ಮೊದಲ ಬೇಟಿ
ಸುಮಲತಾ ಅವರು ಹೇಳುತ್ತಾರೆ ಅಂಬಿ ಅವರನ್ನು ಮೊದಲ ಬಾರಿ ಬೇಟಿ ಮಾಡಿದ್ದು ಆಹುತಿ ಚಿತ್ರದ ಶೂಟಿಂಗ್ ಸಮಯದಲ್ಲಿ.
ಅದಕ್ಕಿಂತ ಮುಂಚೆ ಅವರನ್ನು ಫಂಕ್ಷನ್ ಒಂದರಲ್ಲಿ ನೋಡಿದ್ದೆ. ಅಲ್ಲಿ ಅವರನ್ನು ಬೇಟಿ ಹಾಗಿರಲಿಲ್ಲ ಪರಿಚಯ ಕೂಡ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ದೂರದಿಂದ ನೋಡಿದ್ದೆ ಅಷ್ಟೆ. ತುಂಬಾನೇ ಭಯ ಇತ್ತು ನಂಗೆ, ಅವರ ಜೊತೆ ಅಭಿನಯ ಮಾಡೋಕೆ.
ಆವಾಗ್ಲೇ ಅದು ಇದು ಏನೇನೋ ಗಾಳಿಸುದ್ದಿ, ಗಾಸಿಫ್ಸ್ ಇತ್ತು. ಸಿನೆಮಾ ರಂಗದಲ್ಲಿ ಇರುವ ಎಲ್ಲರ ಬಗೆಗೂ ಇದ್ದೆ ಇರುತ್ತೆ. ಆದ್ರೆ ನಾನು ಆ ಸಮಯದಲ್ಲಿ ಕನ್ನಡ ಚಿತ್ರರಂಗಕ್ಕೆ ತುಂಬಾ ಹೊಸಬಳು. ಹಾಗಾಗಿ ಭಯ ಇತ್ತು ಸ್ವಲ್ಪ ದಿನದ ಶೂಟಿಂಗ್ ನಂತರ ನನಗೆ ತಿಳಿದ ವಿಷಯ ವೆಂದರೆ ಅವರ ಬಗೆಗೆ ಭಯ ಪಡಬೇಕಾಗಿಲ್ಲ ಅನ್ನೋದು.
ಪ್ರೊಪೋಸ್ ಮಾಡಿದ ಗಳಿಗೆ.
ವಾಸ್ತವವಾಗಿ ನಮ್ಮದು ಅಂತ ಔಪಚಾರಿಕ ಪ್ರೊಪೋಸಲ್ ಏನೂ ಆಗಿರಲಿಲ್ಲ. ಫಸ್ಟ್ ಟೈಮ್ ಮೀಟ್ ಮಾಡಿದ್ದು 1984 ರಲ್ಲಿ ಇರಬೇಕು ನಮ್ಮ ಮದುವೆ ಆಗಿದ್ದು 1991ರಲ್ಲಿ. ಆ ಸಮಯದಲ್ಲಿ ಎರಡು ಮೂರು ವರ್ಷಗಳಲ್ಲಿ ನಾವು ಯಾವುದೇ ಸಿನಿಮಾ ಮಾಡಿರಲಿಲ್ಲ. ಆಗ ನಾನು ಚೆನ್ನೈನಲ್ಲಿದ್ದೆ. ಅವರು ಬೆಂಗಳೂರಲ್ಲಿದ್ರು. ಆವಾಗ ಮೊಬೈಲ್ ಫೋನ್ ಇರಲಿಲ್ಲ. ಹಾಗಾಗಿ ಇಬ್ಬರಿಗೂ ಸಂಪರ್ಕ ಅಂತ ಏನೂ ಇರಲಿಲ್ಲ.
ಯಾವಾಗ್ಲಾದ್ರೂ ಇವ್ರು ಬೆಂಗಳೂರಿಂದ ಚೆನ್ನೈಗೆ ಬಂದಾಗ ಫೋನ್ ಮಾಡೋರು, ಹೆಗಿದಿಯ ಅಂತ. ಅಷ್ಟೇ. ನಾನು ಬೆಂಗಳೂರು ಬಂದಾಗ ಎಲ್ಲಾದ್ರೂ ಇದ್ದಾಗ, ಪಾರ್ಟಿ ಇದ್ದಾಗ, ಅಥವಾ ಪಕ್ಕದಲ್ಲಿ ಶೂಟಿಂಗ್ ಇದ್ದಾಗ ಹೋಗಿ ಹಲೋ ಹೇಳಿ ಬರುತ್ತಿದ್ದೆ. ಈ ರೀತಿ ಇದ್ದವು ನಮ್ಮ ಅಂದಿನ ದಿನಗಳು.
