Kannada Cinema News

ಹುಟ್ಟು ಹಬ್ಬದ ದಿನ ಅಮ್ಮನಿಗೆ ಅಂಬಿ ಕೊಡುತ್ತಿದ್ದ ವಿಶೇಷ ಉಡುಗೊರೆ ಕೊಟ್ಟ ಅಭಿಷೇಕ್! ವಿಡಿಯೋ ನೋಡಿ

ನಮ್ಮ ಸುಮಲತಾ ಅಂಬರೀಷ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ! ಮೊದಲಿಗೆ ಸುಮಲತಾ ಅಂಬರೀಷ್ ಅವರಿಗೆ ನಮ್ಮ ಕಡೆಯಿಂದ ಹುಟ್ಟು ಹಬ್ಬದ ಶುಭಾಶಯಗಳು! ಸುಮಲತಾ ಅಂಬರೀಷ್ ಅವರು ಮೊನ್ನೆ ಅಷ್ಟೇ ಕರೋನ ದಿಂದ ಪಾರಾಗಿ ಗುಣಮುಖರಾಗಿ ಬಂದಿದ್ದಾರೆ! ಇವತ್ತು ಸುಮಲತಾ ಅಂಬರೀಷ್ ಅವರ ಹುಟ್ಟು ಹಬ್ಬದ ದಿನ ಪುತ್ರ ಅಭಿಷೇಕ್ ಅಂಬರೀಷ್ ಅವರು ಸುಮಲತಾ ಅವರಿಗೆ ಕೇಕ್ ತಿನ್ನಿಸಿ ಹುಟ್ಟು ಹಬ್ಬವನ್ನು ಆಚರಿಸಿ, ಒಂದು ಸುಂದರ ಉಡುಗೊರೆಯನ್ನು ಕೂಡ ನೀಡಿ ಹುಟ್ಟು ಹಬ್ಬದ ಆಚರಣೆ ಮಾಡಿದ್ದಾರೆ. ಅಮ್ಮನಿಗೆ ಅಭಿಷೇಕ್ ಏನು ಕೊಟ್ಟಿದ್ದಾರೆ ಗೊತ್ತಾ, ಮುಂದೆ ಓದಿರಿ

ಹೌದು ಅಮ್ಮ ಸುಮಲತಾ ಅಂಬರೀಷ್ ಅವರ ಹುಟ್ಟು ಹಬ್ಬ ಆಚರಣೆ ಮಾಡಿ, ಪುತ್ರ ಅಭಿಷೇಕ್ ಅಂಬರೀಷ್ ಅವರು ತಾಯಿಗೆ ಒಂದು ಒಳ್ಳೆಯ ರೇಷೆ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದಾರೆ! ಇದನ್ನು ನೋಡಿ ಸುಮಲತಾ ಅವರು ಕೂಡ ಕೊಂಚ ಭಾವುಕರಾಗಿದ್ದರು. ಕಾರಣ ಏನೆಂದರೆ, ಅಂಬಿ ಇರುವಾಗ ಕೂಡ ಪ್ರತಿ ವರ್ಷ ಸುಮಲತಾ ಅವರ ಹುಟ್ಟು ಹಬ್ಬದ ದಿನ ಅಂಬಿ ಅವರು ಖುದ್ದು ತಾವೆ ಸೆಲೆಕ್ಟ್ ಮಾಡಿ ಒಂದು ಒಳ್ಳೆಯ ರೇಷ್ಮೆ ಸೀರೆಯನ್ನು ಗಿಫ್ಟ್ ಆಗಿ ಕೊಡುತ್ತಿದ್ದರು. ಈಗ ಅದೇ ಕೆಲಸವನ್ನು ಪುತ್ರ ಅಭಿಷೇಕ್ ಅಂಬರೀಷ್ ಅವರು ಮಾಡಿದ್ದಾರೆ. ಹುಟ್ಟು ಹಬ್ಬ ಆಚರಣೆಯ ಸುಂದರ ಕ್ಷಣಗಳನ್ನು ನೋಡಿ. ಈ ಕೆಳಗಿನ ವಿಡಿಯೋ ನೋಡಿ

ಸದ್ಯ ಅಭಿಷೇಕ್ ಅಂಬರೀಷ್ ಅವರು ತಮ್ಮ ಹೊಸ ಚಿತ್ರವಾದ ಬ್ಯಾಡ ಮ್ಯಾನರ್ಸ್ ಚಿತ್ರದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಸುಮಲತಾ ಅವರು ಕೂಡ ಈಗಷ್ಟೇ ಕರೋನ ದಿಂದ ಪಾರಾಗಿ ಸದ್ಯ ಮನೆಯಲ್ಲಿ ಚೇತರಿಸಿ ಕೊಳ್ಳುತ್ತಿದ್ದಾರೆ. ಸುಮಲತಾ ಅಂಬರೀಷ್ ಹಾಗು ಅಭಿಷೇಕ್ ಅವರ ಈ ಸುಂದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದು, ಜನರು ಇದನ್ನು ಇಷ್ಟಪಟ್ಟಿದ್ದಾರೆ.

ಇನ್ನೊಂದು ಕಡೆ, ನಮ್ಮ ಡಿಬಾಸ್ ದರ್ಶನ್ ಅವರು ಕೂಡ ಮದರ್ ಇಂಡಿಯಾ ಎಂದು ಕರೆದು, ಸುಮಲತಾ ಅಂಬರೀಷ್ ಅವರಿಗೆ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಹಾಗು ಎಲ್ಲಾ ಲೇಟೆಸ್ಟ್ ಸುದ್ದಿಗಳಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿ ಹಾಗು ನಮ್ಮನ್ನು ಫಾಲೋ ಮಾಡಿರಿ.

Trending

To Top