health-Kannada

ಮಧುಮೇಹ- ಸಕ್ಕರೆ ಖಾ#ಯಿಲೆ – ತಡೆಯಲು 10 ಸುಲಭ ಮಾರ್ಗಗಳು! ಪ್ರತಿಯೊಬ್ಬರೂ ಇದನ್ನು ಓದಲೇಬೇಕು

1)ನಿಮ್ಮ ಆಹಾರದಲ್ಲಿ ಸಕ್ಕರೆ ಹಾಗೂ ಸಂಸ್ಕರಿಸಿದ ಕಾರ್ಬ್ಸ್ಗಳ ಪ್ರಮಾಣ ಕಡಿಮೆ ಮಾಡುವದು. ಸಕ್ಕರೆ ಹಾಗೂ ಸಂಸ್ಕರಿಸಿದ ಕಾರ್ಬ್ಸ್ಗಳ ಸೇವನೆಯು ಬಹು ಬೇಗನೇ ಮಧುಮೇಹವನ್ನು ತರಬಲ್ಲುದು. ಜೀರ್ಣವಾದ ಆಹಾರದಿಂದ ಉತ್ಪಾದನೆಗೊಂಡ ರಕ್ತದಲ್ಲಿಯ ಸಕ್ಕರೆಯ ಅಂಶವನ್ನು ಹೀರಿಕೊಂಡು ಇನ್ಸುಲಿನ್ ಬಿಡುಗಡೆಗೊಳಿಶಿ ಜೀವಕೋಶಗಳಿಗೆ ತಲುಪಿಸುವ ಕ್ರಿಯೆಯನ್ನು ಮೇದೋಜೀರಕ ಗ್ರಂಥಿಯು ಮಾಡುತ್ತದೆ. ಈ ಕ್ರಮವು ಮುಂದುವರೆದು, ಒಂದು ವೇಳೆ ರಕ್ತದಲ್ಲಿಯ ಸಕ್ಕರೆ ಅಂಶವನ್ನು ಹೀರಿಕೊಳ್ಳುವಸ್ಟು ಸಾಮರ್ಥ್ಯದ ಇನ್ಸುಲಿನ್ ಮೇದೋಜೀರಕ ಗ್ರಂಥಿಯಿಂದ ಸಾಧ್ಯವಾಗದೇ ರಕ್ತದಲ್ಲಿಯ ಸಕ್ಕರೆ ಅಂಶ ಹೆಚ್ಚಾಗಿ ನಿಮಗೆ ಮಧುಮೇಹ ಕಾಣಿಸಿಕೊಳ್ಳುತ್ತದೆ. ವಿವರವಾದ ಅಧ್ಯಯನಗಳಿಂದ ತಿಳಿದ ಪ್ರಕಾರ ಬೇಗನೇ ಪಚನಗೊಳ್ಳುವ ಕಾರ್ಬ್ಸ್ ಸೇವನೆಯಿಂದ ಮಧುಮೇಹ ರೋಗಕ್ಕೆ ದಾರಿಮಾಡಿ ಕೊಟ್ಟಂತಾಗುತ್ತದೆ.

