ಬೆಂಗಳೂರು: ಕನ್ನಡ ಸಿನಿರಂಗದ ಮೇರು ನಟ, ಸ್ಯಾಂಡಲ್‌ವುಡ್ ಬಾದ್‌ಷಾ ಎಂತಲೇ ಕರೆಯುವ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನೆಮಾ 3ಡಿ ರೂಪದಲ್ಲಿ ಬಿಡುಗಡೆಯಾಗಲಿದೆ. ಇನ್ನೂ ಈ ಸುದ್ದಿಯನ್ನು ಕಿಚ್ಚ ಸುದೀಪ್ ರವರೇ ಬಹಿರಂಗಗೊಳಿಸಿದ್ದಾರೆ.
ಇತ್ತೀಚಿಗಷ್ಟೆ ಸುದೀಪ್ ರವರು ಸಿನೆಮಾ ರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಾಗೂ ವಿಕ್ರಾಂತ್ ರೋಣ ಟೀಸರ್ ದುಬೈನ ಎತ್ತರದ ಕಟ್ಟಡವಾದ ಬುರ್ಜಾ ಖಲೀಫಾ ಮೇಲೆ ಬಿಡುಗಡೆಯಾಗಿ ಅಭಿಮಾನಿಗಳನ್ನು ಥ್ರಿಲ್ ಮಾಡಿದ್ದರು. ಇದೀಗ ತಮ್ಮ ಅಭಿಮಾನಿಗಳಿಗಾಗಿ ಮತ್ತೊಂದು ಗುಡ್‌ನ್ಯೂಸ್ ನೀಡಿದ್ದು, ವಿಕ್ರಾಂತ್ ರೋಣ ಚಿತ್ರ 3ಡಿ ರೂಪದಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನು ಸುದೀಪ್ ರವರೇ ಬಹಿರಂಗಗೊಳಿಸಿದ್ದಾರೆ.
ಇನ್ನೂ ಈ ಚಿತ್ರವನ್ನು ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದು, ವಿಕ್ರಾಂತ್ ರೋಣ 3ಡಿ ವರ್ಷನ್ ಬಿಡುಗಡೆಯಾಗಲಿದೆ. ಅದಕ್ಕೆ ಬೇಕಾದ ಕೆಲಸಗಳು ನಡೆಯುತ್ತಿದೆ ಎಂಬ ಮಾಹಿತಿಯನ್ನು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಹಿರಂಗಗೊಳಿಸಿದ್ದಾರೆ. ಇನ್ನೂ ೩ಡಿ ತಂತ್ರಜ್ಞಾನದ ಕನ್ನಡದ ಚಿತ್ರಗಳು ತೀರ ವಿರಳವಾಗಿದ್ದು, ಈ ಹಿಂದೆ ಅಂಬರೀಶ್ ಹಾಗೂ ಉಪೇಂದ್ರ ನಟಿಸಿದ್ದ ಕಠಾರಿವೀರ ಸುರಸುಂದರಾಂಗ ಚಿತ್ರ ಹಾಗೂ ಮುನಿರತ್ನ ನಿರ್ಮಾಣದ ದರ್ಶನ್ ಸೇರಿದಂತೆ ಅನೇಕ ಕಲಾವಿದರ ಅಭಿನಯಿಸಿದ ಕುರುಕ್ಷೇತ್ರ ಚಿತ್ರಗಳು ೩ಡಿ ವರ್ಷನ್ ನಲ್ಲಿ ಬಿಡುಗಡೆಯಾಗಿತ್ತು. ಇದೀಗ ವಿಕ್ರಾಂತ್ ರೋಣ ಸಹ ೩ಡಿ ವರ್ಷನ್‌ನಲ್ಲಿ ಬಿಡುಗಡೆಯಾಗಲಿದೆ.
ಇನ್ನೂ ವಿಕ್ರಾಂತ್ ರೋಣ ಸಹ ಬಿಡುಗಡೆಗೆ ಸಿದ್ದವಾಗಿದ್ದು, 50ಕ್ಕೂ ಹೆಚ್ಚು ದೇಶಗಳಲ್ಲಿ 6 ಭಾಷೆಗಳಲ್ಲಿ ತೆರೆಗೆ ಬರಲಿದೆ. ಈಗಾಗಲೇ ಸ್ಟಾರ್ ನಟರ ಸಿನೆಮಾಗಳು ಸಹ ಬಿಡುಗಡೆ ದಿನಾಂಕಗಳನ್ನು ಘೋಷಣೆ ಮಾಡಿದ್ದು, ವಿಕ್ರಾಂತ್ ರೋಣ ಆಗಸ್ಟ್ ಮಾಹೆಯ ನಂತರ ಬಿಡುಗಡೆಯಾಗಬಹುದು ಎನ್ನಲಾಗುತ್ತಿದೆ.
