Film News

ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಆಯ್ತು ವಿಕ್ರಾಂತ್ ರೋಣ

ಬೆಂಗಳೂರು: ಈಗಾಗಲೇ ಸ್ಯಾಂಡಲ್‌ವುಡ್ ಸೇರಿದಂತೆ ದಕ್ಷಿಣ ಭಾರತದಲ್ಲಿ ಪೋಸ್ಟರ್ ಮೂಲಕವೇ ಹೈಪ್ ಕ್ರಿಯೇಟ್ ಮಾಡಿರುವ ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರದ ಟೈಟಲ್ ಬದಲಾವಣೆಯಾಗಿದ್ದು, ಫ್ಯಾಂಟಮ್ ಬದಲಿಗೆ ವಿಕ್ರಾಂತ್ ರೋಣ ಎಂದು ಹೆಸರು ಬದಲಿಸಲಾಗಿದೆ.

ನಿರ್ದೇಶಕ ಅನೂಪ್ ಬಂಡಾರಿ ಹಾಗೂ ಅಭಿನಯ ಚಕ್ರವರ್ತಿ ಸುದೀಪ್ ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬಂದ ಈ ಚಿತ್ರಕ್ಕೆ ಮೊದಲು ಫ್ಯಾಂಟಮ್ ಎಂದು ಹೆಸರಿಡಲಾಗಿತ್ತು. ಆದರೆ ಚಿತ್ರದ ಟೈಟಲ್‌ನ್ನು ವಿಕ್ರಾಂತ್ ರೋಣ ಎಂದು ಬದಲಿಸಿದೆ. ಇದಕ್ಕೆ ನಿಖರವಾದ ಕಾರಣ ತಿಳಿಯದೇ ಇದ್ದರೂ, ಫ್ಯಾಂಟಮ್ ಎಂಬ ಟೈಟಲ್ ಬೇರೆ ನಿರ್ಮಾಪಕರ ಹಕ್ಕಾಗಿದೆ. ಆದ್ದರಿಂದ ಟೈಟಲ್ ಬದಲಿಸಲಾಗಿದೆ ಎನ್ನಲಾಗುತ್ತಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಶುರುವಾಗಿತ್ತು. ಇದೀಗ ಟೈಟಲ್ ಬಗೆಗಿನ ಎಲ್ಲಾ ಪ್ರಶ್ನೆಗಳಿಗೂ ನಿರ್ದೇಶಕ ಅನೂಪ್ ಭಂಡಾರಿ ತೆರೆಎಳೆದಿದ್ದಾರೆ.

ಇನ್ನೂ ಫ್ಯಾಂಟಮ್ ಚಿತ್ರದ ಟೈಟಲ್ ಬದಲಾವಣೆಯ ಕುರಿತು ಅನೂಪ್ ಭಂಡಾರಿ ಅಧಿಕೃತ ಪ್ರಕಟಣೆ ನೀಡಿದ್ದು, ಮತ್ತೋಂದು ಬಿಗ್ ಅಪ್ಡೇಟ್ ಸಹ ನೀಡಿದ್ದಾರೆ. ದುಬೈನಲ್ಲಿರುವ ಐಶಾರಾಮಿ ಹೋಟೆಲ್‌ಗಳಲ್ಲಿ ಒಂದಾದ ಹಾಗೂ ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜಾ ಖಲೀಫ ಮೇಲೆ ಸುದೀಪ್ ಪೋಟೊ ಅಥವಾ ಚಿತ್ರದ ಟೀಸರ್ ಪ್ರದರ್ಶನ ಮಾಡಲು ಚಿತ್ರತಂಡ ನಿರ್ಧಾರ ಮಾಡಿತ್ತು. ಸುದೀಪ್ ರವರು ಸಿನೆಮಾ ರಂಗಕ್ಕೆ ಕಾಲಿಟ್ಟು ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಬುರ್ಜಾ ಖಲೀಫದಲ್ಲಿ ಜ.೩೧ ರಂದು ವಿಕ್ರಾಂತ್ ರೋಣ ಟೈಟಲ್ ಲೊಗೋ ಅನಾವರಣ ಮಾಡಲಾಗುತ್ತದೆ. ಇನ್ನೂ ಈ ಕಾರ್ಯಕ್ರಮವನ್ನು ಕಿಚ್ಚ ಕ್ರಿಯೇಷನ್ ಯೂಟೂಬ್ ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು ಎಂದು ನಿರ್ದೇಶಕ ಅನೂಪ್ ಭಂಡಾರಿ ತಿಳಿಸಿದ್ದಾರೆ.

ಅಂದಹಾಗೆ ದುಬೈನ ಈ ಐಶಾರಾಮಿ ಕಟ್ಟಡದಲ್ಲಿ ಮೊಟ್ಟಮೊದಲಿಗೆ ಕನ್ನಡ ನಟನ ಚಿತ್ರದ ಕುರಿತು ಪ್ರದರ್ಶನವಾಗಲಿದೆ. ಈ ಹಿಂದೆ ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಬೆರಳೆಣಿಕೆಯಷ್ಟು ನಟರ ಪೊಟೋ ಮಾತ್ರ ಈ ಕಟ್ಟಡದಲ್ಲಿ ಪ್ರದರ್ಶನವಾಗಿದ್ದು, ಮೊಟ್ಟಮೊದಲ ಬಾರಿಗೆ ಕನ್ನಡದ ನಟನ ಪೊಟೋ ದುಬೈನಲ್ಲಿ ಪ್ರದರ್ಶನ ವಾಗುತ್ತಿರುವುದು ಕನ್ನಡಾಭಿಮಾನಿಗಳು ಖುಷಿಯ ವಿಚಾರವೇ ಎಂದು ಹೇಳಬಹುದು.

Trending

To Top