Film News

ಆದಿಪುರುಷ್ ಚಿತ್ರದಲ್ಲಿ ಲಕ್ಷ್ಮಣನಾಗಿ ಸನ್ನಿ ಸಿಂಗ್ ನಟನೆ!

ಮುಂಬೈ: ಬಹುನಿರೀಕ್ಷಿತ ಆದಿಪುರುಷ್ ಚಿತ್ರದಲ್ಲಿ ಪ್ರಭಾಸ್ ರಾಮನಾಗಿ ಪಾತ್ರವನ್ನು ಪೋಷಣೆ ಮಾಡುತ್ತಿದ್ದು, ಲಕ್ಷ್ಮಣನ ಪಾತ್ರ ಯಾರು ನಿರ್ವಹಿಸಲಿದ್ದಾರೆಂಬ ಕೂತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಇದೀಗ ಬಾಲಿವುಡ್‌ನ ಯುವ ನಟ ಸನ್ನಿ ಸಿಂಗ್ ಲಕ್ಷ್ಮಣನಾಗಿ ಬಣ್ಣ ಹಚ್ಚುವುದು ಬಹುತೇಕ ಖಚಿತವಾಗಿದೆ.

ರಾಮಾಯಣದ ಕಥೆಯನ್ನು ಆಧರಿಸಿ ಆದಿಪುರುಷ್ ಚಿತ್ರ ನಿರ್ಮಾಣವಾಗುತ್ತಿದ್ದು, ಬಾಲಿವುಡ್ ಖ್ಯಾತ ನಿರ್ದೇಶಕ ಓಂ ರಾವತ್ ಚಿತ್ರವನ್ನು ತೆರೆಗೆ ತರಲಿದ್ದಾರೆ. ರಾಮನಾಗಿ ಪ್ರಭಾಸ್ ನಟಿಸುತ್ತಿದ್ದರೇ, ರಾವಣನ ಪಾತ್ರದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ನಟಿಸುವುದು ಖಚಿತವಾಗಿತ್ತು. ಇದೀಗ ಲಕ್ಷಣನ ಪಾತ್ರದಲ್ಲಿ ಸನ್ನಿ ಸಿಂಗ್ ನಟಿಸುತ್ತಿದ್ದಾರೆ. ಆದರೆ ಸೀತೆಯ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬುದು ಬಹಿರಂಗವಾಗಿಲ್ಲ.

ಇನ್ನೂ ನಟ ಸನ್ನಿಸಿಂಗ್ ಸೋನು ಕಿ ಟಿಟ್ಟು ಕಿ ಸ್ವೀಟಿ, ಪ್ಯಾರ್ ಕೆ ಪಂಚನಾಮ ಎಂಬ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಪಡಿದಿದ್ದಾರೆ. ಇದೀಗ ಬಾಹುಬಲಿ ಪ್ರಭಾಸ್ ರೊಂದಿಗೆ ಮೊದಲ ಬಾರಿಗೆ ಆದಿಪುರುಷ್ ಚಿತ್ರದಲ್ಲಿ ನಟಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸನ್ನಿ ಸಿಂಗ್ ಆದಿಪುರುಷ್ ತಂಡಕ್ಕೆ ಸ್ವಾಗತ ಕೋರಿದಂತೆ ನಿರ್ದೇಶಕ ಓಂ ರಾವತ್ ಪೋಸ್ಟ್ ಒಂದನ್ನು ಸಹ ಹಾಕಿದ್ದಾರೆ.

ಸುಮಾರು 600 ಕೋಟಿ ಹೆಚ್ಚು ವೆಚ್ಚದಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತದೆ ಎನ್ನಲಾಗುತ್ತಿದೆ. ಭೂಷಣ್ ಕುಮಾರ್ ಎಂಬುವವರು ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಅಂದಹಾಗೆ ಈ ಚಿತ್ರದಲ್ಲಿನ ಸೀತೆಯ ಪಾತ್ರದಲ್ಲಿ ಕೃತಿ ಸೆನನ್ ಹಾಗೂ ಕಿಯಾರಾ ಅಡ್ವಾಣಿ, ದೀಪಿಕಾ ಪಡುಕೋಣೆ, ಶ್ರದ್ದಾ ಕಪೂರ್ ಹೆಸರುಗಳು ಕೇಳಿಬರುತ್ತಿದೆ.

Trending

To Top