Kannada legends

1986 ಅರುಣಾ ರಾಗ ಸಿನಿಮಾದಿಂದ ಈಗಿನ ಗಟ್ಟಿಮೇಳದ ತನಕ! ಸುಧಾ ನರಸಿಂಹ ರಾಜು ಅವರ ಜೀವನದ ಸತ್ಯ ಕಥೆ!

ಕನ್ನಡದ ಲೆಜೆಂಡ್ ಹಾಸ್ಯ ಕಲಾವಿದರಾದ, ಹಾಸ್ಯ ಚಕ್ರವರ್ತಿ ನರಸಿಂಹ ರಾಜು ಯಾರಿಗಿಲ್ಲ ಗೊತ್ತಿಲ್ಲ ಹೇಳಿ! ಕನ್ನಡ ಚಿತ್ರ ರಂಗದ ಇತಿಹಾಸದಲ್ಲಿ ಅಜರಾಮರವಾಗಿ ಉಳಿದಿದ್ದಾರೆ ನಮ್ಮ ನರಸಿಂಹ ರಾಜು ಅವರು. ನರಸಿಂಹ ರಾಜು ಅವರು ನಮ್ಮ ಅಣ್ಣಾವ್ರ ಜೊತೆ ಹಲವಾರು ಕನ್ನಡ ಸಿನಿಮಾಗಳನ್ನು ಮಾಡಿದ್ದಾರೆ, 1954 ರಿಂದ 1979 ತನಕ ನರಸಿಂಹ ರಾಜು ಅವರು ಸುಮಾರು 100 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ನರಸಿಂಹ ರಾಜು ಅವರ ಮಡದಿ ಶಾರದಮ್ಮ ಹಾಗು ಮಕ್ಕಳು ನರಹರಿ ರಾಜು, ಸುಧಾ ನರಸಿಂಹ ರಾಜು ಹಾಗು ಧರ್ಮಾವತಿ! ಸುಧಾ ನರಸಿಂಹ ರಾಜು ಅವರು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ, ಈಗ ಇವರು ಏನ್ ಮಾಡ್ತಾ ಇದ್ದಾರೆ ಗೊತ್ತಾ! ಈ ಸುದ್ದಿ ಪೂರ್ತಿ ಓದಿರಿ

ಹೌದು! ಸುಧಾ ನರಸಿಂಹ ರಾಜು ಅವರು ಸುಮಾರು 7 ಕನ್ನಡ ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ಸುಧಾ ಅವರು 1986 ರಲ್ಲಿ ಮೊದಲ ಚಿತ್ರವಾದ “ಅರುಣಾ ರಾಗ” ಎಂಬ ಚಿತ್ರದಲ್ಲಿ ನಟನೆ ಮಾಡಿದ್ದಾರೆ. ಅವರ ಕೊನೆಯ ಚಿತ್ರ 1995 ರಲ್ಲಿ ಬಿಡುಗಡೆ ಆದ “ಕಲ್ಯಾಣೋತ್ಸವ”. ಆ ನಂತರ ಸುಧಾ ನರಸಿಂಹ ರಾಜು ಅವರು ಯಾವುದೇ ಸಿನಿಮಾ ಗಳಲ್ಲಿ, ಯಾವುದೇ ಕಿರುತೆರೆ ಕಾರ್ಯಕ್ರಮದಲ್ಲಿ, ರಿಯಾಲಿಟಿ ಶೋಗಳಲ್ಲಿ, ಧಾರಾವಾಹಿಗಳಲ್ಲಿ, ಕಾಣಿಸಿಕೊಂಡಿರಲಿಲ್ಲ! ಸುಮಾರು 20 ವರ್ಷಗಳ ಕಾಲ ಚಿತ್ರ ರಂಗದಿಂದ, ಸಿನಿಮಾ ಕ್ಷೇತ್ರದಿಂದ ದೂರ ಉಳಿದಿದ್ದರು! ಸದ್ಯ ಸುಧಾ ನರಸಿಂಹ ರಾಜು ಅವರು ಕನ್ನಡದ ಖ್ಯಾತ ದಾರಾವಾಹಿಯಾದ “ಗಟ್ಟಿಮೇಳ” ಎಂಬ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಹೌದು! ಹಾಸ್ಯ ಚಕ್ರವರ್ತಿ ನರಸಿಂಹ ರಾಜು ಅವರ ಮಗಳಾದ ಸುಧಾ ನರಸಿಂಹ ರಾಜು ಅವರು ಸದ್ಯ ಕನ್ನಡದ ಟಾಪ್ ದಾರಾವಾಹಿಯಾದ ಗಟ್ಟಿ ಮೇಳ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟನೆ ಮಾಡುತ್ತಿದ್ದಾರೆ. 2019 ರಲ್ಲಿ ಶುರುವಾದ ಗಟ್ಟಿಮೇಳ ಧಾರಾವಾಹಿ ಸದ್ಯ ಕನ್ನಡದ ಟಾಪ್ ಧಾರಾವಾಹಿಗಳಲ್ಲಿ ಒಂದು! ಸುಧಾ ಅವರು ಗಟ್ಟಿಮೇಳ ಧಾರಾವಾಹಿಯಲ್ಲಿ ಪರಿಮಳ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಸುಧಾ ಅವರು ಈ ಧಾರಾವಾಹಿಯಲ್ಲಿ ನಿಶಾ, ರಕ್ಷಿತ್ ಗೌಡ, ಸೇರಿದಂತೆ ಹಲವಾರು ಕಿರುತೆರೆ ನಟ ನಟಿಯರ ಜೊತೆ ಕೆಲಸ ಮಾಡುತ್ತಿದ್ದಾರೆ. ಸುಮಾರು 25 ವರ್ಷಗಳ ನಂತರ ಸುಧಾ ನರಸಿಂಹ ರಾಜು ಅವರು ಮತ್ತೆ ಬಣ್ಣ ಹಚ್ಚಿದ್ದಾರೆ.

1986 ರಲ್ಲಿ ರಥಸಪ್ತಮಿ ಚಿತ್ರದ ಇವರ ಪಾತ್ರದಿಂದ ಸುಧಾ ನರಸಿಂಹ ರಾಜು ಅವರು ಕರ್ನಾಟಕದ ಮನೆ ಮಾತಾಗಿದ್ದರು. 1995 ನಂತರ, ಸುಧಾ ಅವರು ಸಿನಿಮಾ ಕ್ಷೇತ್ರದಿಂದ ದೂರ ಉಳಿದಿದ್ದು, ತಮ್ಮ ಫ್ಯಾಮಿಲಿ ಲೈಫ್ ನಲ್ಲಿ ಬ್ಯುಸಿ ಆಗಿದ್ದರು. ಸದ್ಯ ಸುಧಾ ಅವರು ಗಟ್ಟಿಮೇಳ ಧಾರಾವಾಹಿಯ ಮೂಲಕ ಮತ್ತೆ ಇಡೀ ಕರ್ನಾಟಕದಲ್ಲಿ ಫೇಮಸ್ ಆಗಿದ್ದಾರೆ. ಸುಧಾ ನರಸಿಂಹ ರಾಜು ಅವರು ಇನ್ನೂ ಹೆಚ್ಚು ಕನ್ನಡ ಧಾರಾವಾಹಿಗಳಲ್ಲಿ, ಸಿನಿಮಾಗಳಲ್ಲಿ ಕೆಲಸ ಮಾಡಲಿ ಎಂದು ಆಶಿಸೋಣ! ಸುಧಾ ನರಸಿಂಹ ರಾಜು ಅವರಿಗೆ ಒಳ್ಳೇದ್ ಆಗಲಿ. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಫಾಲೋ ಮಾಡಿರಿ. ಶೇರ್ ಮಾಡಿ! Photos courtesy – Instagram

Trending

To Top