ದೇಶದಲ್ಲಿ ಅನ್ ಲಾಕ್ ಶುರುವಾಗಿ, ನಿಯಮಗಳ ಪ್ರಕಾರ ಸಿನಿಮಾ ಹಾಗೂ ಧಾರಾವಾಹಿಗಳ ಶೂಟಿಂಗ್ ಆರಂಭ ಮಾಡಬಹುದು ಎಂದು ಸರ್ಕಾರ ಅನುಮತಿ ನೀಡಿದ ನಂತರ ಹಲವಾರು ಸಿನಿಮಾಗಳ ಶೂಟಿಂಗ್ ಆರಂಭವಾಗಿತ್ತು. ಅದರಲ್ಲಿ ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಸಹ ಒಂದು. ಅನ್ ಲಾಕ್ ಶುರುವಾದ ಬಳಿಕ, ಫ್ಯಾಂಟಮ್ ಚಿತ್ರಕ್ಕಾಗಿ ಹೈದರಾಬಾದ್ ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ ದೊಡ್ಡ ಸೆಟ್ ಗಳನ್ನು ತಯಾರಿಸಲಾಗಿತ್ತು.
ಹೈದರಾಬಾದ್ ಗೆ ತೆರಳಿದ ಫ್ಯಾಂಟಮ್ ತಂಡ , ಸಿನಿಮಾ ಚಿತ್ರೀಕರಣವನ್ನು ಯಾವುದೇ ಅಡೆತಡೆ ಇಲ್ಲದೆ ನಡೆಸುತ್ತಿದ್ದಾರೆ. ಸುಮಾರು ದಿನಗಳಿಂದ ಇಡೀ ಫ್ಯಾಂಟಮ್ ತಂಡ ಹೈದರಾಬಾದ್ ನಲ್ಲೇ ಬೀಡು ಬಿಟ್ಟಿದೆ. ಸಿನಿಮಾ ಶೂಟಿಂಗ್ ನಡುವಿನ ಸಮಯದಲ್ಲೇ ಆಂಧ್ರ ಪ್ರದೇಶದ ಜನಸೇನ ಪಕ್ಷದ ಅಧ್ಯಕ್ಷ ಹೆಸರಾಂತ ನಟ ಪವನ್ ಕಲ್ಯಾಣ್ ರನ್ನು ಭೇಟಿಯಾಗಿದ್ದಾರೆ ಕಿಚ್ಚ ಸುದೀಪ್.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. “ಸರಳ ವ್ಯಕ್ತಿತ್ವ ಇರುವ ವ್ಯಕ್ತಿಯನ್ನು ಭೇಟಿ ಮಾಡಿದೆ. ವಂಡರ್ಫುಲ್ ಇಂಟರಾಕ್ಟಿಂಗ್ ವಿತ್ ಯು ಸರ್..” ಎಂದು ಕ್ಯಾಪ್ಶನ್ ನೀಡಿ ಫೋಟೋ ಪೋಸ್ಟ್ ಮಾಡಿದ್ದಾರೆ ಸುದೀಪ್. ಪವನ್ ಕಲ್ಯಾಣ್ ರ ಪಕ್ಷದ ಕಚೇರಿಗೆ ನಟ ಸುದೀಪ್ ಭೇಟಿ ನೀಡಿದ್ದು, ಬಹಳಷ್ಟು ಸಮಯ ಇಬ್ಬರು ನಟರು ಚರ್ಚೆ ಮಾಡಿದ್ದಾರೆ. ಆದರೆ ಈ ಭೇಟಿಗೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.
ಕಿಚ್ಚ ಸುದೀಪ್ ಪವನ್ ಕಲ್ಯಾಣ್ ರನ್ನು ಏಕೆ ಭೇಟಿ ಮಾಡಿದರು ಎಂದು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಫ್ಯಾಂಟಮ್ ಶೂಟಿಂಗ್ ಸಮಯದ ಬಿಡುವಿನ ವೇಳೆಯಲ್ಲಿ ಪವನ್ ಕಲ್ಯಾಣ್ ರನ್ನು ಭೇಟಿ ಮಾಡಿದ್ದಾರೆ ಸುದೀಪ್. ಈ ಫೋಟೋವನ್ನು ಸುದೀಪ್ ಪೋಸ್ಟ್ ಮಾಡುವ ಮೊದಲೇ ಇಬ್ಬರು ನಟರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈ’ರಲ್ ಆಗಿತ್ತು. ದೇಶದಲ್ಲಿ ಅನ್ ಲಾಕ್ ಶುರುವಾಗಿ, ನಿಯಮಗಳ ಪ್ರಕಾರ ಸಿನಿಮಾ ಹಾಗೂ ಧಾರಾವಾಹಿಗಳ ಶೂಟಿಂಗ್ ಆರಂಭ ಮಾಡಬಹುದು ಎಂದು ಸರ್ಕಾರ ಅನುಮತಿ ನೀಡಿದ ನಂತರ ಹಲವಾರು ಸಿನಿಮಾಗಳ ಶೂಟಿಂಗ್ ಆರಂಭವಾಗಿತ್ತು. ಅದರಲ್ಲಿ ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಸಹ ಒಂದು. ಅನ್ ಲಾಕ್ ಶುರುವಾದ ಬಳಿಕ, ಫ್ಯಾಂಟಮ್ ಚಿತ್ರಕ್ಕಾಗಿ ಹೈದರಾಬಾದ್ ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ ದೊಡ್ಡ ಸೆಟ್ ಗಳನ್ನು ತಯಾರಿಸಲಾಗಿತ್ತು.
