Film News

ಸೂಪರ್ ಸ್ಟಾರ್ ರಜನಿಕಾಂತ್ ಹುಟ್ಟುಹಬ್ಬ: ಗಣ್ಯರಿಂದ ಶುಭಾಷಯ

ಚೆನೈ: ಸೂಪರ್ ಸ್ಟಾರ್ ರಜನಿಕಾಂತ್ ರವರಿಗೆ ಡಿಸೆಂಬರ್ ೧೨ ಜನ್ಮದಿನದ ಸಂಭ್ರಮ. ಇನ್ನೂ ಜಗತಿನ್ಯಾದಂತಹ ಇರುವಂತಹ ರಜನಿ ಅಭಿಮಾನಿಗಳು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸ್ಟಾರ್ ನಟರೆಲ್ಲಾ ಶುಭಾಷಯ ಕೋರಿದ್ದಾರೆ.

ನಟ ರಜನಿಕಾಂತ್ ಅವರು ೭೦ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಷಯ ಕೋರಿದ್ದಾರೆ. ಪ್ರೀತಿಯ ರಜನಿಕಾಂತ್ ರವರೇ, ನಿಮಗೆ ಜನ್ಮದಿನದ ಶುಭಾಷಯಗಳು, ಆರೋಗ್ಯಕರ ಜೀವನ ಸುದೀರ್ಘ ಕಾಲ ನಡೆಸುವಂತಾಗಲಿ ಎಂದು ಟ್ವಿಟರ್ ಮೂಲಕ ವಿಶ್ ಮಾಡಿದ್ದಾರೆ.

ಇನ್ನೂ ರಜನಿಯವರಿಗೆ ಹುಟ್ಟು ಹಬ್ಬದ ಶುಭಾಷಯ ಕೋರಿದ ಸುದೀಪ್ ಕ್ಲಾಸ್ ಹಾಗೂ ಮಾಸ್ ಎರಡಲ್ಲೂ ಅಸಾಧ್ಯವೆನಿಸಿದ್ದನ್ನು ಸಾಧಿಸಿದ ಲೆಜೆಂಡ್ ಸೂಪರ್ ಸ್ಟಾರ್ ರಜನಿಕಾಂತ್ ರವರಿಗೆ ಹುಟ್ಟುಹಬ್ಬದ ಶುಭಾಷಯಗಳು ಜೊತೆಗೆ ನಿಮ್ಮ ರಾಜಕೀಯ ಪ್ರವೇಶಕ್ಕೂ ಆಲ್ ದಿ ಬೆಸ್ಟ್ ಎಂದು ಶುಭಾಷಯ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಕನ್ನಡದ ಸ್ಟಾರ್ ನಟ ಜಗ್ಗೇಶ್ ಯಾವ ನಾಡಿನಲ್ಲಿ ಧ್ವಜ ಹಾರಿಸಿ ಗೆದ್ದರು ನಮ್ಮ ಕನ್ನಡ ನೆಲದ ಸಂಜಾತನಲ್ಲವೇ. ೧೯೮೭ ರಿಂದ ಇವರ ಸಾಂಗತ್ಯ ಆತ್ಮೀಯತೆ ಪಡೆದವನು ನಾನು ಎಂಬ ಹೆಮ್ಮೆಯಿದೆ. ಆತ್ಮೀಯ ಹೃದಯಕ್ಕೆ ಹುಟ್ಟುಹಬ್ಬದ ಶುಭಾಷಯ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೂ ತಮಿಳು ಸಿನಿರಂಗಕ್ಕೆ ಎಂಟ್ರಿ ಕೊಡುವ ಮೂಲಕ ದೊಡ್ಡ ಮಟ್ಟದ ಸಾಧನೆ ಮಾಡಿ ಅಪಾರ ಸಂಖ್ಯೆ ಅಭಿಮಾನಿಗಳನ್ನು ವಿಶ್ವ ಮಟ್ಟದಲ್ಲಿ ಗಳಿಸಿದ್ದು, ಅವರ ಹುಟ್ಟುಹಬ್ಬದ ಪ್ರಯುಕ್ತ ಕನ್ನಡ, ಹಿಂದಿ, ತಮಿಳು, ಮಲಯಾಳಂ, ತೆಲುಗು ಭಾಷೆಗಳ ೭೦ ಕ್ಕೂ ಹೆಚ್ಚು ನಟರು ರಜನಿಕಾಂತ್ ರವರ ಕಾಮನ್ ಡಿ.ಪಿ ಬಿಡುಗಡೆ ಮಾಡಿದ್ದಾರೆ. ಸುನೀಲ್ ಶೆಟ್ಟಿ, ಸಲ್ಮಾನ್, ರಶ್ಮೀಕಾ ಮಂದಣ್ಣ, ಎ.ಆರ್.ರೆಹಮಾನ್, ಕೀರ್ತ ಸುರೇಶ್ ಸೇರಿದಂತೆ ಅನೇಕರು ತಮ್ಮ ಸೋಷಿಯಲ್ ಮಿಡಿಯಾ ಅಕೌಂಟ್ ಗಳಲ್ಲಿ ಡಿಪಿ ರಿಲೀಸ್ ಮಾಡಿದ್ದಾರೆ. ಇನ್ನೂ ರಜನಿ ಹುಟ್ಟುಹಬ್ಬದ ನಿಮಿತ್ತ ಚೆನೈನಲ್ಲಿನ ಅವರ ನಿವಾಸ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು.

Trending

To Top