Cinema

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜೊತೆ ಸಕತ್ ಸ್ಟೆಪ್ ಹಾಕಲಿದ್ದಾರಾ ಸನ್ನಿ ಲಿಯೋನ್!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಸಿನಿಮಾಗಳ ಬಗ್ಗೆ ಹೆಚ್ಚಾಗಿ ಹೇಳಬೇಕಿಲ್ಲ. ಅವರ ಸಿನಿಮಾ ಎಂದರೆ ದೇಶಾದ್ಯಂತ ಅಭಿಮಾನಿಗಳು ಕಾಯುತ್ತಿರುತ್ತಾರೆ. ತಮ್ಮ ಅಭಿನಯ ಚಾತುರ್ಯತೆಯನ್ನು ನಟ ಸುದೀಪ್ ಎಲ್ಲಾ ಭಾಷೆಗಳಲ್ಲೂ ನಿರೂಪಿಸಿದ್ದಾರೆ. ಹಾಗಾಗಿಯೇ ಸುದೀಪ್ ಅವರ ನಟನೆಗೆ ಮತ್ತು ಅವರ ಸ್ಟೈಲ್ ಗೆ ಕರ್ನಾಟಕದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿ ಮತ್ತು ಹೊರದೇಶಗಳಲ್ಲಿ ಸಹ ಅಭಿಮಾನಿಗಳು ಇದ್ದಾರೆ. ರಿಲೀಸ್ ಗೆ ರೆಡಿ ಇರುವ ಕಿಚ್ಚ ಸುದೀಪ್ ಅವರ ಸಿನಿಮಾ ಕೋಟಿಗೊಬ್ಬ3, ಇದು ಕನ್ನಡದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. 2015ರಲ್ಲಿ ತೆರೆಕಂಡ ಕೋಟಿಗೊಬ್ಬ2 ಸಿನಿಮಾದ ಸೀಕ್ವೆಲ್ ಇದಾಗಿದ್ದು. ಕೋಟಿಗೊಬ್ಬ3 ಸಿನಿಮಾವನ್ನು ಶಿವಕಾರ್ತಿಕ್ ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ಬಹುಭಾಷಾ ನಟಿ ಮಡೋನಾ ಸೆಬಾಸ್ಟಿನ್ ನಾಯಕಿ, ರವಿಶಂಕರ್ ಸೇರಿದಂತೆ ಬಹುತಾರಾಗಣವಿರುವ ಸಿನಿಮಾ ಕೋಟಿಗೊಬ್ಬ3.

ಎಲ್ಲವೂ ಸರಿಯಾಗಿ ಇದ್ದಿದ್ದರೆ ಈಗಾಗಲೇ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕೋಟಿಗೊಬ್ಬ3 ಬಿಡುಗಡೆ ಆಗಬೇಕಿತ್ತು. ಆದರೆ ಕರೊನಾ ಮಹಾ#ಮಾ#ರಿ#ಯ ಕಾರಣದಿಂದಾಗಿ ಕೋಟಿಗೊಬ್ಬ3 ಮುಂದಕ್ಕೆ ಹೋಗಿದೆ. ಈಗಾಗಲೇ ಕೋಟಿಗೊಬ್ಬ3 ತಂಡದಿಂದ ಒಂದು ಟೀಸರ್, ಒಂದು ಹಾಡು ಮತ್ತು ಕೆಲವು ಪೋಸ್ಟರ್ ಗಳು ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡಿತ್ತು. ಸುದೀಪ್ ಅಭಿಮಾನಿಗಳು ಟೀಸರ್ ಮತ್ತು ಸಾಂಗ್ ರಿಲೀಸ್ ಸಂದರ್ಭಗಳಲ್ಲಿ ಟ್ವಿಟರ್ ಟ್ರೆಂಡ್ ಮಾಡಿದ್ದರು. ಈಗ ಒಂದೆರಡು ದಿನಗಳ ಹಿಂದೆ ಕೋಟಿಗೊಬ್ಬ3 ಸಿನಿಮಾ ನಿರ್ಮಾಪಕರಾದ ಸೂರಪ್ಪ ಬಾಬು ಅವರ ಹುಟ್ಟುಹಬ್ಬದ ಪ್ರಯುಕ್ತ ಕೋಟಿಗೊಬ್ಬ3 ಸಿನಿಮಾದ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿತ್ತು. ಇನ್ನು ಈ ಸಿನಿಮಾ ಯಾವಾಗ ಬಿಡುಗಡೆ ಆಗುತ್ತದೆ ಎಂದು, ಸುದೀಪ್ ಅವರ ಅಭಿಮಾನಿಗಳು ಕಾಯುತ್ತಲಿದ್ದಾರೆ.

ಇದೀಗ ಕೋಟಿಗೊಬ್ಬ 3 ಸಿನಿಮಾ ಬಗ್ಗೆ ಮತ್ತೊಂದು ಸುದ್ದಿಯೊಂದು ಹರಿದಾಡ್ತಿದೆ, ಅದೇನೆಂದರೆ ಕೋಟಿಗೊಬ್ಬ3 ಸಿನಿಮಾದ ಸ್ಪೆಷಲ್ ಹಾಡೊಂದರಲ್ಲಿ ಬಾಲಿವುಡ್ ನ ಹಾ#ಟ್ ಬ್ಯೂ#ಟಿ ಸನ್ನಿ ಲಿಯೋನ್ ಹೆಜ್ಜೆ ಹಾಕುತ್ತಾರೆ ಎಂದು. ಈ ಹಿಂದೆ ಲ#ವ್ ಯೂ ಆಲಿಯಾ ಸಿನಿಮಾ ಹಾಡು ಮತ್ತು ನಿರ್ದೇಶಕ ಪ್ರೇಮ್ ಅವರ ಸಿನಿಮಾದಲ್ಲಿ ಸನ್ನಿ ಲಿಯೋನ್ ಹೆಜ್ಜೆ ಹಾಕಿದ್ದರು. ಇದೀಗ ಕೋಟಿಗೊಬ್ಬ3 ಸಿನಿಮಾದ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎಂದು ಸುದ್ದಿಗಳು ಹರಿದಾಡುತ್ತಿವೆ. ಆದರೆ ಇದರ ಕುರಿತು ಮಾಹಿತಿ ನೀಡಿರುವ ಕೋಟಿಗೊಬ್ಬ3 ಸಿನಿಮಾ ನಿರ್ಮಾಪಕರಾದ ಸೂರಪ್ಪ ಬಾಬು ಅವರು. ಈ ವಿಷಯ ನಿಜವಲ್ಲ, ಸಧ್ಯಕ್ಕೆ ಸನ್ನಿ ಲಿಯೋನ್ ಹಾಡಿನಲ್ಲಿ ಕಾಣಿಸಿಕೊಳ್ಳುವ ಯಾವು#ದೇ ಪ್ಲಾ#ನ್ ಇಲ್ಲ. ಅಂತಹ ಯಾವುದಾದರೂ ವಿಷಯ ಇದ್ದರೆ, ಅಧಿಕೃತವಾಗಿಯೇ ತಿಳಿಸುತ್ತೇನೆ ಎಂದಿದ್ದಾರೆ.

Trending

To Top