ಆರಂಭದಲ್ಲಿ ನಾವು ಅಷ್ಟು ಕ್ಲೋಸ್ ಆಗಿರಲಿಲ್ಲ ಸಮಯ ಕಳೆದಂತೆಲ್ಲ ಸ್ವಲ್ಪ ಕ್ಲೋಸ್ ಆಗ್ತಾ ಬಂದ್ವಿ. ನನಗೆ ಅರ್ಥವಾಗಿತ್ತಲ್ಲ, ಇವ್ರು ಫ್ರೆಂಡ್ಲಿ ಮನೋಭಾವದವರು, ತೆರೆದ ಹೃದಯ ವ್ಯಕ್ತಿತ್ವ ಅವರದು ಅಂತ. ಇಂಥವರು ತುಂಬಾ ಅಪರೂಪ. ಅದರಲ್ಲೂ ಚಿತ್ರರಂಗದಲ್ಲಿ ಇಂತಹ ವ್ಯಕ್ತಿತ್ವವನ್ನು ನೋಡುವುದು ತುಂಬಾ ಅಪರೂಪ, ಹಾಗಾಗಿ ನಾನು ಅವರನ್ನು ಇಷ್ಟಪಟ್ಟೆ ಅವರೂ ನನ್ನನ್ನು ತುಂಬಾ ಪ್ರೀತಿ ಮಾಡುತಿದ್ದರು ಯಾಕೆ ಅಂದ್ರೆ ಸಿನೆಮಾ ಮಂದಿ ಜೊತೆ ಇರುವಾಗ ಅವರದೇ ಒಂದು ನಡತೆ, ಸ್ವಭಾವ, ಹವ್ಯಾಸಗಳಿರತ್ತೆ. ನಾನು ಅವರೆಲ್ಲರಿಗಿಂತ ಭಿನ್ನವಾಗಿದ್ದೆ, ತುಂಬಾ ಸೈಲೆಂಟ್.
ಇವರು ಎಷ್ಟುಗಲಾಟೆ ಮಾಡ್ತಾರೋ ಸೆಟ್ಟಲ್ಲಿ, ನಾನು ಅಷ್ಟೇ ಮೌನ.
ನನ್ ಪಾಡಿಗೆ ನಾನು ಒಂದು ಕಡೆ ಕೂತು ಪುಸ್ತಕ ಓದ್ತಿದ್ದೆ. ಯಾರ ಹತ್ರಾನೂ ಅಷ್ಟೊಂದು ಮಿಂಗಲ್ ಆಗ್ತಿರಲಿಲ್ಲ. ಬಟ್ ಇವರು ಸೆಟ್‌ಗೆ ಬಂದ್ಬಿಟ್ರೆ ಅದೆಲ್ಲಾ ಬದಲಾಗ್ತಿತ್ತು. ಎಲ್ಲರ ಜೊತೆ ಮಾತಾಡಬೇಕು ಅನ್ನೋ ಸ್ವಭಾವ ಇವರದು. ನಮ್ಮ ಇಬ್ಬರದೂ ವಿರುದ್ದವಾದ ಪರ್ಸನಾಲಿಟಿ ಎಲ್ಲಾ ವಿಷಯದಲ್ಲೂ ಅಷ್ಟೇ. ನಂಗೆ ಬುಕ್ಸ್ ಓದೋದು ತುಂಬಾ ಇಷ್ಟ. ಅವರು ಬುಕ್ಸ್ ಓದೋದೇ ಇಲ್ಲ. ಅವರು ತುಂಬಾ ಆ್ಯಕ್ಟಿವ್ ಪರ್ಸನ್. ನಾನು ಸ್ವಲ್ಪ ಬಿಗುಮಾನ ವ್ಯಕ್ತಿತ್ವ.
