Cinema

ಸೌತ್ ಆಫ್ರಿಕಾದ ಕ್ರಿಕೆಟ್ ಆಟಗಾರ ಗಿಬ್ಬ್ಸ್ ನಮ್ಮ ಸುದೀಪ್ ಅವರಿಗೆ ಶಹಬಾಸ್ ಎಂದಿದ್ದಾರೆ! ಕಾರಣ ಏನು ನೋಡಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಸಿನಿಮಾಗಳ ಬಗ್ಗೆ ಹೆಚ್ಚಾಗಿ ಹೇಳಬೇಕಿಲ್ಲ. ಅವರ ಸಿನಿಮಾ ಎಂದರೆ ದೇಶಾದ್ಯಂತ ಅಭಿಮಾನಿಗಳು ಕಾಯುತ್ತಿರುತ್ತಾರೆ. ತಮ್ಮ ಅಭಿನಯ ಚಾತುರ್ಯತೆಯನ್ನು ನಟ ಸುದೀಪ್ ಎಲ್ಲಾ ಭಾಷೆಗಳಲ್ಲೂ ನಿರೂಪಿಸಿದ್ದಾರೆ.ಹಾಗಾಗಿಯೇ ಸುದೀಪ್ ಅವರ ನಟನೆಗೆ ಮತ್ತು ಅವರ ಸ್ಟೈಲ್ ಗೆ ಕರ್ನಾಟಕದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿ ಮತ್ತು ಹೊರದೇಶಗಳಲ್ಲಿ ಸಹ ಅಭಿಮಾನಿಗಳು ಇದ್ದಾರೆ. ಇನ್ನು ಕಿಚ್ಚ ಸುದೀಪ್ ಅವರ ಸಿನಿಮಾ ಬಿಡುಗಡೆಯಾದರೆ ಥಿಯೇಟರ್ ಮುಂದೆ ಅಭಿಮಾನಿಗಳು ಹಬ್ಬ ಮಾಡುತ್ತಾರೆ. ಕಟೌಟ್ ಗೆ ಹೂವಿನ ಹಾರ ಹಾಕಿ, ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸುತ್ತಾರೆ.
ಎಲ್ಲವೂ ಸರಿಯಾಗಿ ಇದ್ದಿದ್ದರೆ ಈಗಾಗಲೇ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕೋಟಿಗೊಬ್ಬ3 ಬಿಡುಗಡೆ ಆಗಬೇಕಿತ್ತು. ಆದರೆ ಕರೊನಾ ಮಹಾಮಾಹಿಯ ಕಾರಣದಿಂದಾಗಿ ಕೋಟಿಗೊಬ್ಬ3 ಬಿಡುಗಡೆ ಹಾಗೂ ಕನ್ನಡದ ಬೇರೆ ಸಿನಿಮಾಗಳ ಬಿಡುಗಡೆ ಸಹ ಮುಂದಕ್ಕೆ ಹೋಗಿದೆ. ಈಗಾಗಲೇ ಕೋಟಿಗೊಬ್ಬ3 ತಂಡದಿಂದ ಒಂದು ಟೀಸರ್, ಒಂದು ಹಾಡು ಮತ್ತು ಕೆಲವು ಪೋಸ್ಟರ್ ಗಳು ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡಿತ್ತು. ಸುದೀಪ್ ಅಭಿಮಾನಿಗಳು ಟೀಸರ್ ಮತ್ತು ಸಾಂಗ್ ರಿಲೀಸ್ ಸಂದರ್ಭಗಳಲ್ಲಿ ಟ್ವಿಟರ್ ಟ್ರೆಂಡ್ ಮಾಡಿದ್ದರು. ಈಗ ಒಂದೆರಡು ದಿನಗಳ ಹಿಂದೆ ಕೋಟಿಗೊಬ್ಬ3 ಸಿನಿಮಾ ನಿರ್ಮಾಪಕರಾದ ಸೂರಪ್ಪ ಬಾಬು ಅವರ ಹುಟ್ಟುಹಬ್ಬದ ಪ್ರಯುಕ್ತ ಕೋಟಿಗೊಬ್ಬ3 ಸಿನಿಮಾದ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿತ್ತು. ಇನ್ನು ಈ ಸಿನಿಮಾ ಯಾವಾಗ ಬಿಡುಗಡೆ ಆಗುತ್ತದೆ ಎಂದು, ಸುದೀಪ್ ಅವರ ಅಭಿಮಾನಿಗಳು ಕಾಯುತ್ತಲಿದ್ದಾರೆ.
ಕೋಟಿಗೊಬ್ಬ3 ಸಿನಿಮಾಗಾಗಿ ಕರ್ನಾಟಕ ಅಥವಾ ಭಾರತದ ಅಭಿಮಾನಿಗಳು ಮಾತ್ರವಲ್ಲ ಸುದೀಪ್ ಅವರ ಹೊರದೇಶದ ಸ್ನೇಹಿತರೊಬ್ಬರು ಸಹ ಕಾಯುತ್ತಿದ್ದಾರೆ. ಅವರು ಮತ್ಯಾರು ಅಲ್ಲ ದಕ್ಷಿಣ ಭಾರತದ ಮಾಜಿ ಕ್ರಿಕೆಟಿಗ ಸ್ಫೋಟಕ ಬ್ಯಾಟ್ಸ್ಮನ್ ಹರ್ಷಲ್ ಗಿಬ್ಸ್. ಸೂರಪ್ಪ ಬಾಬು ಅವರ ಹುಟ್ಟುಹಬ್ಬದಂದು ಬಿಡುಗಡೆಯಾದ ಕೋಟಿಗೊಬ್ಬ3 ಸಿನಿಮಾ ಪೋಸ್ಟರ್ ಅನ್ನು ನಟ ಸುದೀಪ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಸುದೀಪ್ ಅವರ ಈ ಪೋಸ್ಟ್ ಅನ್ನು ಹರ್ಷಲ್ ಗಿಬ್ಸ್ ಅವರು ಲೈಕ್ ಮಾಡಿದ್ದು, ಜೊತೆಗೆ “ಶಹಬ್ಬಾಶ್” ಎನ್ನುವ ಎಮೋಜಿಯನ್ನು ಕಮೆಂಟ್ ನಲ್ಲಿ ಹಾಕಿದ್ದಾರೆ. ಈ ಮೂಲಕ ತಾವು ಸಹ ಕೋಟಿಗೊಬ್ಬ3 ಸಿನಿಮಗಾಗಿ ಕಾಯುತ್ತಿರುವುದನ್ನು ತಿಳಿಸಿದ್ದಾರೆ.

Trending

To Top