Karnataka

ಜಮಖಂಡಿಯ ರೈತನ ಮಗನ ನೆರವಿಗೆ ನಿಂತು ಅವರ ಜೀವನ ಬದಲಾಯಿಸಿದ ಸುಧಾ ಮೂರ್ತಿ!

ಕರ್ನಾಟಕದಲ್ಲಿ ಅತ್ಯಂತ ವಿಶಾಲವಾದ ಮಾತೃ ಹೃದಯವನ್ನು ಹೊಂದಿರುವ ವ್ಯಕ್ತಿ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕಿ ಸುಧಾಮೂರ್ತಿ ಅವರು. ಕರ್ನಾಟಕದಲ್ಲಿ ಎಲ್ಲಿ ಏನೇ ಕಷ್ಟದ ಪರಿಸ್ಥಿತಿ ಎದುರಾದರೂ ಸಹ ಮೊದಲು ಅದಕ್ಕೆ ಸ್ಪಂದಿಸುವುದು ಇನ್ಫೋಸಿಸ್ ಸಂಸ್ಥೆ. ಇತ್ತೀಚೆಗೆ ಭಾರಿ ಮಳೆಯಿಂದಾಗಿ ಕರ್ನಾಟಕದಲ್ಲಿ ಅ#ನಾ#ವೃಷ್ಟಿಯಾದಾಗ ಜನರಿಗೆ ಸಹಾಯ ಮಾಡಿದ್ದರು. ಕರೊನಾ ಸಂಕಷ್ಟದ ಸಮಯದಲ್ಲಿ ಸಹ ಆಸ್ಪತ್ರೆಗಳಿಗೆ ಬೇಕಾದ ಸಲಕರಣೆಗಳು, ಪಿಪಿಇ ಕಿಟ್ ಗಳು ಎಲ್ಲವನ್ನು ಒದಗಿಸಿದ್ದರು ಸುಧಾ ಮೂರ್ತಿ.

ಹಲವಾರು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡಿದ್ದಾರೆ. ಹಲವಾರು ಮಕ್ಕಳ ವಿದ್ಯಾಭ್ಯಾಸಕ್ಕೂ ಸಹ ಸಹಾಯ ಮಾಡಿದ್ದಾರೆ ಸುಧಾ ಮೂರ್ತಿ. ಅನೇಕ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿದ್ದಾರೆ. ಇದೀಗ ಜಮಖಂಡಿ ತಾಲೂಕಿನ ಮತ್ತೊಬ್ಬ ವಿದ್ಯಾರ್ಥಿಗ ಬದುಕಿಗೆ ಸುಧಾಮೂರ್ತಿ ಅವರು ಸಹಾಯ ಮಾಡಲಿದ್ದಾರೆ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ಬಾಲಕನ ವಿದ್ಯಾಭ್ಯಾಸಕ್ಕೆ ನೆರವಾಗಲಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸವಲಗಿ ಗ್ರಾಮದಲ್ಲಿ ವಾಸ ಮಾಡುತ್ತಿರುವ ರೈತರೊಬ್ಬನರ ಮಗ ಸಂಜು ಎಂಬ ಬಾಲಕ SSLC ಪರೀಕ್ಷೆಯಲ್ಲಿ 625ಕ್ಕೆ 617 ಅಂಕ ಗಳಿಸಿದ್ದಾನೆ. ಆರ್ಥಿಕ ಸಂಕಷ್ಟದಲ್ಲಿ ಇರುವ ಈ ಬಾಲಕನ ಮುಂದಿನ ಮೂರು ವರ್ಷದ ವಿದ್ಯಾಭ್ಯಾಸಕ್ಕೆ ಬೇಕಾಗುವ ಖರ್ಚುನ್ನು ಇನ್ಫೋಸಿಸ್ ಸಂಸ್ಥೆಯ ಸುಧಾ ಮೂರ್ತಿ ಅವರು ಭರಿಸುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಜೊತೆಗೆ ಜಮಖಂಡಿಯ ಮತ್ತಿಬ್ಬರು ವಿದ್ಯಾರ್ಥಿಗಳಿಗು ಸಹ ಸಹಾಯ ಮಾಡಲಿದ್ದಾರೆ. ಕರ್ನಾಟಕದಲ್ಲಿ ಅತ್ಯಂತ ವಿಶಾಲವಾದ ಮಾತೃ ಹೃದಯವನ್ನು ಹೊಂದಿರುವ ವ್ಯಕ್ತಿ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕಿ ಸುಧಾಮೂರ್ತಿ ಅವರು. ಕರ್ನಾಟಕದಲ್ಲಿ ಎಲ್ಲಿ ಏನೇ ಕಷ್ಟದ ಪರಿಸ್ಥಿತಿ ಎದುರಾದರೂ ಸಹ ಮೊದಲು ಅದಕ್ಕೆ ಸ್ಪಂದಿಸುವುದು ಇನ್ಫೋಸಿಸ್ ಸಂಸ್ಥೆ. ಇತ್ತೀಚೆಗೆ ಭಾರಿ ಮಳೆಯಿಂದಾಗಿ ಕರ್ನಾಟಕದಲ್ಲಿ ಅನಾವೃಷ್ಟಿಯಾದಾಗ ಜನರಿಗೆ ಸಹಾಯ ಮಾಡಿದ್ದರು. ಕರೊನಾ ಸಂಕಷ್ಟದ ಸಮಯದಲ್ಲಿ ಸಹ ಆಸ್ಪತ್ರೆಗಳಿಗೆ ಬೇಕಾದ ಸಲಕರಣೆಗಳು, ಪಿಪಿಇ ಕಿಟ್ ಗಳು ಎಲ್ಲವನ್ನು ಒದಗಿಸಿದ್ದರು ಸುಧಾ ಮೂರ್ತಿ.

Trending

To Top