2) ದೈಹಿಕ ಚಟುವಟಿಕೆ ಅಗತ್ಯ: ದೈಹಿಕ ಚಟುವಟಿಕೆಗಳಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಹತೋಟಿಯಲ್ಲಿಡಲು ಅಲ್ಪ ಪ್ರಮಾಣದ ಇನ್ಸುಲಿನ್ನ ನ ಅಗತ್ಯವಿದೆ. ಆರಂಭಿಕ ಹಂತದಲ್ಲಿ ನ ಮಧುಮೇಹಿಗಳು ಕಡಿಮೆ ಗತಿಯ ದೈಹಿಕ ಚಟುವಟಿಕೆಯಿಂದ ಇನ್ಸುಲಿನ್ ನ ಸೂಕ್ಷ್ಮತೆಯನ್ನು ಶೇ.51ರಷ್ಟು ಹಾಗೂ ಹೆಚ್ಚಿನ ಗತಿಯ ದೈಹಿಕ ಚಟುವಟಿಕೆ ಯಿಂದ ಶೇ.85ರಷ್ಟು ಹೆಚ್ಚಿಸಬಹುದಾಗಿದೆ. ಸ್ಥೂಲಕಾಯದ ಹಾಗೂ ಆರಂಭಿಕ ಹಂತದ ಮಧುಮೇಹಿ ವ್ಯಕ್ತಿಗಳಿಗೆ ಈ ರೀತಿಯ ಮಂದಗತಿಯ ದೈಹಿಕ ಚಟುವಟಿಕೆ, ಇನ್ಸುಲಿನ್ ನ ಸೂಕ್ಷ್ಮತೆಯನ್ನು ಹೆಚ್ಚಿಸಲು ಸಾಧ್ಯವಾಗದ ಕಾರಣ ಇಂತಹವರಿಗೆ ಏರೋಬಿಕ್ಸ್ ಹಾಗೂ ಹೆಚ್ಚಿನ ಶಕ್ತಿ ಅಥವಾ ಕ್ಯಾಲೊರಿಸ್ ವ್ಯಯವಾಗುವಂತಹ ದೈಹಿಕ ಚಟುವಟಿಕೆಯ ಅವಶ್ಯಕತೆ ಇರುತ್ತದೆ. ಪ್ರಯೋಜನಕಾರಿ ಇನ್ಸುಲಿನ್ ನ ಸೂಕ್ಷ್ಮತೆಯನ್ನು ಹೆಚ್ಚಿಸಿಕೊಳ್ಳಲು ವಾರಕ್ಕೆ 2000 ಕ್ಯಾಲೋರಿಸ್ ವ್ಯಯವಾಗುವಂತಹ ದೈಹಿಕ ಚಟುವಟಿಕೆ ನಿಮಗೆ ಅಗತ್ಯವಿದೆ.

3)ಆಧ್ಯತೆ ಮೇರೆಗೆ ನೀರನ್ನು ಕುಡಿಯಬೇಕು: ಸಕ್ಕರೆಯುಕ್ತ ಪಾನೀಯಗಳ ಅತೀಯಾದ ಸೇವನೆಯಿಂದ ಟೈಪ್-2 ಮಧುಮೇಹ ಬರುತ್ತದೆ. ಆದ್ದರಿಂದ ನೈಸರ್ಗಿಕವಾಗಿ ದೊರಕುವ ನೀರನ್ನು ಕುಡಿಯುವುದರಿಂದ ದೇಹದ ಒಳ್ಳೆಯ ಆರೋಗ್ಯ ದ ಜೊತೆಗೆ ಮಧುಮೇಹವನ್ನು ಸಹ ತಡೆಯಬಹುದು. ಲಡಾ ಇದು ಒಂದು ಪ್ರಕಾರದ ಟೈಪ್-1 ಮಧುಮೇಹ ರೋಗವಾಗಿದ್ದು, ಸಾಮಾನ್ಯ ವಾಗಿ18 ವರ್ಷ ವಯಸ್ಸಿನ ಮೇಲ್ಪಟ್ಟವರಿಗೆ ಬರುತ್ತದೆ.