BBK8

ಕಿಚ್ಚ ಸುದೀಪ್ ಅವರಿಗೆ ಅನಾರೋಗ್ಯ ! ಈ ವಾರ ವೀಕೆಂಡ್ ಎಪಿಸೋಡ್ ನಿರೂಪಣೆ ಮಾಡೋರು ಯಾರು ?

ಬಿಗ್ ಬಾಸ್ 8ರ 7ನೇ ವಾರ ತುಂಬಾ ಅಸಕ್ತಿದಾಯಕವಾಗಿದೆ,ಇದೇ ವೇಳೆ ಕಿಚ್ಚ ಸುದೀಪ್ ಅವರ ಕಡೆಯಿಂದ ಬೇಸರದ ಸುದ್ಧಿ ಕೇಳಿಬರುತ್ತಿದೆ.7ನೇ ವಾರ ಬಿಗ್ ಬಾಸ್ ಗೆ ಕಿಚ್ಚ ಸುದೀಪ್ ಅವರು ಬಿರುವುದಿಲ್ಲ ಎಂದು ಕೇಳಿಬಂದಿದೆ.ಪ್ರತಿವಾರವು ವಾರದ ಕಥೆ ಕಿಚ್ಚನ ಜೊತೆ ಮತ್ತು ಸೂಪರ್ ಸಂಡೇ ವಿಥ್ ಸುದೀಪ್ ಕಾರ್ಯಕ್ರಮ ಇರುತ್ತದೆ. ಆದರೆ ಸುದೀಪ್ ಅವರ ಅನಾರೋಗ್ಯದ ಕಾರಣ ಅವರು ರೆಸ್ಟ್ ಮಾಡಬೇಕಾದ ಕಾರಣದಿಂದ ಈ ಬಾರಿ ಅವರು ಬಾಗ್ ಬಾಸ್ ಗೆ ಬರುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ.

ಹೊಸ ನಿರೂಪಕರನ್ನ ಕರೆತರುವ ಯೋಚನೆ ಮಾಡುತ್ತಿದ್ದಾರೆ.ಅರೋಗ್ಯದಲ್ಲಿ ಸಣ್ಣ ಸಮಸ್ಯೆ ಉಂಟಾಗಿರುವ ಕಾರಣ ಸುದೀಪ್ ಅವರು ಈ ವಾರ ಬಿಗ್ ಬಾಸ್ ನಿರೂಪಣೆ ಮಾಡಲು ಸಾಧ್ಯವಾಗುತ್ತಿಲ್ಲ.ಸುದೀಪ್ ಅವರಿಗೆ ಏನಾಗಿದೆ ಎನ್ನುವ ಖಚಿತ ಮಾಹಿತಿ ಯಾರಿಗೂ ಸಹ ತಿಳಿಸುತ್ತಿಲ್ಲ.

ಬಿಗ್ ಬಾಸ್ 7ನೇ ವಾರಕ್ಕೆ ಕಾಲಿತಿದ್ದು ಇನ್ನೇನು ವೀಕೆಂಡ್ ಕೂಡ ಬರುತ್ತಿದೆ.ಈ ವಾರ ಮನೆಯಿಂದ ಹೊರಹೋಗಲು 8 ಸ್ಪರ್ದಿಗಳು ನಾಮಿನೇಟ್ ಆಗಿದ್ದಾರೆ.8 ಸ್ಪರ್ದಿಗಳ ಪೈಕಿ ಕಿಚ್ಚ ಸುದೀಪ್ ಅವರು ಯಾರನ್ನ ಮನೆಯಿಂದ ಹೊರಹಾಕುತ್ತಾರೆ ಎಂಬ ಮಾಹಿತಿಯನ್ನು ತಿಳಿಯಲು ಅಭಿಮಾನಿಗಳು ಕಾಯುತ್ತಿದ್ದರು.ಆದರೆ ಅವರ ಅನಾರೋಗ್ಯದ ಕಾರಣ ನಿರೂಪಣೆ ಮದು ಸಾಧ್ಯವಾಗುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ.

Trending

To Top