚಿತ್ರದ ಮೋಷನ್ ಪೋಸ್ಟರ್ ಸಹ ಬಿಡುಗಡೆಯಾಗಿದ್ದು, ಬಾಹುಬಲಿ, ಕುರುಕ್ಷೇತ್ರ ಮೊದಲಾದ ಚಿತ್ರಗಳಂತೆ ಬಿಗ್ ಬಜೆಟ್‌ನಲ್ಲಿ ಚಿತ್ರ ಸಿದ್ದವಾಗಲಿದೆ. ಮಹಾಭಾರತ ಕಥೆಯಲ್ಲಿ ಬರುವಂತಹ ದಾನವೀರ ಶೂರ ಕರ್ಣನ ಚರಿತ್ರೆಯನ್ನು ಆಧರಿಸಿ ಈ ಚಿತ್ರ ನಿರ್ಮಾಣವಾಗಲಿದೆ. ಇನ್ನೂ ಈ ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ನಟನೋರ್ವ ಕರ್ಣನ ಪಾತ್ರವನ್ನು ಪೋಷಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಮೊದಲು ಕರ್ಣನ ಪಾತ್ರದಲ್ಲಿ ಕಾಲಿವುಡ್ ನಟ ವಿಕ್ರಮ್ ರವರನ್ನು ಆಯ್ಕೆ ಮಾಡಲಾಗಿತ್ತಂತೆ. ಆದರೆ ವಿಕ್ರಮ್ ಮತ್ತೊಂದು ಸಿನೆಮಾದಲ್ಲಿ ಬ್ಯುಸಿಯಿದ್ದ ಕಾರಣ ಈ ಚಿತ್ರದಿಂದ ಅವರು ಹಿಂದೆ ಸರಿದಿದ್ದರು ಎನ್ನಲಾಗಿದೆ.

ಇನ್ನೂ ಸೂರ್ಯಪುತ್ರ ಮಹಾವೀರ ಕರ್ಣ ಚಿತ್ರವನ್ನು ಆರ್.ಎಸ್.ವಿಮಲ್ ನಿರ್ದೇಶನ ಮಾಡುತ್ತಿದ್ದು, ದೀಪಿಖಾ ದೇಶ್‌ಮುಖ್, ವಶು ಭಗ್ನಾನಿ ಹಾಗೂ ಜಾಖಿ ಭಗ್ನಾನಿ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಬಿಗ್ ಬಜೆಟ್ ಸಿನೆಮಾ ಇದಾಗಲಿದ್ದು, ದೊಡ್ಡ ಮಟ್ಟದಲ್ಲಿ ನಿರೀಕ್ಷೆಯನ್ನು ಹುಟ್ಟಿಸಿದೆ. ಈ ಚಿತ್ರಕ್ಕೆ ಡಾ.ಕುಮಾರ್ ವಿಶ್ವಾಸ್ ಸಂಭಾಷಣೆ ಬರೆದಿದ್ದಾರೆ.

Trending

To Top