ಸಕ್ಕರೆಯುಕ್ತ ಪಾನೀಯಗಳನ್ನು ದಿನಕ್ಕೆರಡು ಬಾರಿಯಂತೆ ಸೇವಿಸಿದಾಗ ಶೇ.99 ರಷ್ಟು ಲಡಾ ಬರುವ ಸಾಧ್ಯತೆ ಇದೆ.ಅಲ್ಲದೇ ಶೇ.20 ರಷ್ಟು ಟೈಪ್-2 ಮಧುಮೇಹ ಬರುತ್ತದೆ. 24 ವಾರಗಳ ಒಂದು ಅಧ್ಯಯನದ ಪ್ರಕಾರ ಸ್ಥೂಲ ಕಾಯದವರು ತಮ್ಮ ತೂಕ ಇಳಿಸಲು ಮಾಡಿಕೊಂಡ ಯೋಜನೆ ಗಳಲ್ಲಿ ಸೋಡಾದ ಬದಲಾಗಿ ನೀರನ್ನು ಉಪಯೋಗಿಸಿ, ಇನ್ಸುಲಿನ್ ನ ಸೂಕ್ಷ್ಮತೆಯನ್ನು ಹೆಚ್ಚಿಸಿ ಹಾಗೂ ಉಪವಾಸದ ವೇಳೆಯ ರಕ್ತದಲ್ಲಿಯ ಸಕ್ಕರೆ ಪ್ರಮಾಣವನ್ನು ಕಡಿಮೆಮಾಡಿಕೊಂಡಿರುತ್ತಾರೆ. 4)ದೇಹದ ತೂಕದ ಮೇಲೆ ನಿಗಾ ಇರಲಿ: ಸ್ಥೂಲಕಾಯದ ವ್ಯಕ್ತಿಗಳಲ್ಲಿ ಟೈಪ್-2 ಮಧುಮೇಹ ಸಾಮಾನ್ಯ ವಾಗಿ ಕಾಣಿಸಿಕೊಳ್ಳಬಹುದು. ಆರಂಭಿಕ ಹಂತದ ಮಧುಮೇಹಿಗಳಲ್ಲಿ ವಿಶೇಷ ವಾಗಿ ಹೊಟ್ಟೆಯ ಬೊಜ್ಜು ಅಥವಾ ಕರುಳಿನ ಕೊಬ್ಬು ಕಾರಣವಾಗುತ್ತದೆ.ಈ ತರಹದ ಕೊಬ್ಬಿನಿಂದ ಇನ್ಸುಲಿನ್ನ ನ ಶಕ್ತಿಯನ್ನು ಕುಂದಿಸಿ ,ಉರಿಯೂತವನ್ನು ಉಂಟು ಮಾಡುತ್ತದೆ ಅಲ್ಲದೇ ಮಧುಮೇಹಕ್ಕೆ ನಾಂದಿ ಹಾಡುತ್ತದೆ. ದೇಹದ ತೂಕ ಕಡಿಮೆ ಮಾಡಿಕೊಳ್ಳಲು ದೈಹಿಕ ಚಟುವಟಿಕೆ ಯೊಂದಿಗೆ ಕಡಿಮೆ ಕಾರ್ಬ್ಸ್ ಇರುವ ಆಹಾರ ಸೇವನೆಯಿಂದ ಸುಲಭಸಾದ್ಯ.

5)ಧೂಮ್ರಪಾನ ತ್ಯಜಿಸಿ: ಧೂಮ್ರಪಾನದಿಂದ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮಗಳು ಉಂಟಾಗುತ್ತವೆ,ಅದರಲ್ಲಿ ಮಧುಮೇಹ ಕೂಡಾ ಒಂದು. ಅಧ್ಯಯನ ದ ಪ್ರಕಾರ ಸಾಮಾನ್ಯ ಧೂಮ್ರಪಾನದಿಂದ ಶೇ.44 ರಷ್ಟು ಜನರಿಗೆ, ಹಾಗೂ ದಿನಕ್ಕೆ 20 ರಂತೆ ಶಿಗರೇಟ ಸೇದುವವರಲ್ಲಿ ಶೇ. 