ಫ್ರೆಂಡ್‌ಗಳ ಜೊತೆ ನಾನು ಓಪನ್ ಆಗ್ತೀನೇ ಹೊರತು ಹೊರಗಡೆ ಜನರಿಗೆ ನನ್ನ ನಿಜ ರೂಪ ಗೊತ್ತಾಗೋ ಚಾನ್ಸೇ ಇಲ್ಲ. ಯಾಕಂದ್ರೆ ನಾನು ಓಪನ್ ಆಗಿ ಎಲ್ಲರ ಆತ್ತಿರ ಮಾತನಾಡಲು ಬಯಸುವುದಿಲ್ಲ. ಆದ್ರೆ ಅಂಬಿ ಅತ್ರ ಮಾತ್ರ ತುಂಬಾ ಓಪನ್ ಆಗಿ ಇರ್ತಿದ್ದೆ ನಾನು. ನಾನು ನೋಡಿರೋದರಲ್ಲಿ ಸ್ವಲ್ಪ ಡಿಫರೆಂಟ್ ಪರ್ಸನಾಲಿಟಿ ಅಂತ ನನ್ನ ನೋಡಿ ಅವರಿಗೆ ಅನ್ನಿಸಿರಬಹುದು. ಕಾಲ ಕ್ರಮೇಣ ನಾವು ಇಬ್ರೂ ಕ್ಲೋಸ್ ಆಗ್ತಾ ಬಂದ್ವಿ
ಪ್ರೀತಿ ಏನು ಇಷ್ಟುದಿನದ್ದು ಅಂತ ನಿರ್ದಿಷ್ಟವಾಗಿ ಹೇಳಲು ಆಗುವುದಿಲ್ಲ. 8 ರಿಂದ 10 ಸಿನೆಮಾ ಗಳನ್ನು ಮಾಡಿದೀವಿ ಜೊತೇಲಿ, ನ್ಯೂಡೆಲ್ಲಿ ಆದ್ಮೇಲೆ ಕ್ಲೋಸ್ ಆದ್ವಿ. ಆಗಾಗ ಮಾತಾಡ್ಕೋತಿದ್ವಿ. ಈಗಲ್ಲ ಒಂದೆರಡು ವರ್ಷ ಬಿಟ್ಟು ಮದ್ವೆ ಮಾಡ್ಕೊಳೋಣ ಅಂತ ಮಾತಾಡ್ತಿದ್ವಿ. ಈ ಥರ ಒಬ್ಬರು ಔಪಚಾರಿಕ ವಾಗಿ ಪ್ರೊಪೋಸಲ್ ಮಾಡಿದ್ದು ಅಂತ ಇಲ್ಲ.
ಅವರ ಮನೆಯವ್ರು ಸ್ವೀಕರಿಸಿದ್ದು ಹೇಗೆ
ನಮ್ ಮದ್ವೆಯಾದಾಗ ಅವರಿಗೆ 39 ವರ್ಷ. ಅಷ್ಟು ವಯಸ್ಸಾದರೂ ಇನ್ನು ಮದುವೆ ಆಗದ ಕಾರಣ ಅವರ ಮನೆಯವರು ಕಾಯ್ತಾ ಇದ್ರು. ಒಮ್ಮೆ ಮದ್ವೆ ಆಗ್ಬಿಡ್ಲಿ ಅಂತ. ಮದ್ವೆಯಾದ್ರೆ ಸಾಕು ಅಂತ ಅವರ ತಾಯೀ ಹೇಳುತ್ತಿದ್ದರು. ಹಾಗೂ ಅವರಮ್ಮ ತುಂಬಾ ಆಸೆ ಇಟ್ಕೊಂಡಿದ್ರು. ಅಂಬರೀಷ್ ಮದ್ವೆ ಮಾಡ್ಬೇಕು. ನಮ್ ಇಬ್ರಿಗೆ ಗಂಡು ಮಗು ಆಗುತ್ತೆ ಅಂತ, ಅಂಬರೀಷ್ ಮಗು ಆಗಿ, ಆ ಮಗು ನೋಡಿದ ಮೇಲೇನೆ ಈ ಜಗತ್ತನ್ನು ತೊರೆಯಬೇಕು ಅನ್ನೋ ಆಸೆ ಇತ್ತು ಅವರಿಗೆ. ಆಗೆ ಆಯ್ತು.
