Film News

ಸುದೀಪ್ ಅವರ ಆರೋಗ್ಯದ ಬಗ್ಗೆ ಜ್ಯಾಕ್ ಮಂಜು ಅವರು ಹೇಳೋದೇನು?

ನಟ ಕಿಚ್ಚ ಸುದೀಪ್ ಅವರು ನೆನ್ನೆ ತಮ್ಮ ಸಾಮಾಜಿಕ ಜಾಲತಾಣಗದಲ್ಲಿ ಬರೆದು ಕೊಂಡಿದ್ದರು.ಅದರಲ್ಲಿ ತಮಗೆ ಅನಾರೋಗ್ಯ ಇರುವ ಬಗ್ಗೆ ಹೇಳಿಕೊಂಡಿದ್ದರು, ಇದನ್ನು ನೋಡಿದ ಎಲ್ಲರೂ ಸುದೀಪ್ ಅವರಿಗೆ ಕೊರೋನ ಪಾಸಿಟಿವ್ ಇರಬಹುದು ಎಂದು ಭಾವಿಸಿದ್ದರು.ಆದರೆ ಇದೀಗ ಮ್ಯಾನೇಜರ್ ಜಾಕ್ ಮಂಜು ಅವರು ಕಿಚ್ಚ ಸುದೀಪ್ ಬಗ್ಗೆ ಕೊಂಚ ಮಾಹಿತಿಯನ್ನು ಕೊಟ್ಟಿದ್ದಾರೆ.

ಸುದೀಪ್ ಗೆ ಕೊರೋನ ಸೋಂಕು ದೃಢ ಪಟ್ಟಿಲ್ಲ ಅವರ ಮ್ಯಾನೇಜರ್ ಜಾಕ್ ಮಂಜು ಅವರು ಇದೀಗ ಸ್ಪಷ್ಟಣೆ ನೀಡಿದ್ದಾರೆ.ಸುದೀಪ್ ಅವರ ಆರೋಗ್ಯದ ಬಗ್ಗೆ ಟ್ವೀಟ್ ಮಾಡಿದ್ದರು.ನನಗೆ ಅನಾರೋಗ್ಯ ಕಾಡುತ್ತಿದೆ ಈ ವಾರಂತಕ್ಕೆ ಗುಣಮುಖನಾಗುವ ನಿರೀಕ್ಷೆ ಇದೆ, ಆದರೆ ವೈದ್ಯರ ಸೂಚನೆಯಂತೆ ನಾನು ಕೆಲದಿನ ರೆಸ್ಟ್ ಮಾಡುತ್ತಿದ್ದೇನೆ, ಈಗಾಗಿ ನಾನು ಈ ವಾರದ ಬಿಗ್ ಬಾಸ್ ಮಿಸ್ ಮಾಡಿಕೊಳ್ಳುತ್ತಿದ್ದೇನೆ, ಈ ವಾರದ ಎಲಿಮಿನೇಷನ್ ಗೆ ಯಾವ ಪ್ಲಾನ್ ಮೂಲಕ ತಂಡ ಬರುತ್ತಿದೆ ಎನ್ನುವ ಕುತೂಹಲ ನನಗೂ ಇದೆ.

ಈ ಟ್ವೀಟ್ ಸಾಕಷ್ಟು ಕುತೂಹಲ ಸೃಷ್ಟಿಮಾಡಿತ್ತು.ಸುದೀಪ್ ಅವರಿಗೆ ಕೊರೋನ ಬಂದಿದೆ ಎಂದು ಎಲ್ಲರೂ ಭಾವಿಸಿದರು.ಈ ಬಗ್ಗೆ ಸುದೀಪ್ ಅವರ ಮ್ಯಾನೇಜರ್ ಜಾಕ್ ಮಂಜು ಅವರು ಸ್ಪಷ್ಟನೆ ನೀಡಿದ್ದು ಸುದೀಪ್ ಅವರಿಗೆ ಕೊರೋನ ಪಾಸಿಟಿವ್ ಇರುವ ವಿಚಾರ ದೃಢಪಟ್ಟಿಲ್ಲ, ಜ್ವರ ಇನ್ನಲೆ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.ಈ ಮೂಲಕ ಅವರು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

Trending

To Top