61 ರಷ್ಟು ಜನರಿಗೆ ಮಧುಮೇಹ ಅಂಟಿಕೊಂಡಿರುವದಾಗಿ ತಿಳಿದುಬಂದಿದೆ. ಧೂಮ್ರಪಾನವನ್ನು ಸಂಪೂರ್ಣವಾಗಿ ತ್ಯಜಿಸಿದವರಲ್ಲಿ ಕೆಲ ಸಮಯದ ನಂತರ ಟೈಪ್-2 ಮಧುಮೇಹ ಪರಿಣಾಮಕಾರಿಯಾಗಿ ಕಡಿಮೆಯಾಗಿದ್ದು ಕಂಡುಬಂದಿದೆ. 6) ಕಡಿಮೆ ಕಾರ್ಬ್ಸಯುಕ್ತ ಆಹಾರವನ್ನು ಸೇವಿಸಿ: ಕಡಿಮೆ ಕಾರ್ಬ್ಸಯುಕ್ತ ಆಹಾರ ಸೇವನೆ ಮಾಡುವುದರಿಂದ ದೇಹದ ತೂಕ ಕಡಿಮೆಯಾಗಿ ಇನ್ಸುಲಿನ್ ನ ಸೂಕ್ಷ್ಮತೆಯನ್ನು ಹೆಚ್ಚಿಸಿ ಮಧುಮೇಹವನ್ನು ನಿಯಂತ್ರಿಸುತ್ತದೆ. 12 ವಾರಗಳ ಒಂದು ಅಧ್ಯಯನ ದಲ್ಲಿ ಕಡಿಮೆ ಕಾರ್ಬ್ಸಯುಕ್ತ ಆಹಾರ ಸೇವನೆಯಿಂದ ಅನೇಕರಲ್ಲಿ ರಕ್ತದಲ್ಲಿನ ಸಕ್ಕರೆ ಅಂಶ ಶೇ.12 ಹಾಗೂ ಇನ್ಸುಲಿನ್ ಪ್ರಮಾಣ ಶೇ.50 ಕ್ಕೆ ಕಡಿತಗೊಂಡಿದ್ದು, ಅದೇ ರೀತಿ ಕಡಿಮೆ ಕೊಬ್ಬಿನ ಆಹಾರ ಸೇವನೆಯಿಂದ ಅನೇಕರಲ್ಲಿ ರಕ್ತದಲ್ಲಿನ ಸಕ್ಕರೆ ಅಂಶ ಕೇವಲ ಶೇ.1 ರಷ್ಟು ಹಾಗೂ ಇನ್ಸುಲಿನ್ ಪ್ರಮಾಣ ಶೇ.19 ರಷ್ಟು ಮಾತ್ರ ಕಡಿಮೆಯಾಗಿರುತ್ತದೆ. ಈ ರೀತಿಯ ಕಡಿಮೆ ಕಾರ್ಬ್ಸಯುಕ್ತ ಆಹಾರ ಸೇವನೆಯಿಂದ ಸ್ಥೂಲ ಕಾಯದ ಜನರ ಉಪವಾಸದ ಸಮಯದ ರಕ್ತದಲ್ಲಿನ ಸಕ್ಕರೆ ಪ್ರಮಾಣ 118 ರಿಂದ 92 ಮಿ.ಗ್ರಾಮ/ ಡಿ ಎಲ್ ಕಂಡು ಬಂದಿದ್ದು ಇದು ಫಾಸ್ಟಿಂಗ್ ಸಮಯದಲ್ಲಿನ ಸಾಮಾನ್ಯ ರಕ್ತದ ಪ್ರಮಾಣಕ್ಕಿಂತ ಕಡಿಮೆಯಾಗಿರುತ್ತದೆ.7) ನಾರಿನಂಶಯುಕ್ತ ಆಹಾರ ಸೇವಿಸಿ: ನಾರಿನಂಶ ಹೆಚ್ಚಾಗಿರುವ ಆಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಎರಡು ವಿಧ,ಒಂದು ನೀರಿನಲ್ಲಿ ಕರಗುವಂಥಹದ್ದು ಇನ್ನೊಂದು ನೀರಿನಲ್ಲಿ ಕರಗದೇ ಇರುವಂತಹ ನಾರಿನಂಶ. ನೀರಿನಲ್ಲಿ ಕರಗುವ ನಾರಿನಂಶ ಹಾಗೂ ನೀರು ಎರಡೂ ಸೇರಿ ದೇಹದಲ್ಲಿ ಬೇಗನೆ ಆಹಾರವನ್ನು ಹೀರಿ ಕೊಳ್ಳುವ ಗತಿಯನ್ನು ಕಡಿಮೆಗೊಳಿಸಿ ರಕ್ತದಲ್ಲಿಯ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುತ್ತದೆ. ಆದರೆ ನೀರಿನಲ್ಲಿ ಕರಗದೇ ಇರುವ ನಾರಿನಂಶದ ಆಹಾರ ಸೇವನೆ ಮಾಡುವುದರಿಂದ ಮೇಲಿನ ಕ್ರಿಯೆಯನ್ನು ಬದಲಿಸಿ ರಕ್ತದಲ್ಲಿಯ ಸಕ್ಕರೆ ಪ್ರಮಾಣವನ್ನು ಕಡಿಮೆಗೊಳಿಸಿ ಮಧುಮೇಹದ ದುಷ್ಪರಿಣಾಮವನ್ನು ಶಮನಗೊಳಿಸುತ್ತದೆ. ಸಂಸ್ಕರಣೆಗೊಳ್ಳದ ಆಹಾರದಲ್ಲಿ ನಾರಿನಂಶವನ್ನು ಪಡೆಯಬಹುದಾಗಿದೆ.

8) ಡಿ-ಜೀವನಸತ್ವದ ಪ್ರಮಾಣವನ್ನು ಹೆಚ್ಚಿಸಿಕೊಳ್ಳಿ: ಡಿ-ಜೀವನ ಸತ್ವಯು ರಕ್ತದಲ್ಲಿಯ ಸಕ್ಕರೆ ಅಂಶವನ್ನು ನಿಯಂತ್ರಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಡಿ-ಜೀವನಸತ್ವ ಕಡಿಮೆಯುಳ್ಳವರು ಸಾಮಾನ್ಯವಾಗಿ ಎಲ್ಲ ರೀತಿಯ ಮಧುಮೇಹ ರೋಗಕ್ಕೆ ಬಲಿಯಾಗುತ್ತಾರೆ.ದೇಹದಲ್ಲಿ ಡಿ-ಜೀವನಸತ್ವದ ಪ್ರಮಾಣ 30 ಮಿ.ಗ್ರಾ/ಮಿ.ಲಿ ನಷ್ಟು ಇರಬೇಕು. ಡಿ-ಜೀವನಸತ್ವ ಹೆಚ್ಚಾಗಿರುವ ವಯಸ್ಕರರಲ್ಲಿ ಶೇ. 43 ರಷ್ಟು ಕಡಿಮೆ ಜನರಿಗೆ ಟೈಪ್-2 ಮಧುಮೇಹ ಕಂಡು ಬಂದಿದ್ದು, ಮಕ್ಕಳಲ್ಲಿ ಡಿ-ಜೀವನ ಸತ್ವದ ಪೂರಕ ಆಹಾರ ಸೇವನೆ ಮಾಡುವುದರಿಂದ ಶೇ.78 ರಷ್ಟು ಕಡಿಮೆ ಪ್ರಮಾಣದ ಟೈಪ್-1 ಮಧುಮೇಹದ ಗತಿ ಕಂಡು ಬಂದಿದೆ. ಕಡಿಮೆ ಡಿ – ಜೀವನ ಸತ್ವ ಹೊಂದಿದ ವ್ಯಕ್ತಿಗೆ ಅದರ ಪೂರಕಗಳನ್ನು ನೀಡಿದಾಗ ಜೀವ ಕೋಶಗಳಲ್ಲಿ ಇನ್ಸುಲಿನ್ ಉತ್ಪಾದಿಸುವ ಶಕ್ತಿ ವೃದ್ಧಿಸಿದ್ದು