ತುಂಬಾ ಇಷ್ಟವಾದ ಗುಣ
ನನ್ನದು ಬೇಗ ಜಡ್ಜ್ ಮಾಡುವ ಗುಣ. ಯಾರೇ ಆಗ್ಲಿ, ಇವರ ಬಗ್ಗೆ ಕೆಟ್ಟದಾಗಿ ಮಾತಾಡಿರಬಹುದು. ಇವರ ಬೆನ್ನ ಹಿಂದೆ ದ್ರೋಹ ಮಾಡಿರಬಹುದು. ಇವರಿಗೆ ಗೊತ್ತಿರುತ್ತೆ ಅದು. ಆದರೂ ಅವರೇ ಬಂದು ನಾನು ಕಷ್ಟದಲ್ಲಿದೀನಿ ಸಹಾಯ ಬೇಕು ಅಂದ್ರೆ ಅದು ಹಣ ಆಗ್ಲಿ, ಇನ್ನೊಂದಾಗ್ಲಿ ಇನ್ನೊಬ್ಬರಿಗೆ ಮಾತಾಡಿ ಇನ್‌ಪ್ಲುಯೆನ್ಸ್ ಮಾಡ್ಸೋದಾಗ್ಲಿ ಮರು ಮಾತನಾಡದೆ ಸರಿ ಅಂತ ಇದ್ರು ಅದು ನಂಗೆ ತುಂಬಾ ಇಷ್ಟವಾದ ಗುಣ ಅವರಲ್ಲಿ. ಆದರೆ ಒಮ್ಮೊಮ್ಮೆ ಅವರ ಮೇಲೆ ಕೋಪಾನೂ ಬರುತ್ತೆ, ನಮ್ ಬಗ್ಗೆ ಇಷ್ಟೊಂದು ಕೆಟ್ದಾಗಿ ಮಾತಾಡಿರೋರು ನಾವು ಯಾಕೆ ಸಹಾಯ ಮಾಡ್ಬೇಕು ಅಂತ. ಸಾಮಾನ್ಯವಾಗಿ ಎಲ್ಲರಿಗೂ ಅನಿಸುತ್ತದೆ ಅಲ್ಲವೇ. ಮನುಷ್ಯನ ಶಜ ಗುಣ ಅದು. ಆದ್ರೆ ಇವರಲ್ಲಿ ಅದಿಲ್ಲ. ಅದು ಏನೋ ದೇವ್ರು ಇವರಿಗೆ ಸ್ಪೆಷಲ್ ನೇಚರ್ ಕೊಟ್ಟಿದಾನೆ ಅಂತನ್ಸತ್ತೆ ನಂಗೆ ಒಂದೊಂದ್ಸಲ . ಯಾಕಂದ್ರೆ ಎಲ್ಲ ಸಮಯದಲ್ಲಿ ಅದೇ ರೀತಿ ಇರಲು ಸಾಧ್ಯವಿಲ್ಲ ಅಲ್ಲವೇ?.
ಇಷ್ಟಆಗ್ದೇ ಇದ್ದದ್ದು
ಅವರು ಯಾರನ್ನು ಆಳವಾಗಿ ಜಡ್ಜ್ ಮಾಡಲ್ಲ ಅನ್ನೋದರಿಂದ ನಾವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಸಹಾಯ ಮಾಡ್ಬೇಕು ನಿಜ. ಆದ್ರೆ ದುಷ್ಟರಿಂದ ದೂರವಿರು ಅನ್ನೋ ಗಾದೆ ಹಳೇದಾದ್ರು ಅದು ತುಂಬಾ ನಿಜ ಅಲ್ಲವೇ. ಆದ್ದರಿಂದ ಎಷ್ಟೋ ತೊಂದ್ರೆಗಳಾಗ್ಬಹುದು ಅಲ್ಲವೇ. ಆದರೆ ಅವರು ಅದರ ಬಗ್ಗೆ ಆಳವಾಗಿ ಯೋಚ್ನೆ ಮಾಡಲ್ಲ. ಯಾರ್ ಯಾರ್ನೋ ಪ್ರೋತ್ಸಾಹ ಮಾಡ್ತಾರೆ, ಅವರ ಜೊತೆಗಿರ್ತಾರೆ, ಮನೆಗ್ ಕರೀತಾರೆ, ಊಟ ಮಾಡಿಸ್ತಾರೆ, ಕೆಲವೊಂದು ಬಾರಿ ಅದು ಇಂದೆ ಇಂದ ಬೆಂಕಿ ಹೆಚ್ಚಿದಂತೆ ಆಗಿರುತ್ತದೆ ಕೆಲವು ಸಲ ಆಗಿದೆ ಕೂಡ. ಯಾರನ್ನೇ ಆದ್ರು ಜಡ್ಜ್ ಮಾಡ್ಕೊಳ್ಳಿ. ನಾನು ಅಥವಾ ಇನ್ಯಾರೋ ವೆಲ್‌ವಿಷರ್ ಹೇಳೋ ಮಾತನ್ನು ಕೇಳ್ಬಿಟ್ಟು ಅದಾದ್ಮೇಲೆ ಡಿಸೈಡ್ ಮಾಡಿ ಅಂದ್ರೆ ಕೇಳಲ್ಲ.
