ಭಾರತದ ಸಿನಿರಂಗದಲ್ಲಿ ರಜನಿಕಾಂತ್ ನಂಬರ್ ಒನ್ ನಟ, ಏರಿದ ತಲೈವಾ ಸಂಭಾವನೆ…..

ಭಾರತದ ಸಿನಿರಂಗದಲ್ಲಿ ದೊಡ್ಡ ಸ್ಟಾರ್‍ ನಟರಲ್ಲೊಬ್ಬರಾದ ಸೂಪರ್‍ ಸ್ಟಾರ್‍ ರಜನಿ ಕಾಂತ್ ಸಿನೆಮಾ ರಂಗದಲ್ಲಿ ದೊಡ್ಡಮಟ್ಟದಲ್ಲಿ ಹೆಸರನ್ನು ಪಡೆದುಕೊಂಡಿದ್ದಾರೆ. ಅವರ ಸಿನೆಮಾಗಳ ಅಪ್ಡೇಟ್ ಗಾಗಿ ಅಭಿಮಾನಿಗಳು ಕಾಯುತ್ತಿರುತ್ತಾರೆ. ಕಾಲಿವುಡ್ ನಲ್ಲಿ ಅವರನ್ನು ಪ್ರತೀಯಿಂದ ತಲೈವಾ ಎಂತಲೇ ಕರೆಯುತ್ತಾರೆ. ಕಾಲಿವುಡ್ ನಲ್ಲಿ ಅನೇಕ ಏಳುಬೀಳುಗಳ ನಡುವೆ ದೊಡ್ಡ ಸ್ಟಾರ್‍ ಆಗಿ ರಜನಿಕಾಂತ್ ಬೆಳೆದು ನಿಂತಿದ್ದಾರೆ.

ಸದ್ಯ ರಜನಿಕಾಂತ್ ರವರ ಸಂಭಾವನೆ ಕುರಿತಂತೆ ಚರ್ಚೆಗಳು ಶುರುವಾಗಿದ್ದು, ದೇಶದ ಸಿನಿರಂಗದಲ್ಲಿ ಹೆಚ್ಚು ಸಂಭಾವನೆ ಪಡೆಯುವ ಮೂಲಕ ನಂಬರ್‍ ಒನ್ ನಟ ಎಂಬ ಖ್ಯಾತಿ ಪಡೆದುಕೊಳ್ಳಲಿದ್ದಾರಂತೆ. ರಜನಿಕಾಂತ್ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದು, ಇದು ಇದೀಗ ದಾಖಲೆಯಾಗಿದೆ. ರಜನಿಕಾಂತ್ ರವರ 169ನೇ ಸಿನೆಮಾಗೆ ಬರೊಬ್ಬರಿ 150 ಕೋಟಿ ಸಂಭಾವನೆ ಪಡೆಯಲಿದ್ದಾರಂತೆ. ಈ ಸಿನೆಮಾ ಕಾಲಿವುಡ್ ನಿರ್ದೇಶಕ ನೆಲ್ಸನ್  ಸಾರಥ್ಯದಲ್ಲಿ ಮೂಡಿಬರಲಿದೆ. ಈ ಸಿನೆಮಾದಲ್ಲಿ ರಜನಿಕಾಂತ್ ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆದುಕೊಳ್ಳಲಿದ್ದಾರೆ. ಇದರಿಂದ ರಜನಿಕಾಂತ್ ದೇಶದ ಹೆಚ್ಚು ಸಂಭಾವನೆ ಪಡೆಯುತ್ತಿರುವ ಏಕೈಕ ನಟ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಇನ್ನೂ ಈ ಸಿನೆಮಾ ಕೆಲಸಗಳು ಸಹ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಸದ್ಯ ರಜನಿಕಾಂತ್ ದುಬೈ ಪ್ರವಾಸದಲ್ಲಿದ್ದಾರೆ. ದುಬೈನಿಂದ ಬಂದ ಬಳಿಕ ಸಿನೆಮಾ ಶೂಟಿಂಗ್ ಕೆಲಸಗಳು ಪ್ರಾರಂಭವಾಗಲಿದೆಯಂತೆ. ರಜನಿಕಾಂತ್ ರವರ ಸಂಭಾವನೆ 150 ಕೋಟಿ ಸಿನೆಮಾದ ಬಜೆಟ್ 250 ಕೋಟಿ ಎಂದು ಮೂಲಗಳ ಪ್ರಕಾರ ಹೇಳಲಾಗುತ್ತಿದೆ. ದೊಡ್ಡ ಬಜೆಟ್ ನಲ್ಲಿ ನಿರ್ಮಾಣ ವಾಗಲಿರುವ ಈ ಸಿನೆಮಾ ಎಲ್ಲರೂ ಮೆಚ್ಚುವಂತಹ ಕಥೆಯನ್ನು ಆಧರಿಸಿ ನಿರ್ಮಾಣವಾಗಲಿದೆ ಎಂದು ಹೇಳಲಾಗುತ್ತಿದೆ. ಇದೀಗ ರಜನಿಕಾಂತ್ ತಮ್ಮ ಸಂಭಾವನೆಯನ್ನು ಸಹ ಹೆಚ್ಚಿಸಿಕೊಂಡ ಹಿನ್ನೆಲೆಯಲ್ಲಿ ಈ ಸಿನೆಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.

ಬಾಲಿವುಡ್ ನಲ್ಲಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಾಯಕರನ್ನು ಹಿಂದಿಕ್ಕಿ ರಜನಿ ಮುನ್ನುಗ್ಗುತ್ತಿದ್ದಾರೆ ದೇಶದ ಸಿನಿರಂಗದಲ್ಲಿ ನೂರು ಕೋಟಿಗೂ ಅಧಿಕ ಸಂಭಾವನೆ ಪಡೆಯುತ್ತಿದ್ದ ಅಕ್ಷಯ್ ಕುಮಾಋ, ಸಲ್ಮಾನ್ ಖಾನ್ ರವರನ್ನು ಸಹ ಹಿಂದಿಕ್ಕಿದ್ದಾರೆ. ಬಾಲಿವುಡ್ ಸ್ಟಾರ್‍ ಅಕ್ಷಯ್ ಕುಮಾರ್‍ 135, ಸಲ್ಮಾನ್ ಖಾನ್ 125 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಶಾರುಕ್ ಖಾನ್ 100 ಕೋಟಿ ಸಂಭಾವನೆ ಪಡೆಯುತ್ತಿರುವುದಾಗಿ ಹೇಳಲಾಗುತ್ತಿತ್ತು. ಇದೀಗ ರಜನಿಕಾಂತ್ ಈ ಎಲ್ಲ ನಟರನ್ನು ಹಿಂದಿಕ್ಕಿ 150 ಕೋಟಿ ಪಡೆಯುವ ಮೂಲಕ ದೇಶದ ನಂಬರ್‍ 1 ನಟ ಎಂಬ ಖ್ಯಾತಿ ಮುಡಿಗೇರಿಸಿಕೊಂಡಿದ್ದಾರೆ.

Previous articleವಿಕ್ರಾಂತ್ ರೋಣದ ಗಡಂಗ್ ರಕ್ಕಮ್ಮಾ ಹಾಡಿಗೆ ಫಿದಾ ಆದ ಕಿಚ್ಚ ಫ್ಯಾನ್ಸ್….
Next articleಶೂಟಿಂಗ್ ವೇಳೆ ನಟ ವಿಜಯ್ ದೇವರಕೊಂಡ ಹಾಗೂ ಸಮಂತಾ ಕಾರು ಅಪಘಾತ…!