Film News

ಆರೋಗ್ಯದಲ್ಲಿ ಸ್ಥಿರ: ಆಸ್ಪತ್ರೆಯಿಂದ ರಜನಿ ಡಿಸ್ಚಾರ್ಜ್

ಚೆನೈ: ಅಧಿಕ ರಕ್ತದೊತ್ತಡದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸೂಪರ್ ಸ್ಟಾರ್ ರಜನಿಕಾಂತ್ ರವರ ಆರೋಗ್ಯ ಸ್ಥಿರವಾಗಿದ್ದು, ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದು ವಾರಗಳ ಕಾಲ ಸಂಪೂರ್ಣವಾಗಿ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಅಣ್ಣಾತೆ ಸಿನೆಮಾ ಶೂಟಿಂಗ್ ತ್ವರಿತವಾಗಿ ಪೂರ್ಣಗೊಳಿಸಲು ಚಿತ್ರತಂಡದೊಂದಿಗೆ ರಜನಿಕಾಂತ್ ರವರು ಹೈದರಾಬಾದ್ ಗೆ ತೆರಳಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ಅಣ್ಣಾತೆ ಶೂಟಿಂಗ್ ಸೆಟ್ ನಲ್ಲಿದ್ದ 8 ಮಂದಿಗೆ ಕೊರೋನಾ ಸೋಂಕು ಪಾಸಿಟೀವ್ ಬಂದ ಹಿನ್ನೆಲೆಯಲ್ಲಿ ಶೂಟಿಂಗ್ ಸಹ ಸ್ಥಗಿತಗೊಳಿಸಲಾಗಿತ್ತು. ಇದೇ ವೇಳೆ ರಜನಿಕಾಂತ್ ರವರಿಗೂ ರಕ್ತದ ಒತ್ತಡ ಹೆಚ್ಚಾಗಿ ಹೈದರಾಬಾದ್ ನ ಅಪೋಲೊ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.

ಇಂದು (ಡಿ.27) ಅಪೋಲೊ ಆಸ್ಪತ್ರೆಯ ಹೆಲ್ತ್ ಬುಲೆಟಿನ್ ನಂತೆ ರಜನಿಕಾಂತ್ ರವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ರಕ್ತದೊತ್ತಡ ನಿಯಂತ್ರಣಕ್ಕೆ ಬಂದಿ ನಿನ್ನೆಗಿಂತ ಅವರ ಆರೋಗ್ಯ ಸುಧಾರಿಸಿದೆ. ಆದರೂ ಕೂಡ ಹೆಚ್ಚಿನ ವಿಶ್ರಾಂತಿ ಪಡೆಯುವುದು ಅಗತ್ಯವಾಗಿರುವುದರಿಂದ ಇನ್ನೂ ಒಂದು ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯಬೇಕೆಂದು ಅಪೋಲೊ ವೈದ್ಯರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಡಿ.31 ರಂದು ತಮ್ಮ ರಾಜಕೀಯ ಪಕ್ಷದ ಹೆಸರು ಘೋಷಣೆ ಮಾಡುವ ಹಿನ್ನೆಲೆಯಲ್ಲಿ ಅಣ್ಣಾತೆ ಸಿನೆಮಾ ಶೂಟಿಂಗ್ ಬೇಗ ಪೂರ್ಣಗೊಳಿಸುವ ಸಲುವಾಗಿ ದಿನಕ್ಕೆ ೧೪ ಗಂಟೆಗಳ ಕಾಲ ಶೂಟಿಂಗ್ ನಲ್ಲಿ ನಿರತರಾಗಿದ್ದರು ಎನ್ನಲಾಗಿದೆ.

Trending

To Top