ಯಾರ ಮಾತೂ ಕೇಳಲ್ಲ. ಈ ಪ್ರಪಂಚದಲ್ಲಿ ಯಾರೇ ಆಗ್ಲಿ ಇಂತಹ ವಿಷ್ಯ ನೀನು ಮಾಡ್ಲೇಬೇಕು ಅಂತ ಹೇಳಿದ್ರೆ ಕೇಳೋದೇ ಇಲ್ಲ. ಅವರ ಮೈಂಡಲ್ಲಿ ಬರ್ಬೇಕಷ್ಟೇ. ಆ ಥರ ಎಷ್ಟೋ ಸಲ ನಾನು ಹೇಳಿದ ವಿಷಯ ಸರಿ ಆಗಿದೆ. ಹೇಳಿದಂತೆ ನಡೆದಿದೆ. ಏನ್ ನಡೀಬೇಕಿತ್ತೋ ಅದೇ ನಡೆದಿದೆ. ನಡೆದ ಮೇಲೆ ಒಪ್ಕೊಳ್ತಾರೆ. ಹೌದು ನೀನ್ ಹೇಳಿದ್ದು ಕರೆಕ್ಟ್. ನೀ ಹೇಳಿದ್ದನ್ನ ಕೇಳ್ಬೇಕಾಗಿತ್ತು ಅಂತ. ಈ ಥರ ಒಪ್ಕೊಂಡಿದ್ದ ಸಂದರ್ಭ ಬೇಕಾದಷ್ಟಿದೆ. ಆದರೆ ವಿಶೇಷ ಅಂದ್ರೆ ಅಷ್ಟೆಲ್ಲಾ ಆದ್ರೂ ತಿರ್ಗಾ ಅದೇ ಸಿಚುವೇಷನ್ ಬಂದ್ರೆ ಮತ್ತೆ ಸಹಾಯ ಮಾಡ್ತಾರೆ. ಅದರಲ್ಲಿ ಚೇಂಜ್ ಆಗ್ಲೇ ಅವ್ರು..
ಅವರಿಗೆ ಕೋಪ ಬಂದಾಗ..
ಅವರದು ಇಂದು ಮುಂದು ಯೋಚ್ನೇ ಮಾಡದೆ ಕೊಪಿಸಿಕೊಳ್ಳುವ ಗುಣ. ಐದ್ ನಿಮಿಷ, ಹತ್ತು ನಿಮಿಷ ಕೋಪ ಇರುತ್ತೆ. ಆಮೇಲೆ ಪಶ್ಚಾತ್ತಾಪ ಪಡ್ತಾರೆ. ಅವರು ಜೀವನದಲ್ಲಿ ಕ್ಷಮೆ ಕೇಳಲ್ಲ. ತಪ್ಪು ಮಾಡಿದೆ ಅಂತ ಗೊತ್ತಾದ್ರೂ ಕ್ಷಮೆ ಕೇಳಲ್ಲ. ಆದ್ರೆ ಅವರು ಬೇರೆ ಥರ ನಮಗೆ ಗೊತ್ತಾಗೋ ತರ ಮಾಡಿ ನಮ್ಗೆ ಸಮಾಧಾನ ಮಾಡೋರು.