Cinema

3 ವರ್ಷಗಳಿಂದ ವಿದ್ಯುತ್ ಇಲ್ಲದೆ ಕತ್ತಲಲ್ಲಿ ಬದುಕಿದ್ದ ವೃದ್ಧ ದಂಪತಿಗೆ ಬೆಳಕಾದ ಕಿಚ್ಚ! ವಿಡಿಯೋ ನೋಡಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಟ್ರಸ್ಟ್ ವತಿಯಿಂದ ಕಷ್ಟದಲ್ಲಿರುವ ಜನರಿಗೆ ನೆರವಾಗಿ ನಿಂತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಕಿಚ್ಚ ಸುದೀಪ್ ಅವರ ಟ್ರಸ್ಟ್ ವತಿಯಿಂದ ಆಹಾರವಿಲ್ಲದೆ ಕಷ್ಟ ಪಡುತ್ತಿರುವ ಜನರಿಗೆ ಮತ್ತು ಮೂಕ ಪ್ರಾಣಿಗಳಿಗೆ ಪ್ರತಿದಿನ ಆಹಾರ ಒದಗಿಸಲಾಗಿತ್ತು. ಕೆಲ ದಿನಗಳ ಹಿಂದೆ, ಕಷ್ಟದಲ್ಲಿದ್ದ ಶಾಲಾ ಮಗುವನ್ನು ದತ್ತು ಪಡೆದು ಆಕೆಯ ಸ್ಕೂಲ್ ಫೀಸ್ ಅನ್ನು ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪಾವತಿಸಲಾಗಿತ್ತು. ಕಿಡ್ನಿ ಸಮಸ್ಯೆ ಹೊಂದಿದ್ದ ಆಶಾ ಕಾರ್ಯಕರ್ತೆಯೊಬ್ಬರ ಮಗನ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ಭರಿಸಿತ್ತು. ಸ್ಕ್ರಾಲ್ ಡೌನ್ ಮಾಡಿ ಕೆಳಗಿನ ವಿಡಿಯೋ ನೋಡಿ
ಚಿತ್ರದುರ್ಗದಲ್ಲಿ ನಾಲ್ಕು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದರು ಹಾಗೂ ಇತ್ತೀಚೆಗೆ ಪಿ.ಯು.ಸಿಯಲ್ಲಿ ಉತ್ತಮ ಅಂಕ ಗಳಿಸಿದ್ದ ವಿದ್ಯಾರ್ಥಿನಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ್ದರು. ಇದೀಗ ಸುದೀಪ್ ಅವರ ಕಿಚ್ಚ ಸುದೀಪ್ ಟ್ರಸ್ಟ್ ವತಿಯಿಂದ ಕಷ್ಟದಲ್ಲಿದ್ದ ಮತ್ತೊಂದು ಕುಟುಂಬಕ್ಕೆ ಸಹಾಯ ಆಗಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ವಾಸಿಸುತ್ತಿರುವ ವೃದ್ಧ ದಂಪತಿಗಳು, ಮೂರು ವರ್ಷದ ಹಿಂದೆ ಮನೆ ಕಟ್ಟಿಸಿಕೊಂಡಿದ್ದರು. ಆದರೆ ಬಡತನದ ಕಾರಣ, ಮನೆಗೆ ಎಲೆಕ್ಟ್ರಿಸಿಟಿ ಕನೆಕ್ಷನ್ ಕೊಡಿಸಲು ಅವರಿಂದ ಸಾಧ್ಯವಾಗಿರಲಿಲ್ಲ. ಹಾಗಾಗಿ, ಮೂರು ವರ್ಷಗಳಿಂದ ಈ ವೃದ್ಧ ದಂಪತಿ ತಮ್ಮ ವಿಕಲಚೇತನ ಮೊಮ್ಮಗನೊಂದಿಗೆ ಕತ್ತಲಲ್ಲೇ ಜೀವನ ನಡೆಸುತ್ತಿದ್ದರು. ಈ ಕೆಳಗಿನ ವಿಡಿಯೋ ನೋಡಿ
ಈ ವಿಷಯ ತಿಳಿದ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ಸಂಸ್ಥೆ, ಕೂಡಲೇ ವೃದ್ಧ ದಂಪತಿಗಳ ಮನೆಗೆ ತೆರಳಿ, ಅವರ ಕಷ್ಟವನ್ನು ಕೇಳಿಸಿಕೊಂಡು. ಅವರ ಮನೆಗೆ ಎಲೆಕ್ಟ್ರಿಸಿಟಿ ಕನೆಕ್ಷನ್ ಕೊಡಿಸಿದ್ದಾರೆ. ಅದಕ್ಕೆ ಬೇಕಾದ ಅನುಮತಿಯನ್ನು ಸಹ ತಾವೇ ತೆಗೆದುಕೊಂಡು ಬಂದಿದ್ದಾರೆ. ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊನೆಗೂ ವೃದ್ಧರ ಬದುಕಿಗೆ ಬೆಳಕು ಮೂಡಿದೆ. ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಹಾಗೂ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ನವರು ಸಾಮಾಜಿಕ ಜಾಲತಾಣಗಳಲ್ಲಿ ವೃದ್ಧ ದಂಪತಿಗೆ ಸಹಾಯ ಮಾಡಿರುವುದರ ಬಗ್ಗೆ ವಿಡಿಯೋ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಸುದೀಪ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ ವೃದ್ಧ ದಂಪತಿ.

Trending

To Top