ಗೋಚರವಾಗಿದೆ. ಕೊಬ್ಬಿನ ಅಂಶ ಹೊಂದಿರುವ ಮೀನು ಹಾಗೂ ಕಾಡ ಲಿವರ್ ಎಣ್ಣೆಯಲ್ಲಿ ಡಿ-ಜೀವನ ಸತ್ವ ಹೆಚ್ಚಾಗಿರುತ್ತದೆ,ಅಲ್ಲದೇ ಬೆಳಗಿನ ಸೂರ್ಯನ ಕಿರಣಗಳಲ್ಲೂ ಸಹ ಡಿ-ಜೀವನಸತ್ವವನ್ನು ಪಡೆಯಬಹುದಾಗಿದೆ. ಡಿ-ಜೀವನಸತ್ತ್ವ ಒದಗಿಸುವ ಪೂರಕವು ಸಾಮಾನ್ಯವಾಗಿ 2000-4000 ಐ ಯು.ನಷ್ಟು ಇದ್ದರೆ ಮಧುಮೇಹ ರೋಗದಿಂದ ದೂರವಿರಬಹುದಾಗಿದೆ.9) ಸಂಸ್ಕರಿಸಿದ ಆಹಾರ ಸೇವನೆಯ ಪ್ರಮಾಣವನ್ನು ಕಡಿತಗೊಳಿಸಿ: ಸಂಸ್ಕರಿಸಿದ ಆಹಾರ ಸೇವನೆಯನ್ನು ಕಡಿಮೆಮಾಡುವದರಿಂದ ಮಧುಮೇಹ ಸಹಿತ ಅನೇಕ ರೋಗಗಳನ್ನು ತಡೆಯಬಹುದಾಗಿದೆ. ಆಹಾರವನ್ನು ಬಹುದಿನಗಳ ವರೆಗೆ ಕೆಡದಂತೆ ರಕ್ಷಿಸಲು ಸಂಸ್ಕರಿಸಿ ಇಡಲಾಗುತ್ತದೆ.ಈ ರೀತಿ ಮಾಡುವುದರಿಂದ ಅಧ್ಯಯನದ ಪ್ರಕಾರ ಕಡಿಮೆ ಮಟ್ಟದ ಪೋಷಕಾಂಶಗಳಿಂದ ಮಧುಮೇಹದ ಅಪಾಯ ಹೆಚ್ಚಾಗುವ ಅಪಾಯ ಗಮನಿಸಲಾಗಿದೆ.10) ಸೇವಿಸುವ ಆಹಾರದ ಪ್ರಮಾಣವನ್ನು ಕಡಿತಗೊಳಿಸುವದು: ವಿಶೇಷವಾಗಿ ಸ್ಥೂಲಕಾಯದ ವ್ಯಕ್ತಿಗಳು ಮಧುಮೇಹದ ಅಪಾಯ ತಪ್ಪಿಸಲು ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸೇವಿಸುವದರಿಂದ ರಕ್ತದಲ್ಲಿಯ ಸಕ್ಕರೆ ಅಂಶ ಗಣನೀಯವಾಗಿ ಹೆಚ್ಚುತ್ತದೆ. 2-ವರ್ಷಗಳ ಅಧ್ಯಯನದಂತೆ ಕಡಿಮೆ ಪ್ರಮಾಣದ ಆಹಾರ ಸೇವಿಸಿದ ವ್ಯಕ್ತಿಗಳಲ್ಲಿ ಶೇ. 46 ರಷ್ಟು ಮಧುಮೇಹದ ಅಪಾಯ ಕಡಿಮೆಯಾಗಿದೆ. ಕಡಿಮೆ ಕಾರ್ಬ್ಸಯುಕ್ತ ಆಹಾರ ಸೇವನೆ, ಕಡಿಮೆ ಪ್ರಮಾಣದ ಆಹಾರ ಸೇವನೆ ಹಾಗೂ ದೈಹಿಕ ಚಟುವಟಿಕೆಗಳಿಂದ ಮಧುಮೇಹವನ್ನು ತಡೆಯಬಹುದಾಗಿದೆ.

Trending

To Top