Film News

ದುಬೈನಲ್ಲಿ ರಿಲೀಸ್ ಆಗಲಿದೆ ಫ್ಯಾಂಟಮ್ ಟೀಸರ್!

ಬೆಂಗಳೂರು: ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನೆಮಾಗಳಲ್ಲಿ ಒಂದಾದ ಫ್ಯಾಂಟಮ್ ಸಿನೆಮಾ ಈಗಾಗಲೇ ಭಾರಿ ಕುತೂಹಲ ಹುಟ್ಟಿಸಿದೆ. ಸಿನೆಮಾದ ಹಲವು ಚಿತ್ರೀಕರಣದ ಸೆಟ್ ಗಳು ಭಾರಿ ನಿರೀಕ್ಷೆ ಹುಟ್ಟಿಸಿದೆ.

ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಅಭಿನಯಿಸುತ್ತಿರುವ ಫ್ಯಾಂಟಮ್ ಚಿತ್ರದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದ್ದು, ಅಂತಿಮ ಚಿತ್ರೀಕರಣ ಬಾಕಿಯಿದ್ದು, ಕೇರಳದಲ್ಲಿ ಅಂತಿಮ ಹಂತದ ಶೂಟಿಂಗ್ ನಡೆಯುತ್ತಿದೆ. ಇನ್ನೂ ಈ ಚಿತ್ರದ ಪ್ರಚಾರವನ್ನು ಭಾರಿ ಮಟ್ಟದಲ್ಲಿ ಮಾಡುವ ಯೋಚನೆಯಲ್ಲಿದ್ದು, ಇದರ ಭಾಗವಾಗಿಯೇ ಸಿನೆಮಾದ ಟೀಸರ್ ಬಿಡುಗಡೆಯನ್ನು ದುಬೈನಲ್ಲಿ ಅದ್ದೂರಿಯಾಗಿ ಮಾಡಲು ಚಿತ್ರತಂಡ ಸಿದ್ದತೆ ನಡೆಸುತ್ತಿದೆ ಎನ್ನಲಾಗಿದೆ.

ದುಬೈನಲ್ಲಿರುವ ಬುರ್ಜ್ ಖಲೀಫಾ ಎಂಬ ಹೋಟಲ್ ವಿಶ್ವದ ದುಬಾರಿ ಹಾಗೂ ಐಶಾರಾಮಿ ಹೋಟಲ್ ಗಳಲ್ಲಿ ಒಂದಾಗಿದೆ. ಇದೇ ಹೋಟೆಲ್ ನಲ್ಲಿಯೇ ವರ್ಲ್ಟ್ ಆಫ್ ಫ್ಯಾಂಟಮ್ ಚಿತ್ರದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ ಎನ್ನಲಾಗಿದೆ. ಈ ಮಟ್ಟದಲ್ಲಿ ಚಿತ್ರದ ಟೀಸರ್ ಬಿಡುಗಡೆ ಮಾಡಲು ಮತ್ತೊಂದು ಮುಖ್ಯ ಕಾರಣವೆಂದರೇ ಸುದೀಪ್ ರವರು ಸಿನಿರಂಗಕ್ಕೆ ಕಾಲಿಟ್ಟು ಜನವರಿ ಮಾಹೆಗೆ ೨೫ ವರ್ಷವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಸಂಭ್ರಮವನ್ನು ಟೀಸರ್ ರಿಲೀಸ್ ಜೊತೆಗೆ ಅದ್ದೂರಿಯಾಗಿ ಆಚರಿಸಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ.

Trending

To Top